ತಂಬಾಕು, ಗುಟ್ಕಾ ಹಾಗೂ ಪಾನ್​ ಮಸಾಲ ಸೇವನೆಯನ್ನು ನಿಷೇಧಿಸಿದ ತೆಲಂಗಾಣ ಸರ್ಕಾರ.

Telangana: ಜನರ ಆರೋಗ್ಯದ ಹಿತದೃಷ್ಟಿಯಿಂದ ತೆಲಂಗಾಣ ಸರ್ಕಾರ (Telangana Government)ವು ರಾಜ್ಯದಲ್ಲಿ ತಂಬಾಕು (Tobacco)  ಮತ್ತು ನಿಕೋಟಿನ್ ( Nicotine) ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಈ ಹೊಸ ನಿಯಮವನ್ನು ಮೇ 24, 2024 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನಿಷೇಧವನ್ನು ವಿಧಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ.

Telangana Government

ನಿಕೋಟಿನ್ ಸೇವನೆ ಆರೋಗ್ಯಕ್ಕೆ ಮಾರಕ ಮಾತ್ರವಲ್ಲದೆ ಯುವ ಜನತೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರಣದಿಂದ ಆಹಾರ ಸುರಕ್ಷತಾ ಆಯುಕ್ತರ ಆದೇಶದ ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006ರ ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ. ಗುಟ್ಕಾ ಹಾಗೂ ಪಾನ್​ ಮಸಾಲ ಸೇವನೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಉತ್ಪನ್ನಗಳು ಸಾಮಾನ್ಯವಾಗಿ ಕ್ಯಾನ್ಸರ್​, ಬಾಯಿಯ ಸಬ್​ಮ್ಯೂಕಸ್​ ಫೈಬ್ರೋಸಿಸ್ (Submucous Fibrosis) ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿರುವದರಿಂದ ತೆಲಂಗಾಣ ಸರ್ಕಾರ ನಿಕೋಟಿನ್ ಸೇವನೆ ನಿಷೇಧಿಸಿದೆ.

ಮೊದಲಿನಿಂದಲೂ ತೆಲಂಗಾಣ (Telangana) ಸರ್ಕಾರ ನಿಕೋಟಿನ್ ಯುಕ್ತ ವಸ್ತುಗಳ ಬಳಕೆಗೆ ಸಮರ ಸಾರುತ್ತಲೆ ಇತ್ತು. ಈ ಹಿಂದೆ 2014ರಲ್ಲಿ ತೆಲಂಗಾಣ ಸ್ಥಾಪನೆಯಾದ ನಂತರ ರಾಜ್ಯದಲ್ಲಿ ಗುಟ್ಖಾ ನಿಷೇಧಿಸಲಾಗಿತ್ತು. ನವೆಂಬರ್ 2021 ರಲ್ಲಿ, ತೆಲಂಗಾಣ ಹೈಕೋರ್ಟ್ ನಿಷೇಧವನ್ನು ಎತ್ತಿ ಹಿಡಿದಿತ್ತು. ನಿಷೇಧವನ್ನು ಗುಟ್ಖಾ ತಯಾರಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು, ಹಾಗಾಗಿ ಮಾರ್ಚ್ (March) 2022ರಲ್ಲಿ ನಿಷೇಧವನ್ನು ಹಿಂಪಡೆದಿತ್ತು. 2023ರ ಜನವರಿಯಲ್ಲಿ ಗುಟ್ಖಾ ನಿಷೇಧಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ (Supreme Court) ಇದಕ್ಕೂ ನಿಷೇಧ ಹೇರಿತ್ತು. ಹೀಗಿರುವಾಗ ಹೊಸ ನಿಷೇಧ ತೆಲಂಗಾಣದಲ್ಲಿ ಯಾವ ರೀತಿ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version