ತುಳಸಿ ಪೂಜೆಗಿದೆ ವೈಜ್ಞಾನಿಕ ನೆಲೆಗಟ್ಟು

ಸಸ್ಯಗಳಲ್ಲೇ ಶ್ರೇಷ್ಠ ಸಸ್ಯ ತುಳಸಿ ಗಿಡ.  ಇದು ಪೌರಾಣಿಕವಾಗಿಯೂ ವೈಜ್ಞಾನಿಕವಾಗಿಯೂ ಶ್ರೇಷ್ಟತೆಯನ್ನು ಪಡೆದಿದೆ.  ಯಾಕೆಂದರೆ ತುಳಸಿಯನ್ನು ದೇವಿಯ  ರೂಪದಲ್ಲಿಯೂ ಪೂಜಿಸಲಾಗುತ್ತದೆ .ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ.. ಎಲ್ಲಾ ಶುಭ ಸಮಾರಂಭಗಳಿಗೂ ತುಳಸಿ ಬೇಕೇ ಬೇಕು.  ಸಂಸ್ಕೃತ ಭಾಷೆಯಲ್ಲಿ ಇದಕ್ಕೆ ತುಲನ ನಸ್ತಿ ಎಂಬ ಹೆಸರಿದೆ. ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿಗಿಡವಾಗಿದೆ.   ದೇವೀ ರೂಪದಲ್ಲಿ ದೇವರಂತೆಯೇ ತುಳಸಿ ಗಿಡಕ್ಕೂ ನಿತ್ಯ ಪೂಜೆ ಮಾಡುತ್ತಾರೆ. ವಿಶೇಷ ದಿನಗಳಲ್ಲಿ ತುಪ್ಪದ ದೀಪ ಹಚ್ಚಿ ತುಳಸಿಗೆ ಸುತ್ತು ಬರುವುದರೊಂದಿಗೆ ಪೂಜಿಸಲಾಗುತ್ತದೆ.

ಭಕ್ತಿಯಿಂದ ದೀಪ, ಊದುಬತ್ತಿ ಹಚ್ಚಿ ತುಳಸಿ ಗಿಡಕ್ಕೆ ಪೂಜೆ ಮಾಡುವುದಲ್ಲದೆ ಮದುವೆ ಮಾಡುವ ಆಚರಣೆಯೂ ಇದೆ. ತುಳಸಿಯನ್ನು ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿನ ಮಡದಿಯೆಂದೂ ಅವರಿಬ್ಬರಿಗೆ ನಡೆಯುವ ವಿವಾಹವನ್ನು ತುಳಸಿ ವಿವಾಹ ಎಂದು ಕರೆಯುತ್ತಾರೆ. ತುಳಸಿ ಗಿಡಕ್ಕೆ . ಪ್ರತಿವರ್ಷ ದೀಪಾವಳಿ ಹಬ್ಬ ಮುಗಿದ ಬಳಿಕ 12ನೇ ದಿನದಂದು ಆಚರಿಸುವ ಹಬ್ಬವೇ ತುಳಸೀಪೂಜೆ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ.   ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದ ಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ವಿಷ್ಣು ಮದುವೆಯಾದನು ಎಂಬ ಪ್ರತೀತಿಯಿದೆ.

ತುಳಸಿ ಹಬ್ಬದಂದು ನೆಲ್ಲಿ ಕಾಯಿಯ ಗಿಡವನ್ನಿಟ್ಟು ಶ್ರೀಕ್ರಷ್ಣ ಹಾಗೂ ರಾಮನ ಪೊಟೋಗಳನ್ನು ಇಟ್ಟುಕೊಂಡು ತುಳಸಿ ಹಾಗೂ ವಿಷ್ಣುವಿನ ಮದುವೆ ಮಾಡಲಾಗುವದು ಇದೆಲ್ಲ ನಂಬಿಕೆಯಾದರೆ
 ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದ ದೀಪದಿಂದ ಗಿಡದ ಸುತ್ತ ಅಲಂಕರಿಸಲಾಗುತ್ತದೆ. ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬಂದಾವನವೆಂದು ಹೆಸರು.. ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ.

 ತುಳಸಿ ಗಿಡ  ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಹೌದು. ತುಳಸಿ ದರ್ಶನದಿಂದ ಪಾಪ ಪರಿಹಾರ,  ರೋಗ ಪರಿಹಾರ, ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.  ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ಬೆಳೆಸುತ್ತಾರೆ.

ಇನ್ನು ತುಳಸಿ ಗಿಡವನ್ನು ವೈಜ್ಞಾನಿಕವಾಗಿ ನೋಡುವುದಾದರೆ ಇದು ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಕ್ಯಾನ್ಸರ್ ರೋಗವನ್ನು ನಿವಾರಣೆ ಮಾಡುವಲ್ಲಿ ಆಯುರ್ವೇದ ಔಷಧಿಯಲ್ಲಿ ಬಳಕೆಯಾಗುತ್ತದೆ. ತುಳಸಿ ಗಿಡದ ತೋಟದಲ್ಲಿ ನಿತ್ಯ ನಡೆದಾಡಿ ತುಳಸಿಯಿಂದ ಬೀಸುವ ಗಾಳಿಯನ್ನು ಸೇವನೆ ಮಾಡುವುದರಿಂದಲೂ ನಮ್ಮ ದೇಹ ಶುದ್ದವಾಗಿ ಶ್ವಾಸಕೋಶವು ಆರೋಗ್ಯಯುತವಾಗುವುದು ಹಾಗೂ  ಕ್ಯಾನ್ಸರ್ ರೋಗದ ಲಕ್ಷಣವಿದ್ದರೆ ಅದನ್ನು ದೂರ ಮಾಡುವುದು. ದಿನ ನಿತ್ಯ ಕಾಡುವಂತಹ  ಅನೇಕ ರೋಗಗಳಿಗೆ ದಿವ್ಯ ಔಷಧಿಯಾಗಿ ಇದು ಉಪಯೋಗವಾಗಿದೆ.

Exit mobile version