ಮಾಜಿ ಪ್ರಧಾನಿ ದೇವೇಗೌಡರಿದ್ದ ವೇದಿಕೆ ಮೇಲೆ ʼಕೈʼ ಕಾರ್ಯಕರ್ತೆಯರಿಂದ ಭಾರೀ ಹೈಡ್ರಾಮಾ..!

Tumakuru: ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಾಜಿ (Tumkur Politics News) ಪ್ರಧಾನಿ ಎಚ್.ಡಿ.ದೇವೇಗೌಡರಿದ್ದ (H.D Devegowda) ವೇದಿಕೆ ಮೇಲೆ

ಕಾಂಗ್ರೆಸ್ ಕಾರ್ಯಕರ್ತೆಯರು ಭಾರೀ ಹೈಡ್ರಾಮಾ (Tumkur Politics News) ಸೃಷ್ಟಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಕುಂಚಿಟಿಗರ ಸಭಾಭವನದಲ್ಲಿ ಜೆಡಿಎಸ್ (JDS) ಹಾಗೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾದ ವಿ.ಸೋಮಣ್ಣ ಪರ ದೇವೇಗೌಡರು ಮತಯಾಚನೆಗೆ ಆಗಮಿಸಿದ್ದರು. ಈ ವೇಳೆ ಕೆಲ

ಕಾಂಗ್ರೆಸ್ ಕಾರ್ಯಕರ್ತೆಯರು ಮಾಜಿ ಪ್ರಧಾನಿ ದೇವೇಗೌಡರಿದ್ದ ವೇದಿಕೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಗೊಂದಲ ಸೃಷ್ಟಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

(H.D.Kumaraswamy) ಹಾಗೂ ದೇವೇಗೌಡರ ವಿರುದ್ಧ ಘೋಷಣೆ ಕೂಗಿ ಹೈಡ್ರಾಮಾ ಸೃಷ್ಟಿಸಿದರು.

ಇದರಿಂದ ಸಮಾವೇಶದಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತೆಯರನ್ನ ವಶಕ್ಕೆ ಪಡೆದರು. ಇನ್ನು ಮಾಜಿ ಮುಖ್ಯಮಂತ್ರಿ

ಎಚ್.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ (Guarantee) ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತೆಯರು

ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಘೋಷಣೆ ಕೂಗಿದರು ಎನ್ನಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್ ನಾಯಕರು, ಈ ರೀತಿ ಗೊಂದಲ ಸೃಷ್ಟಿಸುವುದು

ಉತ್ತಮ ನಡೆಯಲ್ಲ. ಇದರಿಂದ ರಾಜಕೀಯ ಸಂಘರ್ಷ ಆರಂಭವಾಗುತ್ತದೆ.

ಕಾಂಗ್ರೆಸ್ (Congress) ನಾಯಕರು ತಮ್ಮ ಕಾರ್ಯಕರ್ತೆಯರಿಗೆ ಸರಿಯಾಗಿ ಬುದ್ದಿ ಹೇಳಬೇಕು. ಮಾಜಿ ಪ್ರಧಾನಿಗಳಿರುವ ವೇದಿಕೆ ಮೇಲೆ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದಿರುವುದು

ದುರಂತವೇ ಸರಿ. ಈ ರೀತಿಯ ಘಟನೆಗಳು ಹೀಗೆ ಮುಂದುವರೆದರೆ, ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಮೋದಿ ಪರ ಹಾಡು ರಚಿಸಿದ್ದಕ್ಕೆ ಮತಾಂಧ ಯುವಕರಿಂದ ಹಲ್ಲೆ

Exit mobile version