ಉತ್ತರಕಾಶಿ ಸುರಂಗ ಕುಸಿತ ಪ್ರಕರಣ: ಸಾವು ಗೆದ್ದು ಬಂದ 41 ಕಾರ್ಮಿಕರು, ಮೋದಿ ಅಭಿನಂದನೆ

Dehli: ಉತ್ತರಾಖಂಡ್ ರಾಜ್ಯದ ಉತ್ತರಕಾಶಿ (Uttarkashi) ಬಳಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗವೊಂದು ಕುಸಿದ ಕಾರಣ ಹದಿನೇಳು ದಿನಗಳ ಕಾಲ ಅವಶೇಷಗಳ ನಡುವೆ ಸಿಲುಕಿ ಸಾವು ಬದುಕಿನೊಂದಿಗೆ ಹೋರಾಡಿ ಸತತ ಕಾರ್ಯಾಚರಣೆ ನಂತರ ನಿನ್ನೆ ತಡರಾತ್ರಿ ಹೊರಬಂದ 41 ಕಾರ್ಮಿಕರ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಮಾತಾಡಿ ಅವರನ್ನು ಅಭಿನಂದಿಸುವುದಲ್ಲದೆ, ಅವರ ದೈರ್ಯ ಸಾಹಸಗಳನ್ನು ಕೊಂಡಾಡಿದರು.

ಸಾವನ್ನು ಗೆದ್ದು ಬಂದ ಕಾರ್ಮಿಕರ ಪರವಾಗಿ ಮಾತಾಡಿದ ಬಿಹಾರದ (Bihar) ಛಾಪ್ರಾ ಜಿಲ್ಲೆಯ ಸೋನು ಕುಮಾರ್ ಅವರು ಸಹ ತಮ್ಮನ್ನು ಕಾಪಾಡಿದ ಎಲ್ಲರಿಗೆ ಧನ್ಯವಾದ ಹೇಳಿ, ಭೂಮಿಯ ಗರ್ಭದಲ್ಲಿ ಹೇಗೆ 17 ದಿನಗಳನ್ನು ಹೇಗೆ ಕಳೆದರು ಅನ್ನೋದನ್ನು ಪ್ರಧಾನಿ ಮೋದಿಯವರಿಗೆ ವಿವರಿಸಿದರು.

ಎಲ್ಲಾ ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿದೆ ಎಂದು ಹೇಳಲಾಗಿದ್ದು, ಪೈಪ್ ಮೂಲಕ ಸೋಮವಾರ ಅವರಿಗೆ ಬ್ಯಾಟ್ ಹಾಗೂ ಚೆಂಡನ್ನು ಕಳುಹಿಸಲಾಗಿತ್ತು. ಒಳಗೆ ಅವರು ಕ್ರಿಕೆಟ್ (Cricket) ಆಡಿದ್ದು, ಲವಲವಿಕೆಯಿಂದ ಇರುವುದಾಗಿ ದೊರವಾಣಿ ಮೂಲಕ ತಿಳಿಸಿದ್ದರು. ಆದರೂ ಅವರನ್ನು ಹೊರಗೆ ತರಲು ಸ್ಟ್ರೆಚರ್‌ಗಳನ್ನು ಸಿದ್ಧವಾಗಿ ಇರಿಸಲಾಗಿತ್ತು. ಸುರಂಗದಲ್ಲಿಯೇ ತುರ್ತು ಚಿಕಿತ್ಸೆಗಾಗಿ ಎಂಟು ಹಾಸಿಗೆಗಳನ್ನು ಇರಿಸಲಾಗಿತ್ತು. ಸಾವನ್ನು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿ, ಸ್ವಾಗತಿಸಲು ಹಾರ ತುರಾಯಿಗಳನ್ನು ತರಿಸಲಾಗಿತ್ತು.

ಅವಶೇಷಗಳ ನಡುವೆ ಸಾಗಿಸಿದ್ದ ಪೈಪ್ ಮೂಲಕ ಮೊದಲ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಉಳಿದವರು ಕೂಡ ಶೀಘ್ರವೇ ಹೊರ ಜಗತ್ತನ್ನು ಮತ್ತೆ ನೋಡಲಿದ್ದಾರೆ. ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಚಿಕ್ಕ ಜಾಗದಲ್ಲಿ, ಕುಟುಂಬದವರಿಂದ ದೂರವಿದ್ದು, ಆತಂಕದಲ್ಲಿಯೇ 17 ದಿನಗಳನ್ನು ಕಳೆದ ಕಾರ್ಮಿಕರ (Employees) ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಂಡಿರುವುದು ತುಂಬಾ ಆಶ್ಚರ್ಯ ವಿಷಯವಾಗಿದೆ.

ರಕ್ಷಿಸಲಾದ ಕಾರ್ಮಿಕರನ್ನು ಮೊದಲು ಆರೋಗ್ಯ ಕೇಂದ್ರಕ್ಕೆ ದಲ್ಲಿ ಆರೋಗ್ಯದ ಪರೀಕ್ಷೆಗೆ ಒಳಒಪಡಿಸಿ ಅವರೆಲ್ಲರಿಗೂ ಎಲ್ಲಾ ರೀತಿಯ ತುರ್ತು ಆರೋಗ್ಯ ಸೇವೆ ಒಳಪಡಿಸಿ ಅಗತ್ಯ ಔಷಧ ಹಾಗೂ ಉಪಕರಣಗಳನ್ನು ಕೂಡ ನೀಡಿ ಅಲ್ಲಿ ಯಾವುದೇ ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದರೆ ಅವರನ್ನು ಉತ್ತರಾಖಂಡ (Uttarakhand) ಜಿಲ್ಲಾ ಆಸ್ಪತ್ರೆಗೆ ರವಾನಿಸುವುದು ಅಥವಾ ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ರಿಷಿಕೇಶದಲ್ಲಿನ ಏಮ್ಸ್ ಆಸ್ಪತ್ರೆಗೆ (AIIMS Hospital) ಕರೆದೊಯ್ಯವುದಾಗಿ ತಯಾರಿಮಾಡಿಕೊಂಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಮೋದಿಯವರು, ನೀವು ತೋರಿದ ಶೌರ್ಯ ಅಪ್ರತಿಮವಾದದ್ದು, ಸಂಕಟ ಸಮಯದಲ್ಲಿ ಎದೆಗುಂದದೆ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕೆನ್ನುವುದಕ್ಕೆ ಒಂದ ದೊಡ್ಡ ನಿದರ್ಶನವನ್ನು ದೇಶಕ್ಕೆ ನೀಡಿದ್ದೀರಿ. ದೇಶದ ಪ್ರತಿಯೊಬ್ಬ ವ್ಯಕ್ತಿ ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದ. ನಿಮ್ಮ ಪರಿವಾರಗಳ ಪ್ರಾರ್ಥನೆ, ಪರಮಾತ್ಮನ ಕೃಪೆ ಮತ್ತು ದಯೆ ಹಾಗೂ 140 ಕೋಟಿ ಭಾರತೀಯರ ಶುಭಹಾರೈಕೆಗಳಿಂದ ನೀವು ಕ್ಷೇಮವಾಗಿ ಹೊರಬಂದಿದ್ದೀರಿ ಎಂದು ಹೇಳಿದರು. ಕಾರ್ಮಿಕರೊಂದಿಗೆ ಮಾತು ಮುಗಿದ ಬಳಿಕ ಎಲ್ಲರೂ ಭಾರತ್ ಮಾತಾ ಕೀ ಜೈ (Bharat Mata Ki Jai) ಎಂದು ಒಕ್ಕೊರಲಿನಿಂದ ಕೂಗಿದರು.

ಮೇಘಾ ಮನೋಹರ ಕಂಪು

Exit mobile version