ಹಾಲಿಗೆ ಅರಿಶಿನ ಹಾಕಿ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು???

ಪುರಾತನ ಕಾಲದಿಂದಲೂ ಅರಿಶಿನಕ್ಕೆ ಮಹತ್ವವಾದ  ಸ್ಥಾನವಿದೆ.ನಮ್ಮ ದೈನಂದಿನ ಜೀವನದಲ್ಲಿ ಬಹುಮುಖ್ಯ ಆಹಾರ ಪದಾರ್ಥಗಳಲ್ಲಿ ಅರಿಶಿನ ಕೂಡ ಒಂದಾಗಿದೆ.ಇದು ಪ್ರತಿಯೊಂದು ಭಾರತೀಯ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಹಾಲಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿರುತ್ತವೆ. ಕೆಲವರು ಹಾಲನ್ನು ಹಾಗೇ ಕುಡಿದರೆ ಇನ್ನು ಕೆಲವರು ಹಾಲನ್ನು ಇತರ ಹಣ್ಣುಗಳ ಜೊತೆ ಅಥವಾ ಇನ್ನಿತರ ಆಹಾರಪದಾರ್ಥಗಳ ಜೊತೆ ಮಿಶ್ರಣ ಮಾಡಿ ಸೇವಿಸುತ್ತಾರೆ. ಅರಿಶಿನದ ಹಾಲು ಸೇವಿಸುವುದರಿಂದ ನಾವು ಸಾಮಾನ್ಯ ಕಾಯಿಲೆ ಅಥವಾ ನೋವಿನಿಂದ ಪರಿಹಾರ ಪಡೆಯಬಹುದು. ಉಗುರು ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಅರಿಶಿನ ಹಾಲನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ದೊರೆಯುತ್ತೆ ಎಂದು ತಿಳಿಯೋಣ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಿಶಿನ ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಅರಿಶಿನದಲ್ಲಿರುವ ‘ ಕರ್ಕ್ಯುಮಿನ್ ‘ ಅಂಶ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆಇದು ಅನೇಕ ರೋಗಗಳಿಂದ ರಕ್ಷಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್‌ ರೋಗಿಗಳಿಗೆ ರಾಮಬಾಣ

ಅರಿಶಿನ ಹಾಲು ಕ್ಯಾನ್ಸರ್ ರೋಗಿಗಳಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ವಸ್ತು ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸಲು ಸಾಕಷ್ಟು ಸಹಾಯ ಮಾಡುತ್ತದೆ.

ಒಳ್ಳೆಯ ನಿದ್ರೆ ಮಾಡಲು ಸಹಕಾರಿಯಾಗಿದೆ

ನಿತ್ಯ ಮಲಗುವ ಮುನ್ನ ಅರಿಶಿನ ಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಅರಿಶಿನದಲ್ಲಿ ಇರುವ ಅಮೈನೋ ಆಮ್ಲಗಳು ಉತ್ತಮ ನಿದ್ರೆ ಪಡೆಯಲು ಪರಿಣಾಮಕಾರಿ. ನಿಮಗೆ ನಿದ್ರಾಹೀನತೆಯ ಸಮಸ್ಯೆ ಇದ್ದರೆ ಅರಿಶಿನ ಹಾಲು ಕುಡಿಯಲು ಪ್ರಾರಂಭಿಸಿ.ಇದು ತುಂಬಾ ಪರಿಣಾಮಕಾರಿಯಾಗಿರುತ್ತದೆ.

ದೀರ್ಘ ಕಾಲದಿಂದ ಬಳಲುತ್ತಿರುವ ಮಧುಮೇಹ, ಹೃದಯದ ತೊಂದರೆ ಅಥವಾ ಕೀಲು ನೋವು, ಮೂಳೆಗಳ ನೋವು, ಮಾಂಸ ಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳು ಅರಿಶಿನ ಮಿಶ್ರಿತ ಹಾಲಿನಿಂದ ಪರಿಹಾರವಾಗುತ್ತವೆ.
ಶೀತ ಕೆಮ್ಮಿಗೆ ರಾಮಬಾಣವಾಗಿದೆ

ಅರಿಶಿನ ಹಾಲು ಕುಡಿಯುವುದು ಬದಲಾಗುತ್ತಿರುವ ಋತುವಿನಲ್ಲಿ ಹೆಚ್ಚು ಪ್ರಯೋಜನಕಾರಿ, ಏಕೆಂದರೆ ಇದು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಶೀತ ಮತ್ತು ಕೆಮ್ಮಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೋಯುತ್ತಿರುವ ಗಂಟಲು ಮತ್ತು ಜ್ವರವನ್ನು ನಿವಾರಣೆ ಮಾಡುತ್ತದೆ.

Exit mobile version