Tamil nadu: ತಮಿಳುನಾಡು (Tamilnadu) ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ (udayanidhi viral statement) ಸಭೆಯೊಂದರಲ್ಲಿ ಮಾತಾನಾಡ್ತಾ ಸನಾತನ
ಧರ್ಮವನ್ನ ವಿಮರ್ಶೆ ಮಾಡಲು ಹೋಗಿ ವಿವಿವಾದಾತ್ಮಕ ಹೇಳಿಕೆಯೊಂದನ್ನ ಕೊಟ್ಟು ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಸನಾತನ ಧರ್ಮವು ಡೆಂಗ್ಯೂ (Dengue), ಮಲೇರಿಯಾ
ಇದ್ದಂತೆ ಎಂದು ಹೇಳಿದರು. ಉದಯನಿಧಿಯವರ ಸನಾತನ ಧರ್ಮದ ಕುರಿತ ಹೇಳಿಕೆಗೆ ಭಾರೀ (udayanidhi viral statement) ಆಕ್ರೋಶ ವ್ಯಕ್ತವಾಗುತ್ತಿದೆ.

ಪೇಜಾವರ ಮಠದ ಶ್ರೀಗಳಿಂದ ಖಂಡನೆ
ಈ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು (Shree Vishwaprasanna Thirtha Swami) ಮೈಸೂರಿನಲ್ಲಿ ಮಾತನಾಡಿ, ‘ಸನಾತನ’ ಎಂದರೇ ಸದಾ ಕಾಲವೂ
ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ಅಂತಹ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಮನೋಪ್ರವೃತ್ತಿ ಸರಿಯಲ್ಲ,
ಅದನ್ನು ಖಂಡಿಸುತ್ತೇವೆ ಎಂದು ಶ್ರೀಗಳು ಹೇಳಿದರು.
ಇನ್ನು ಮಾಜಿ ಬಿಜೆಪಿ ಸಚಿವ ಈಶ್ವರಪ್ಪ (Eshwarappa) ಸ್ಟಾಲಿನ್ಗೆ ತಾಖತ್ತಿದ್ದರೆ ಮುಸ್ಲಿಮರ ವಿರುದ್ಧ ಮಾತನಾಡಲಿ ನೋಡೋಣ ಎಂದು ಸವಾಲೆಸೆದಿದ್ದಾರೆ. ಇನ್ನು ತಮಿಳುನಾಡು ಬಿಜೆಪಿ (BJP)
ಮುಖಂಡ ಅಣ್ಣಾಮಲೈ ಕೂಡ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದೇಶಾದ್ಯಂತ ತನ್ನ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾದ್ರು ಕೂಡ ಉದಯ್ ನಿಧಿ ತಮ್ಮ ನಿಲುವಿನಲ್ಲಿ ವ್ಯತ್ಯಾಸವಿಲ್ಲ
ಎಂದು ಹೇಳಿ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ. “ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ನಾನು ಎಂದಿಗೂ ಕರೆ ನೀಡಿಲ್ಲ . ಸನಾತನ ಧರ್ಮವು ಜಾತಿ ಮತ್ತು ಧರ್ಮದ
ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮವನ್ನು ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯುತ್ತದೆ” ಎಂದಿದ್ದರು.

ನಾನು ಮಾತನಾಡುವ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ. ಸನಾತನ ಧರ್ಮದಿಂದ ಬಳಲುತ್ತಿರುವ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವವರ ಪರವಾಗಿ ಮಾತನಾಡಿದ್ದೇನೆ”
ಎಂದು ಉದಯನಿಧಿ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ. ಮಗನ ಹೇಳಿಕೆಗೆ ಸಿಎಂ ಸ್ಟಾಲಿನ್ ಪ್ರಕ್ರಯಿಸಿದ್ದು, ಧರ್ಮವನ್ನ ತಮ್ಮ ನ್ಯೂನತೆಗಳನ್ನು ಮರೆಮಾಚುವ ಆಯುಧದಂತೆ ಬಳಕೆ ಮಾಡಲಾಗುತ್ತಿದೆ
ಎಂದು ಬಿಜೆಪಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ.
ಉದಯ್ ನಿಧಿ ಪರ ಪ್ರಕಾಶ್ ರಾಜ್
ಉದಯ್ ನಿಧಿ ವಿರುದ್ದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ,ಉದಯ್ ನಿಧಿ ಪರ ನಟ ಪ್ರಕಾಶ್ ರಾಜ್ (Prakash Raj) ಬ್ಯಾಟಿಂಗ್ ಮಾಡಿದ್ದಾರೆ. ಹಿಂದೂಗಳು ಸನಾತನಿಗಳಲ್ಲ ಎಂದು ಟ್ವೀಟ್ ಮಾಡಿ
ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ರವರಿಗೆ ಕಾಂಗ್ರೆಸ್
ಅಂತರ ಕಾಯ್ದುಕೊಂಡಿದೆ.ಕಾಂಗ್ರೆಸ್ ನಾಯಕರು ನಮ್ಮದು ಸರ್ವ ಧರ್ಮ ಸಮಭಾವ ಸಿದ್ಧಾಂತ,ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ದೃಷ್ಟಿಕೋನ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (K.C Venugopal), ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಈ ಹೇಳಿಕೆಗೆ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದ್ದು.ಅದೇ
ರೀತಿಯಾಗಿ ಈ ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರ ಅವರ ಚಿಂತನೆಗಳನ್ನು ಹೇಳಿಕೊಳ್ಳುವ ಮುಕ್ತ ಸ್ವಾತಂತ್ರ್ಯವಿದೆ. ಪ್ರತಿಯೊಬ್ಬರ ನಂಬಿಕೆಗೆ ನಾವು ಗೌರವಿಸುತ್ತೇವೆ ಎನ್ನುವುದರ ಮೂಲಕ ಕಾಂಗ್ರೆಸ್
(Congress) ತಟಸ್ಥ ಧೋರಣೆಯನ್ನು ತಳೆದಿದೆ.
ಇದನ್ನು ಓದಿ: ದ್ವೇಷದ ಜ್ವಾಲೆ ಎಲ್ಲೆಡೆ ಹರಡುತ್ತಾ ದೇಶದ ಹೆಸರಿಗೂ ಮುಟ್ಟಿರುವುದು ದೊಡ್ಡ ದುರಂತ: ನಟ ಕಿಶೋರ್