ಮೇ ನಲ್ಲಿ ನಡೆಯಬೇಕಿದ್ದ ಎಲ್ಲಾ ಆಫ್ ಲೈನ್ ಪರೀಕ್ಷೆಗಳನ್ನು ಮುಂದೂಡಿದ ಯುಜಿಸಿ

ನವದೆಹಲಿ, ಮೇ. 07: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಕಾರಣ ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲಾ ಆಫ್​ಲೈನ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲು ಯುನಿವರ್ಸಿಟಿ ಗ್ರಾಂಟ್ಸ್ ಕಮಿಶನ್ (ಯುಜಿಸಿ) ಆದೇಶಿಸಿದೆ. ಈ ಕುರಿತು ಎಲ್ಲ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿರುವ ಯುಜಿಸಿ ಮೇ ತಿಂಗಳಲ್ಲಿ ಯಾವುದೇ ಆಫ್​ಲೈನ್ ಪರೀಕ್ಷೆಗಳನ್ನೂ ನಡೆಸುವುದು ಬೇಡ. ಜೂನ್ ತಿಂಗಳಲ್ಲಿ ಸಭೆ ಸೇರಿ ಪರೀಕ್ಷೆ ನಡೆಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ಗುಂಪು ಸೇರುತ್ತಾರೆ. ಇದರಿಂದ ಕೊರೊನಾ ಸೋಂಕು ಮತ್ತಷ್ಟು ಉಲ್ಬಣವಾಗಲಿದೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಆಫ್​ಲೈನ್ ಪರೀಕ್ಷೆಗಳಿಗೂ ತಾತ್ಕಾಲಿಕ ತಡೆ ಒಡ್ಡಲಾಗಿದ್ದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಗಮನಿಸಿ ಜೂನ್ ತಿಂಗಳಲ್ಲಿ ಆಫ್​ಲೈನ್ ಪರೀಕ್ಷೆ ಕುರಿತು ತೀರ್ಮಾನಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.

Exit mobile version