ರಷ್ಯಾ ಯುದ್ಧ ದಾಳಿಗೆ ಉಕ್ರೇನ್‍ನ ಖ್ಯಾತ ನಟಿ ಸಾವು!

ukraine

ಇಡೀ ಜಗತ್ತಿಗೆ ರಷ್ಯಾ-ಉಕ್ರೇನ್(Russia-Ukraine) ಯುದ್ಧ(War) ಭೀತಿ ಬರಸಿಡಿಲನ್ನು ತಂದೊಡ್ಡಿದೆ. ಯುದ್ಧ ಆರಂಭಿಸಿ ಇಂದು 22 ದಿನಗಳು ಕಳೆದಿದ್ದು, ಈಗ 23ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಸಂಘರ್ಷ(Conflict) ಇಂದಲ್ಲಾ, ನಾಳೆ ಅಂತ್ಯ ಕಾಣಲಿದೆ ಎಂದರೂ, ಕಾಣಸಿಗದೆ ಭೀಕರವಾಗಿ ಮುಂದುವರಿಯುತ್ತಿದೆ. ಸದ್ಯ ಉಕ್ರೇನ್ ಮೇಲೆ ರಷ್ಯಾ ನಡೆಸಿದ ರಾಕೇಟ್ ದಾಳಿಗೆ ಖ್ಯಾತ(Popular) ನಟಿಯೊಬ್ಬರು(Actress) ಸಾವನಪ್ಪಿದ್ದಾರೆ.

ಹೌದು, ಒಕ್ಸಾನಾ ಶೇಟ್ಸನ್(Oksana Shvets) ಅವರು ದಾಳಿಗೆ ಸಿಲುಕಿ ಸಾವನಪ್ಪಿದ ನಟಿ. 67 ವರ್ಷ ವಯಸ್ಸಿನವರಾಗಿದ್ದ ಒಕ್ಸಾನಾ ಶ್ವೇಟ್ಸ್, ಕೀವ್ ರೆಸಿಡೆನ್ಶಿಯಲ್ ಕಟ್ಟಡದ ಮೇಲಾದ ರಾಕೆಟ್ ದಾಳಿಯಲ್ಲಿ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಸುದ್ದಿ ಸ್ಥಳೀಯ ಮಾಧ್ಯಮಗಳು ಕೂಡಲೇ ವರದಿ ಮಾಡಿದೆ. ಒಕ್ಸಾನಾ ಅವರು ಅತ್ಯುತ್ತಮ ನಟಿಯಾಗಿ ಕಾಣಿಸಿಕೊಂಡಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಉಕ್ರೇನ್ ಸರ್ಕಾರದಿಂದ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ “ಉಕ್ರೇನ್ ಗೌರವಾನ್ವಿತ ಕಲಾವಿದೆ” ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.

ರಷ್ಯಾ ದಾಳಿಯನ್ನು ಖಂಡಿಸಿ ಮಾತನಾಡಿದ ಉಕ್ರೇನ್, ರಷ್ಯಾ ಪಡೆಗಳು ತೀವ್ರ ಒತ್ತಡಕ್ಕೆ ಸಿಲುಕಿ ಉಕ್ರೇನ್‍ನ ಜನವಸತಿ ಪ್ರದೇಶಗಳ ಮೇಲೆ ಗುರಿಯಿಟ್ಟು ಛಿದ್ರಗೊಳಿಸುತ್ತಿವೆ ಎಂದು ಆರೋಪ ಎಸಗಿದೆ. ರಷ್ಯಾ ನಡೆಸಿರುವ ದಾಳಿಯಲ್ಲಿ ಮರಿಯುಪೋಲ್‍ನಲ್ಲಿದ್ದ 1200ಕ್ಕೂ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ. ಈ ಘಟನೆಗಳು ರಕ್ತಪಾತವನ್ನು ಸೂಚಿಸುತ್ತಿದ್ದು, ಪ್ರತಿಯೊಬ್ಬರು ಕೈಮುಗಿದು ಸಾವು-ನೋವುಗಳು ಸಾಕು, ಯುದ್ಧವನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ.

Exit mobile version