ಪುಟಿನ್ ಪರಮಾಣು ನೀತಿಗೆ ಹೆದರಿತಾ ಉಕ್ರೇನ್ ಮತ್ತು ಮಿತ್ರ ರಾಷ್ಟ್ರಗಳು?

Vladimir putin

ಉಕ್ರೇನ್ ಹಾಗೂ ರಷ್ಯಾದ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಸದ್ಯಕ್ಕೆ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆದ್ರೆ ನಿನ್ನೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಒಂದು ಗುಡುಗು ಉಕ್ರೇನ್‌ ಹಾಗೂ ಮಿತ್ರರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಪುತಿನ್ ಅಣ್ವಸ್ತ್ರ ಬಳಕೆಯ ಕುರಿತು ಕೊಟ್ಟ ಒಂದು ಸಣ್ಣ ಕುರುಹು ಇಡೀ ವಿಶ್ವವನ್ನೇ ಕಂಗಾಲಾಗಿಸಿದೆ. ಯಾಕಂದ್ರೆ ರಷ್ಯಾ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಣ್ವಸ್ತ್ರ ಹೊಂದಿರುವ ರಾಷ್ಟ್ರವಾಗಿದೆ. ರಷ್ಯಾ ಉಕ್ರೇನ್‌ನ ತುಂಡು ಭೂಮಿ ಕಬಳಿಸಲು ಅಣು ಬಾಂಬ್ ಬೆದರಿಕೆ ಒಡ್ಡುತ್ತಿದೆಯಾ ಅಥವಾ ನಿಜವಾಗಿಯೂ ಅಣ್ವಸ್ತ್ರ ಬಳಕೆ ಮಾಡುತ್ತಾ ಅನ್ನೋ ಗೊಂದಲ ಇಡೀ ವಿಶ್ವವನ್ನೇ ಕಾಡುತ್ತಿದೆ.

  • ಉಕ್ರೇನ್ ಷರತ್ತುಗಳು : ರಷ್ಯಾ ಈ ಕೂಡಲೇ ತನ್ನ ಸೇನಾಪಡೆಯನ್ನು ಹಿಂಪಡೆಯಬೇಕು ಯುದ್ಧವಿರಾಮವನ್ನು ಘೋಷಣೆ ಮಾಡಬೇಕು. ಆಕ್ರಮಿಸಿರುವ ಕ್ರಿಮಿಯಾವನ್ನು ಮರಳಿ ಉಕ್ರೇನ್ ಗೆ ನೀಡಬೇಕು.
    ರಷ್ಯಾ ಹಾಗೂ ಉಕ್ರೇನ್‌ನ ಈ ಷರತ್ತುಗಳಿಗೆ ಒಪ್ಪದ ಕಾರಣ ಯುದ್ಧ ಮುಂದುವರೆದಿದೆ. ಈಗಾಗಲೇ ಉಕ್ರೇನ್‌ ನಾಗರೀಕರು ಶಸ್ತ್ರಾಸ್ತ್ರ ಹಿಡಿದು ರಣರಂಗಕ್ಕೇ ದುಮುಕಿಯಾಗಿದೆ. ಅಷ್ಟು ಮಾತ್ರವಲ್ಲ ಉಕ್ರೇನ್‌ ವಿದೇಶಿಯರಿಗೂ ತನ್ನ ರಣರಂಗಕ್ಕೆ ಆಹ್ವಾನ ನೀಡಿದೆ. ಯಾರು ಉಕ್ರೇನ್ ಪರ ಯುದ್ಧ ಮಾಡಲು ಇಚ್ಛಿಸುತ್ತಾರೋ ಅವರು ಉಕ್ರೇನ್ ಯುದ್ಧಭೂಮಿಯಲ್ಲಿ ಸೆಣಸಬಹುದು.
  • ಅಲ್ಲದೆ ಈಗ ಉಕ್ರೇನ್ ರಾಷ್ಟ್ರದೊಳಗೆ ಪ್ರವೇಶಿಸಬೇಕೆಂದ್ರೆ ವೀಸಾದ ಅವಶ್ಯಕತೆಯಿಲ್ಲ, ವೀಸಾ ರದ್ದು ಮಾಡಲಾಗಿದೆ. ಇದರಿಂದ ಉಕ್ರೇನ್ ತನ್ನ ಪರ ಯುದ್ಧ ಮಾಡಲು ಇಡೀ ವಿಶ್ವವನ್ನೇ ಆಹ್ವಾನಿಸಿರುವುದು ಸ್ಪಷ್ಟ. ಆದ್ರೆ ಅತಿ ಹೆಚ್ಚು ಅಣ್ವಸ್ತ್ರ ಹೊಂದಿದ ರಷ್ಯಾದೇಶವು ಅಣ್ವಸ್ತ್ರ ಬಳಕೆ ಮಾಡಿದರೆ ಅನ್ನೋ ಆತಂಕದಿಂದ ನ್ಯಾಟೊ (NATOನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಅಮೇರಿಕಾ ಹಾಗೂ ಉಕ್ರೇನ್ ನ ಮಿತ್ರ ರಾಷ್ಟ್ರಗಳು ದೂರ ಉಳಿಯ ತೊಡಗಿವೆ.


ದುರಂತ ಅಂದ್ರೆ ವಿಶ್ವದ ಅತೀ ಹೆಚ್ಚು ಅಣ್ವಸ್ತ್ರ ಹೊಂದಿರುವ ರಷ್ಯಾದ ಜೊತೆಗೆ ಯುದ್ಧ ಮಾಡುತ್ತಿರುವ ಉಕ್ರೇನ್ ಬಳಿ ಒಂದೂ ಅಣ್ವಸ್ತ್ರ ಇಲ್ಲ. ಉಕ್ರೇನ್ ಶಾಂತಿ ಪ್ರಿಯ ರಾಷ್ಟ್ರ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದೇ ಆದ್ರೆ ಅದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ ಹಾಗಾಗುತ್ತೆ. ಆದ್ರೂ ರಷ್ಯಾ ತನ್ನ ಹಠ ಬಿಡದೆ ಅಣ್ವಸ್ತ್ರ ಪ್ರಯೋಗಕ್ಕೆ ಬಳಸೋ ಅತ್ಯಾಧುನಿಕ ಲಾಂಚರ್‌ಗಳನ್ನು ಗಡಿಯಲ್ಲಿ ಸ್ಥಾಪಿಸಲು ಪ್ರಾರಂಭಿಸಿದೆ. ಆ ಮಿಸೈಲ್‌ಗಳು ಎಷ್ಟೊಂದು ಶಕ್ತಿಶಾಲಿ ಅವು ಎಂಥಾ ಅನಾಹುತಗಳನ್ನು ಮಾಡಬಲ್ಲವು ಅನ್ನೋದನ್ನು ಒಮ್ಮೆ ನೋಡೋದಾದ್ರೆ.

ಕಿನೆಲ್‌ ಮಿಸೈಲ್‌ (KINJAL MISSILE) :
ಕಿನೆಲ್‌ ಮಿಸೈಲ್‌ ರಷ್ಯಾದ ಅತ್ಯುತ್ತಮ ಮಿಸೈಲ್ ಎಂದೇ ಕರೆಯಲ್ಪಡುತ್ತದೆ. ಹಿರೋಶಿಮಾ ಮೇಲೆ ದಾಳಿ ಮಾಡಿದ ಪರಮಾಣು ಬಾಂಬ್ ಗಿಂತಲೂ 33 ಪಟ್ಟು ಹೆಚ್ಚಿನ ವಿನಾಶಕಾರಿಯಾಗಿದೆ KINJAL MISSILE. ಈ ಮಿಸೈಲ್ NATO ರಾಷ್ಟ್ರಗಳ ಗಡಿಯಲ್ಲಿ ಪುಟಿನ್ ಆದೇಶಕ್ಕೆ ಕಾಯುತ್ತಿವೆ.


KINJAL MISSILE ಬಗ್ಗೆ ಹೇಳಬೇಕಾದರೆ ಇದು 3 ಕಿಲೋಮಿಟರ್ ಪ್ರತಿ ಸೆಕೆಂಡಿನ ವೇಗದಲ್ಲಿ 2000 ಸಾವಿರ ಕಿಲೋ ಮೀಟರ್ ಪ್ರದೇಶವನ್ನು ಸರ್ವನಾಶ ಮಾಡುವ ಶಕ್ತಿ ಹೊಂದಿರುತ್ತದೆ. ಈ ಮಿಸೈಲ್ 500 ಕಿಲೋ ಟನ್ ನಷ್ಟು ಪರಮಾಣು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಮಿಲಿಟರಿ ವಿಶ್ಲೇಷಕರ ರಾಬ ಲೀ (ROB LEE) ಅವರ ಪ್ರಕಾರ ಕೇವಲ 7 ರಿಂದ 10 ನಿಮಿಷಗಳಲ್ಲಿ NATO ರಾಷ್ಟ್ರಗಳನ್ನು ಸರ್ವನಾಶ ಮಾಡುವ ಶಕ್ತಿ ಈ ಮಿಸೈಲ್‌ಗಿದೆ. ಹಾಗಾಗಿ ಈ ಅಣ್ವಸ್ತ್ರ ಬಳಕೆ ಆಗಿದ್ದೇ ಆದ್ರೆ ಅದು ನಮ್ಮ ಸರ್ವನಾಶಕ್ಕೆ ನಾವೇ ನಾಂದಿ ಹಾಡಿದಂತಾಗುತ್ತೆ.


ಈ ಯುದ್ಧವನ್ನು ಅಣ್ವಸ್ತ್ರ ಪ್ರಯೋಗ ಇಲ್ಲದೆ ಗೆಲ್ಲುವ ನಿಟ್ಟಿನಲ್ಲಿ ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿವೆ. ಮೊದಲಿಗೆ ನ್ಯಾಟೊ ಮಿತ್ರ ರಾಷ್ಟ್ರಗಳು ಉಕ್ರೇನಿಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕು ಎಂಬುದು ರಷ್ಯಾದ ವಾದವಾದ್ರೂ ಅದಕ್ಕೆ ಬಗ್ಗದೆ ಉಕ್ರೇನ್‌ ಅಧ್ಯಕ್ಷ ಖುದ್ದು ತಾನೇ ರಣಭೂಮಿಗಿಳಿದು ಯುದ್ಧ ಮಾಡುತ್ತಿದ್ದಾರೆ. ಆದ್ರೆ ಉಕ್ರೇನ್ ಹಾಗೂ ರಷ್ಯಾ ರಾಷ್ಟ್ರಗಳ ನಾಗರೀಕರು ಯುದ್ಧ ಮುಗಿಯಲಿ ಅಂತನೇ ಬಯಸುತ್ತಿದ್ದಾರೆ. ಈ ಸಾವು ನೋವು ಕೊನೆಯಾಗಲಿ. ಶಾಂತಿ ನೆಲೆಯಾಗಲಿ ಅಂತ ಆಶಿಸುತ್ತಿದ್ದಾರೆ. ಆದರೆ ನಾಗರಿಕರ ಹಾರೈಕೆಗೆ ಉಭಯ ರಾಷ್ಟ್ರಗಳ ನಾಯಕರು ಒಪ್ಪುತ್ತಾರಾ ಕಾದುನೋಡಬೇಕು.
Exit mobile version