2023ರ ಅಂತ್ಯವಾಗುವಷ್ಟರಲ್ಲಿ, ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ! : UN ವರದಿ

United Nations : ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಮುಂಬರುವ 2023ನೇ ವರ್ಷಾಂತ್ಯದಲ್ಲಿ(UN Report over Population) ಭಾರತ ತನ್ನ ನೆರೆ ರಾಷ್ಟ್ರ ಚೀನಾವನ್ನು ಮೀರಿಸಿ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮುವ ಸಾಧ್ಯತೆಯಿದೆಯಂತೆ!

2022ರ ನವೆಂಬರ್ ತಿಂಗಳ ಮಧ್ಯದ ವೇಳೆಗೆ, ಇಡೀ ವಿಶ್ವದ(UN Report over Population) ಜನಸಂಖ್ಯೆಯು ಎಂಟು ಶತಕೋಟಿ ತಲುಪುವ ಅಂದಾಜಿದೆ ಎಂದು ವರದಿ ಹೇಳಿತ್ತು.

2022ರ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ ನ ಪ್ರಕಾರ, ಜಾಗತಿಕ ಮಟ್ಟದ ಜನಸಂಖ್ಯೆಯು ನವೆಂಬರ್ 15, 2022 ರ ಹೊತ್ತಿಗೆ ಎಂಟು ಶತಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿತ್ತು.

ಇದು ಈಗಾಗಲೇ ನಿಜವಾಗಿದೆ. ಜಾಗತಿಕ ಜನಸಂಖ್ಯೆಯು 1950 ರಿಂದ ಬೆಳೆಯುತ್ತಲೇ ಇದ್ದು,

ಯುಎನ್‌ನ ಇತ್ತೀಚಿನ ಪ್ರಕ್ಷೇಪಗಳ ಪ್ರಕಾರ ವಿಶ್ವದ ಜನಸಂಖ್ಯೆಯು 2030ನೇ ವರ್ಷದಲ್ಲಿ ಸುಮಾರು 8.5 ಶತಕೋಟಿ ಮತ್ತು 2050ನೇ ವರ್ಷದಲ್ಲಿ 9.7 ಶತಕೋಟಿಯವರೆಗೆ ಬೆಳೆಯಬಹುದು.

ಇದನ್ನೂ ಓದಿ : https://vijayatimes.com/will-reduce-ticket-price/

ಇನ್ನು, ಇದು 2080ರ ದಶಕದ ಹೊತ್ತಿಗೆ ಸುಮಾರು 10.4 ಶತಕೋಟಿಯನ್ನು ತಲುಪುತ್ತದೆ ಮತ್ತು 2100 ರವರೆಗೆ ಆ ಮಟ್ಟದಲ್ಲಿಯೇ ಉಳಿಯಬಹುದು ಎಂದು ಅಂದಾಜಿಸಲಾಗಿದೆ.

ಈಗಾಗಲೇ, ಚೀನಾ ಮತ್ತು ಭಾರತವು ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳಾಗಿ ಜನಪ್ರಿಯವಾಗಿವೆ.

2050 ರಷ್ಟರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ ಕೂಡ ಈ ಪಟ್ಟಿಗೆ ಸೇರಲಿವೆ.

ಸಾಮಾನ್ಯವಾಗಿ, ವಿಶ್ವದ ಅತಿದೊಡ್ಡ ದೇಶಗಳ ನಡುವಿನ ಭಿನ್ನ ಜನಸಂಖ್ಯೆ ಬೆಳವಣಿಗೆಯ ದರಗಳು ಗಾತ್ರದಿಂದ ತಮ್ಮ ಶ್ರೇಯಾಂಕವನ್ನು ಬದಲಾಯಿಸುತ್ತವೆ.

https://youtu.be/-vaB267p8Tc

ವರದಿಗಳ ಪ್ರಕಾರ, 2022 ರಲ್ಲಿ ಚೀನಾದ 1.426 ಶತಕೋಟಿ ಜನಸಂಖ್ಯೆಗೆ ಹೋಲಿಸಿದರೆ, ಭಾರತದ ಜನಸಂಖ್ಯೆಯು 1.412 ಶತಕೋಟಿಯಷ್ಟಿದೆ.

ಈಗಾಗಲೇ ಹೇಳಿದಂತೆ, 2023ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿ, ಚೀನಾವನ್ನು ಮೀರಿಸುವ ಭಾರತವು 2050 ರಲ್ಲಿ 1.668 ಶತಕೋಟಿ ಜನಸಂಖ್ಯೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : https://vijayatimes.com/rahul-allegation-over-savarkar/

ಇದು ಶತಮಾನದ ಮಧ್ಯಭಾಗದಲ್ಲಿ ಚೀನಾದ 1.317 ಶತಕೋಟಿ ಜನಸಂಖ್ಯೆಗಿಂತ ಮುಂದಿರುತ್ತದೆ ಎಂದು ಹಲವಾರು ವರದಿಗಳು ಈಗಾಗಲೇ ಅಂದಾಜಿಸಿವೆ.

Exit mobile version