ಕೀನ್ಯಾ : ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ. ನಿನ್ನೆ ನಡೆದ ಲಾಂಗ್ ಜೆಂಪ್ ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಶೈಲಿಸಿಂಗ್ 6.59 ಮೀಟರ್ ಉದ್ದ ಜಿಗಿಯುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಅಂತಿಮ ಸುತ್ತಿನಲ್ಲಿ ಸ್ವೀಡನ್ನ ಅಸ್ಕಾಗ್ 6.60 ಮೀಟರ್ ಉದ್ದ ಜಿಗಿಯುವ ಮೂಲಕ ಬಂಗಾರದ ಪದಕವನನ್ನು ಪಡೆದುಕೊಂಡರು ಆದರೆ ಕೇವಲ 1 ಮೀಟರ್ ಅಂತರದಲ್ಲಿ ಭಾರತದ ಶೈಲಿ ಸಿಂಗ್ ಚಿನ್ನದ ಪದಕದಿಂದ ವಂಚಿತರಾದರು. ಹಾಗೆ ಉಕ್ರೇನ್ನ ಮಾರಿಯಾ ಹೋರಿಲೋವಾ ಅವರು 6.50 ಮೀಟರ್ ದೂರದ ಸಾಧನೆಯೊಂದಿಗೆ ಕಂಚು ಪಡೆದುಕೊಂಡರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಇದುವರೆಗೂ 2 ಬೆಳ್ಳಿ ಮತ್ತು1ಕಂಚು ಪದಕವನ್ನು ಪಡೆದುಕೊಂಡಿದೆ.