ದುರ್ಗಾದೇವಿಯ ಈ ನಿಗೂಢ ದೇವಾಲಯಗಳ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ

India : ದುರ್ಗಾದೇವಿಯನ್ನು ಪ್ರತಿದಿನವೂ ಮನೆಗಳಲ್ಲಿ ಪೂಜಿಸುತ್ತೇವೆ. ನವರಾತ್ರಿಯ(Navarathri) ಸಂದರ್ಭದಲ್ಲಿ ಹೆಚ್ಚಿನವರು ತಾಯಿ ದುರ್ಗೆಯ ದೇವಸ್ಥಾನಕ್ಕೆ(Durga Temple) ಭೇಟಿ ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ಆದರೆ ಕೆಲವು ಕಾರಣಗಳಿಂದ ನೀವು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರೆ,

ಈ ವರದಿಯನ್ನು ಓದುವ ಮೂಲಕ ದುರ್ಗಾ ದೇವಿಯ ದರ್ಶನ ಮಾಡಲು ಅವಕಾಶ ನೀಡುತ್ತಿದ್ದೇವೆ. ಕೆಲವೊಂದು ದುರ್ಗಾದೇವಿಯ ದೇವಾಲಯಗಳು ಅತ್ಯಂತ ನಿಗೂಢ ರಹಸ್ಯವನ್ನು(Mystery Secret) ಹೊಂದಿರುವ ದೇವಾಲಯಗಳ ಸಾಲಿಗೆ ಸೇರುತ್ತವೆ.

ಹಾಗಾದರೆ, ದುರ್ಗಾ ದೇವಿಗೆ ಸಂಬಂಧಿಸಿದ ಆ ನಿಗೂಢ ದೇವಾಲಯಗಳು ಯಾವುವು ಎನ್ನುವುದನ್ನು ನೋಡೋಣ.


ಲಕ್ಮಾ ದೇವಿಯ ದೇವಸ್ಥಾನ : ಮಾತೃ ದೇವಿಯ ಅನನ್ಯ ದೇವಾಲಯಗಳ ಸರಣಿಯಲ್ಲಿ ಮೊದಲ ದೇವಸ್ಥಾನವೇ ಇದು. ಇದು ನಮ್ಮ ಕರ್ನಾಟಕ ರಾಜ್ಯದ, ಕಲಬುರಗಿ(Kalburgi) ಜಿಲ್ಲೆಯ ಆಲಂದ ತಹಸಿಲ್‌ನ ಗೋಲಾ ಹಳ್ಳಿಯಲ್ಲಿದೆ.

ಇಲ್ಲಿಗೆ ಬರುವ ಭಕ್ತರು ದೇವಿಗೆ ಹರಕೆ ಮಾಡಿಕೊಳ್ಳುವಾಗ ಮರದ ಮೇಲೆ ಚಪ್ಪಲಿ ಕಟ್ಟುತ್ತಾರೆ.

https://youtu.be/vIhx_ZXOqj8 ನೀವು ಸಿಟಿಜನ್ ಜರ್ನಲಿಸ್ಟ್ ಆಗಬಹುದು

ತಮ್ಮ ಹರಕೆಗಳು ನೆರವೇರಿದ ನಂತರ ಅವರು ದೇವಸ್ಥಾನಕ್ಕೆ ಬಂದು ದೇವಿಗೆ ಚಪ್ಪಲಿಯ ಹಾರವನ್ನು ಅರ್ಪಿಸುತ್ತಾರೆ. ಭಕ್ತರು ನೀಡುವ ಅದೇ ಚಪ್ಪಲಿಯನ್ನು ಧರಿಸಿ,

ತಾಯಿ ದೇವಿಯು ರಾತ್ರಿ ಸಮಯದಲ್ಲಿ ಹೊರಬಂದು ತನ್ನ ಭಕ್ತರ ಆಸೆಗಳನ್ನ ಪೂರೈಸುತ್ತಾಳೆ ಎನ್ನುವ ನಂಬಿಕೆ ಅಲ್ಲಿನ ಭಕ್ತರಲ್ಲಿದೆ.


ಉತ್ತರ ಪ್ರದೇಶದ(Uttar Pradesh), ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ತಹಸಿಲ್‌ನಲ್ಲಿ ಸ್ಥಾಪಿಸಲಾಗಿರುವ ನವದುರ್ಗಾ ಶಕ್ತಿ ಮಂದಿರವು ಎರಡನೇ ದೇವಾಲಯವಾಗಿದೆ.

ಈ ದೇವಾಲಯದ ನಂಬಿಕೆಯ ಪ್ರಕಾರ, ದೇವಾಲಯದ ಸುತ್ತಾ 108 ಪ್ರದಕ್ಷಿಣೆ ಹಾಕುವುದರಿಂದ ಭಕ್ತರ ಪ್ರತಿಯೊಂದು ಆಸೆಯು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

ದೇವಾಲಯದ ಆವರಣದಲ್ಲಿ ಒಂದು ಕಂಬವಿದ್ದು, ಇದನ್ನು ಮನೋಕಾಮನ ಸ್ತಂಭ ಎಂದು ಕರೆಯಲಾಗುತ್ತದೆ. ದೇವಾಲಯದ ಪ್ರದಕ್ಷಿಣೆ ನಂತರ ಈ ಸ್ತಂಭದ ಮೇಲೆ ಗಂಟು ಹಾಕಬೇಕು ಎಂದು ಹೇಳಲಾಗುತ್ತದೆ.

ಹೀಗೆ ಮಾಡುವುದರಿಂದ ಮನಸ್ಸಿನ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಈ ದೇವಸ್ಥಾನದಲ್ಲಿರುವ ಭಗವತಿ ದೇವಿಯ ವಿಗ್ರಹದಲ್ಲಿ ತಾಯಿಯ ಒಂಬತ್ತು ರೂಪಗಳನ್ನು ಕಾಣಬಹುದು.


ದೇವಿಯ ಈ ಭವ್ಯ ಪ್ರತಿಮೆಯು ಸುಮಾರು ನಾಲ್ಕು ಟನ್ ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ, ಇದರಲ್ಲಿ ಇಪ್ಪತ್ತೇಳು ವಿಭಾಗಗಳಿವೆ. ಈ ವಿಗ್ರಹವನ್ನು ಬಿಟ್ಟರೆ,

ಭಾರತದಲ್ಲಿ ಎಲ್ಲಿಯೂ ಇಷ್ಟು ವೈಭವ ಮತ್ತು ಭವ್ಯವಾದ ದುರ್ಗಾ ದೇವಿಯ ವಿಗ್ರಹವಿಲ್ಲ. ಎರಡು ಸಾವಿರ ಚದರ ಅಡಿಗಳಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನದ ವಿಶಿಷ್ಟ ಶಿಲ್ಪಕಲೆಗೆ ಉದಾಹರಣೆಯೆಂಬಂತೆ,

ಇದನ್ನೂ ಓದಿ : https://vijayatimes.com/karnataka-governament-scam/

ಇಲ್ಲಿ ತಾಯಿಯ ವಿಗ್ರಹವು ಹದಿನೆಂಟು ತೋಳುಗಳನ್ನು ಹೊಂದಿದೆ. ಈ ವಿಗ್ರಹವನ್ನು ಸಿದ್ಧಪಡಿಸಲು 100 ಕ್ಕೂ ಹೆಚ್ಚು ಶಿಲ್ಪಿಗಳು ಕೆಲಸ ಮಾಡಿದ್ದಾರೆ. ಈ ವಿಗ್ರಹವು 14 ಅಡಿ ಎತ್ತರ ಮತ್ತು 11 ಅಡಿ ಅಗಲವಿದೆ.

ತಾಯಿಯ ಪ್ರತಿಮೆಯ ಬಲಭಾಗದಲ್ಲಿ ಹನುಮಂತನ ಪ್ರತಿಮೆಯಿದ್ದರೆ, ಎಡಭಾಗದಲ್ಲಿ ಭೈರವನ ಪ್ರತಿಮೆಯಿದೆ. ರಥದ ಮೇಲ್ಭಾಗದಲ್ಲಿ ಭಗವಾನ್‌ ಶಿವ ಮತ್ತು ಸಾರಥಿಯಲ್ಲಿ ಶ್ರೀ ಗಣೇಶನು ಕುಳಿತಿರುವ ರಚನೆ ಮನಮೋಹಕವಾಗಿದೆ.


ಮುರೈನಾ ಬಳಿಯ ಕೈಲಾರಸ ಪಹರಗಢ ರಸ್ತೆಯ ಅರಣ್ಯ ಪ್ರದೇಶಗಳಲ್ಲಿರುವ ಬೆಟ್ಟದ ಮೇಲೆ ‘ಮಾ ಬಹ್ರಾರೆ ವಾಲಿ ಮಾತಾ’ ದೇವಸ್ಥಾನವಿದೆ.

ಇದು ಅತ್ಯಂತ ನಿಗೂಢ ದೇವಾಲಯವಾಗಿದ್ದು, ನವರಾತ್ರಿಯ 9 ದಿನಗಳಲ್ಲಿ ದುರ್ಗಾ ದೇವಿಯ ವಿಗ್ರಹದ ಗಾತ್ರವು ಹೆಚ್ಚಾಗುತ್ತಲೇ ಇರುತ್ತದೆ.

ಇದನ್ನೂ ಓದಿ : https://vijayatimes.com/mystery-about-ramayana/

ಅಷ್ಟೇ ಅಲ್ಲ, ನವಮಿಯ ದಿನ, ತಾಯಿಯ ವಿಗ್ರಹವು ಗರ್ಭ ಗುಡಿಯಿಂದ ಹೊರಬರುತ್ತದಂತೆ!

ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಮತ್ತು ಪೂಜೆಯ ಸಮಯದಲ್ಲಿ ಈ ತಾಯಿಯನ್ನು ಕುಲದೇವಿಯನ್ನಾಗಿ ಪೂಜಿಸುತ್ತಿದ್ದರು ಎಂಬ ನಂಬಿಕೆಯಿದೆ. ಅಂದಿನಿಂದ ತಾಯಿಯನ್ನು ಇಲ್ಲಿ ಬಂಡೆಯ ರೂಪದಲ್ಲಿ ಪೂಜಿಸಲಾಗುತ್ತದೆ ಎನ್ನುವುದು ವಿಶೇಷ.

Exit mobile version