ಈ ಬಾರಿಯ ರಂಜಾನ್ ಮತ್ತು ರಾಮನವಮಿಯಂದು ಉ.ಪ್ರದೇಶದಲ್ಲಿ ಸಣ್ಣ ಜಗಳವೂ ನಡೆದಿಲ್ಲ : ಯೋಗಿ!

yogi adityanath

ಈ ಬಾರಿಯ ರಾಮನವಮಿಯಂದು ಉತ್ತರಪ್ರದೇಶದಲ್ಲಿ ದಂಗೆಗಳನ್ನು ಮರೆತು ಬಿಡಿ, ಸಣ್ಣ ಜಗಳವೂ ನಡೆದಿಲ್ಲ. ಇದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಹೊಸ ಅಭಿವೃದ್ದಿಯ ಸಂಕೇತವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ರಾಮನವಮಿ ಮೆರವಣಿಗೆ ವೇಳೆ ದೇಶದ ಅನೇಕ ರಾಜ್ಯಗಳಲ್ಲಿ ಸಂಘರ್ಷ ನಡೆದಿದೆ. ಅನೇಕ ಕಡೆ ತೀವ್ರ ಮಟ್ಟದಲ್ಲಿ ದಂಗೆಗಳಾಗಿವೆ. ಗುಜರಾತ್, ಮದ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‍ಘಡ್ ರಾಜ್ಯಗಳಲ್ಲಿ ಕಲ್ಲು ತೂರಾಟೆ ನಡೆಸಲಾಗಿತ್ತು. ಆದರೆ ದೇಶದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶದಲ್ಲಿ ದಂಗೆಗಳಲ್ಲ, ಬದಲಾಗಿ ಸಣ್ಣ ಜಗಳವೂ ನಡೆದಿಲ್ಲ.

ನಮ್ಮ ರಾಜ್ಯದಲ್ಲಿ ಇನ್ನು ಮುಂದೆ ದಂಗೆಗಳಿಗೆ ಅವಕಾಶವಿಲ್ಲ. ಇನ್ನು ಅಭಿವೃದ್ದಿ ಮಾತ್ರ ನಡೆಯಲಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆ ಇದೆ. ರಾಮನವಮಿ ಮೆರವಣಿಗೆ ಮತ್ತು ರಂಜಾನ್ ತಿಂಗಳು ಇರುವುದರಿಂದ ಇಫ್ತಾರ್ ಕೂಟಗಳನ್ನು ಕೂಡಾ ಎಲ್ಲೆಡೆ ಆಯೋಜನೆ ಮಾಡಲಾಗಿದೆ. ಸುಮಾರು 800 ರಾಮನವಮಿ ಮೆರವಣಿಗೆಗಳು ಉತ್ತರಪ್ರದೇಶದಲ್ಲಿ ನಡೆದಿದೆ. ಆದರೆ ಯಾವ ಮೆರವಣಿಗೆ ಮತ್ತು ಕೂಟದಲ್ಲಿ ಸಣ್ಣ ಜಗಳವೂ ನಡೆದಿಲ್ಲ. ಕಾನೂನು ಬಾಹಿರತೆ ಮತ್ತು ಗೂಂಡಾಗಿರಿಗೆ ಉತ್ತರಪ್ರದೇಶದಲ್ಲಿ ಅವಕಾಶವಿಲ್ಲ.

ಗೂಂಡಾಗಿರಿಯಲ್ಲಿ ಪ್ರದರ್ಶಿಸಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಾರಿ ರಾಮನವಮಿ ವೇಳೆ ದೇಶದ ಕೆಲ ರಾಜ್ಯಗಳಲ್ಲಿ ದಂಗೆಗಳಾಗಿವೆ. ಆದರೆ ಉತ್ತರಪ್ರದೇಶದಲ್ಲಿ ಮಾತ್ರ ಶಾಂತಿಯುತವಾಗಿ ಎಲ್ಲವೂ ಮುಕ್ತಾಯವಾಗಿದೆ. ಯೋಗಿ ಆದಿತ್ಯನಾಥ್ ಎರಡನೇಯ ಅವಧಿಗೆ ಮುಖ್ಯಮಂತ್ರಿಯಾದ ನಂತರ ಕಾನೂನು ಮತ್ತು ಸುವ್ಯವಸ್ಥೆ ಉತ್ತರಪ್ರದೇಶದಲ್ಲಿ ಮತ್ತಷ್ಟು ಬಿಗಿಯಾಗಿದೆ. ಅನೇಕ ಕ್ರಿಮಿನಲ್‍ಗಳು ಪೋಲಿಸರಿಗೆ ಶರಣಾಗುತ್ತಿದ್ದಾರೆ. ಯೋಗಿ ಆದಿತ್ಯನಾಥ್ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳ ಪರಿಣಾಮದಿಂದ ಸುವ್ಯವಸ್ಥೆ ನೆಲೆಗೊಳ್ಳುತ್ತಿದೆ.

Exit mobile version