ಉತ್ತರಪ್ರದೇಶದ(Uttarpradesh) ಮುಖ್ಯಮಂತ್ರಿ(Chiefminister)ಯೋಗಿ ಆದಿತ್ಯನಾಥ್(Yogi Adityanath) 28 ವರ್ಷಗಳ ಬಳಿಕ ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ.

1994ರಲ್ಲಿ ಮನೆಯನ್ನು ಬಿಟ್ಟು ಗೋರಖ್ಪುರ(Ghorakpur) ಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ಕ್ಷಣದಿಂದ ಇಲ್ಲಿಯವರೆಗೆ ಯೋಗಿ ಆದಿತ್ಯನಾಥ್ ತಮ್ಮ ತಾಯಿ ಸಹಿತ ಕುಟುಂಬದ ಯಾವ ಸದಸ್ಯರನ್ನು ಭೇಟಿಯಾಗಿರಲಿಲ್ಲ. 1994ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ಯೋಗಿ ಆದಿತ್ಯನಾಥ್ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಸತತವಾಗಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2016ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ನಂತರ ಐದು ವರ್ಷಗಳ ಆಡಳಿತ ಪೂರೈಸಿ 2022ರಲ್ಲಿ ಮರಳಿ ಆಯ್ಕೆಯಾಗಿದ್ದಾರೆ. ಹೀಗೆ ರಾಜಕೀಯ ಮತ್ತು ಸನ್ಯಾಸ ಜೀವನದಲ್ಲಿ ಮಗ್ನರಾಗಿರುವ ಯೋಗಿ ಆದಿತ್ಯನಾಥ್ ತಮ್ಮ ಕುಟುಂಬವನ್ನು ದೂರವಿರಿಸಿದ್ದಾರೆ. ಯೋಗಿ ಆದಿತ್ಯನಾಥ್ ಮೂಲತಃ ಉತ್ತರಾಖಂಡ ರಾಜ್ಯದ ಪೌರಿ ಎಂಬ ಗ್ರಾಮದವರು. ತಂದೆ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿದ್ದರು. ಅವರಿಗೆ ಆರು ಜನ ಮಕ್ಕಳು. ಯೋಗಿ ಆದಿತ್ಯನಾಥ್ ಮೂಲ ಹೆಸರು ಅಜಯ್ಕುಮಾರ್ ಬಿಸ್ಟ್. ಪದವಿ ವ್ಯಾಸಾಂಗ ಮಾಡುತ್ತಿದ್ದಾಗಲೇ ರಾಮಮಂದಿರ ಹೋರಾಟಕ್ಕೆ ಧುಮಿಕಿದ ಅಜಯ್ಕುಮಾರ್ ಮುಂದೆ ಹೋರಾಟದ ಹಾದಿಯಲ್ಲೇ ಸಾಗಿದರು.

ಆರು ಬಾರಿ ಸಂಸದ ಮತ್ತು ಒಂದು ಬಾರಿ ಮುಖ್ಯಮಂತ್ರಿಯಾದರು ಅವರು ತಮ್ಮ ಕುಟುಂಬವನ್ನು ಭೇಟಿಯಾಗಿರಲಿಲ್ಲ. ಆದರೆ ಇದೀಗ 28 ವರ್ಷಗಳ ಬಳಿಕ ತಮ್ಮ ತವರು ಗ್ರಾಮ ಪೌರಿಗೆ ಭೇಟಿ ನೀಡಿದ್ದಾರೆ. ತಾಯಿ ಸಾವಿತ್ರಿದೇವಿ ಅವರ ಕಾಲುಮುಟ್ಟಿ ಆರ್ಶೀವಾದ ಪಡೆಯುತ್ತಿರುವ ಪೋಟೋವನ್ನು ಹಂಚಿಕೊಂಡಿದ್ದು, ‘ಮಾ’ ಎಂದು ಬರೆದುಕೊಂಡಿದ್ದಾರೆ. ಇನ್ನು ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ “ನಿಮ್ಮ ಕುಟುಂಬ ಸಾಕಷ್ಟು ಆರ್ಥಿಕವಾಗಿ ಹಿಂದುಳಿದಿದೆ.
ಆದರೆ ನಿವ್ಯಾಕೆ ನಿಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಿಲ್ಲ?” ಎಂದು ಕೇಳಿದಾಗ ಭಾವುಕರಾಗಿ ಉತ್ತರಿಸಿದ ಯೋಗಿ ಆದಿತ್ಯನಾಥ್ “ನಾನು ಸನ್ಯಾಸ ಸ್ವೀಕರಿಸಿದ್ದೇನೆ. ನಾನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಶಪತ ಮಾಡಿದ್ದೇನೆ. ನಾನು ನನ್ನ ರಾಜ್ಯಕ್ಕಾಗಿ ಮಾತ್ರ ಕೆಲಸ ಮಾಡುತ್ತೇನೆ. ಕುಟುಂಬದ ಬಗ್ಗೆ ನಾನು ಚಿಂತಿಸಲಾರೆ” ಎಂದಿದ್ದರು.