ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ

Uttar Pradesh: ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಸಮುದಾಯದ ಜನರ ಮೇಲೆ ದೇಶದಾದ್ಯಂತ ದೌರ್ಜನ್ಯಗಳು ಹೆಚ್ಚಳವಾಗುತ್ತಿದ್ದು, ಬಿಜೆಪಿಯು (BJP) ಮಾಡೆಲ್‌ ರಾಜ್ಯ ಎಂದು

ಕರೆಯುತ್ತಿದ್ದ ಯೋಗಿ ಆದಿತ್ಯನಾಥ್‌ (Yogi Adityanath) ಆಡಳಿತದ ಉತ್ತರಪ್ರದೇಶವು ಮೊದಲ ಸ್ಥಾನದಲ್ಲಿದೆ ಎಂದು ಎನ್.ಸಿ.ಆರ್.ಬಿ ವರದಿಯು ಬಹಿರಂಗಪಡಿಸಿದೆ.

2022ರಲ್ಲಿ ಭಾರತದಲ್ಲಿ ದಲಿತರ ಮೇಲೆ ಜಾತಿ ಆಧಾರಿತ ದೌರ್ಜನ್ಯಗಳು ಹೆಚ್ಚಳವಾಗಿದೆ ಎಂದು ಎನ್.ಸಿ.ಆರ್.ಬಿ (NCRB) ವರದಿಯು ಬಹಿರಂಗಪಡಿಸಿದ್ದು, 2022ರ ರಾಷ್ಟ್ರೀಯ ಅಪರಾಧ ದಾಖಲೆಗಳ

ಬ್ಯೂರೋದ (ಎನ್.ಸಿ.ಆರ್.ಬಿ) ವರದಿಯ ಪ್ರಕಾರ ‘ಕ್ರೈಮ್ ಇನ್ ಇಂಡಿಯಾ’ (Crime In India) ವರದಿಯು ಭಾರತದಲ್ಲಿ ದಲಿತರು ಜಾತಿ ಆಧಾರಿತ ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ.

2022ರಲ್ಲಿ ಪರಿಶಿಷ್ಟ ಜಾತಿಗಳ (Scheduled Caste) ವಿರುದ್ಧದ ದೌರ್ಜನ್ಯದ ವಿರುದ್ಧ 57,582 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು 2021ಕ್ಕಿಂತ 13.1% ಹೆಚ್ಚಳವಾಗಿದೆ. 2021ರಲ್ಲಿ 50,900

ಪ್ರಕರಣಗಳು ದಾಖಲಾಗಿತ್ತು. ಅಪರಾಧದ ಪ್ರಮಾಣವು 2021ರಲ್ಲಿ 25.3ರಿಂದ 2022ರಲ್ಲಿ 28.6ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪರಿಶಿಷ್ಟ ಪಂಗಡಗಳ (Scheduled Tribe) ವಿರುದ್ಧದ ಅಪರಾಧ್ಕಕೆ ಸಂಬಂಧಿಸಿದ ಒಟ್ಟು 10,064 ಪ್ರಕರಣಗಳು ದಾಖಲಾಗಿವೆ. ಇದು 2021ಕ್ಕಿಂತ 14.3% ಹೆಚ್ಚಳವಾಗಿದೆ. 2021ರಲ್ಲಿ 8,802

ಪ್ರಕರಣಗಳು ದಾಖಲಾಗಿದ್ದವು. ಅಪರಾಧ ಪ್ರಮಾಣವು 2021ರಲ್ಲಿ 8.4ರಿಂದ 2022ರಲ್ಲಿ 9.6ಕ್ಕೆ ಏರಿಕೆಯಾಗಿದೆ. ಇದಲ್ಲದೆ 2022ರಲ್ಲಿ ಬುಡಕಟ್ಟು ಮಹಿಳೆಯರ ಮೇಲೆ 1,347 ಅತ್ಯಾಚಾರ ಪ್ರಕರಣಗಳು

ಮತ್ತು 1022 ಹಲ್ಲೆ ಪ್ರಕರಣಗಳು ವರದಿಯಾಗಿವೆ ಎಂದು ವರದಿ ಬಹಿರಂಗಪಡಿಸಿದೆ.

ಪರಿಶಿಷ್ಟ ಜಾತಿ ಸಮುದಾಯದ ಜನರ ವಿರುದ್ಧದ ದೌರ್ಜನ್ಯದ ಅತಿ ಹೆಚ್ಚು ಪ್ರಕರಣ ಉತ್ತರಪ್ರದೇಶದಲ್ಲಿ ದಾಖಲಾಗಿದೆ. ಅಂದರೆ 15,368 ಪ್ರಕರಣಗಳು ದಾಖಲಾಗಿದೆ. ರಾಜಸ್ಥಾನದಲ್ಲಿ 8,752

ಪ್ರಕರಣಗಳು, ಮಧ್ಯಪ್ರದೇಶದಲ್ಲಿ (Madhya Pradesh) 7,733 ಪ್ರಕರಣಗಳು ಮತ್ತು ಬಿಹಾರದಲ್ಲಿ 6,509 ಪ್ರಕರಣಗಳು ದಾಖಲಾಗಿದೆ.

ಯುಪಿಯಲ್ಲಿ ಎಸ್‌ಸಿಗಳ ವಿರುದ್ಧದ ಅಪರಾಧಗಳ ಪ್ರಕರಣಗಳ ಸಂಖ್ಯೆ 2021ರಲ್ಲಿ 13,146ರಿಂದ 2022ರಲ್ಲಿ 15,368 ಕ್ಕೆ ಏರಿದೆ. ಈ ಅಂಕಿ ಅಂಶಗಳು ಯೋಗಿ ಆಡಳಿತದ ಉತ್ತರಪ್ರದೇಶದಲ್ಲಿ ಎಸ್ಸಿ

(SC) ಸಮುದಾಯಗಳ ಮೇಲಿನ ದೌರ್ಜನ್ಯ 16% ರಷ್ಟು ಹೆಚ್ಚಾಗಿದೆ ಎಂಬುವುದನ್ನು ಸೂಚಿಸಿದೆ.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶ 2,315 ಪ್ರಕರಣಗಳೊಂದಿಗೆ ಎಸ್‌ಸಿ ಜನರ ವಿರುದ್ಧ ಎಸಗಿದ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ತೆಲಂಗಾಣದಲ್ಲಿ ಎಸ್‌ಸಿಗಳ ವಿರುದ್ಧದ ದೌರ್ಜನ್ಯಕ್ಕೆ

ಸಂಬಂಧಿಸಿ 1,787 ಅಪರಾಧಗಳು ದಾಖಲಾಗಿದ್ದರೆ ತಮಿಳುನಾಡಿನಲ್ಲಿ (Tamilnadu) 1,761 ಮತ್ತು ಕರ್ನಾಟಕದಲ್ಲಿ 1,977 ಪ್ರಕರಣಗಳಿವೆ. ಕೇರಳವು ಎಸ್‌ಸಿಗಳ ವಿರುದ್ಧ ಅತಿ ಕಡಿಮೆ ಅಪರಾಧಗಳನ್ನು

ಅಂದರೆ 1,050 ಪ್ರಕರಣಗಳು ದಾಖಲು ಮಾಡಿದೆ. ತಮಿಳುನಾಡಿನಲ್ಲಿ 2021ಕ್ಕೆ ಹೋಲಿಕೆ ಮಾಡಿದರೆ 2022ರಲ್ಲಿ ಎಸ್ಸಿ ಸಮುದಾಯದ ಮೇಲಿನ ದೌರ್ಜನ್ಯ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

Exit mobile version