ಗೋರಖ್‍ನಾಥ್ ಮಠದ ಮೇಲೆ ದಾಳಿ ನಡೆಸಿದ್ದು ಐಐಟಿ ಪದವೀಧರ ಅಹ್ಮದ್ ಮುರ್ತಾಜಾ!

uttarpradesh

ಉತ್ತರಪ್ರದೇಶದ(Uttarpradesh) ಗೋರಖ್‍ಪುರದಲ್ಲಿರುವ(Ghorakpur) ಪ್ರಸಿದ್ದ ಗೋರಖ್‍ನಾಥ್(Ghoraknath) ಮಠದ(Mutt) ಭದ್ರತಾ ಸಿಬ್ಬಂದಿ ಮೇಲೆ ಮಚ್ಚಿನಿಂದ ದಾಳಿ ನಡೆಸಲು ಪ್ರಯತ್ನಿಸಿ ವಿಫಲನಾಗಿದ್ದ ವ್ಯಕ್ತಿಯನ್ನು ಅಹ್ಮದ್ ಮುರ್ತಾಜಾ ಎಂದು ಗುರುಸಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮುರ್ತಾಜಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗೋರಖ್‍ನಾಥ್ ಮಠದ ಆವರಣಕ್ಕೆ ಆಗಮಿಸಿ ‘ಅಲ್ಲಾ ಹೂ ಅಕ್ಬರ್’ ಎಂದು ಧಾರ್ಮಿಕ ಘೋಷಣೆ ಕೂಗುತ್ತಾ, ಕೈಯಲ್ಲಿ ಮಚ್ಚು ಹಿಡಿದು ಮಠದ ಒಳಗೆ ಹೋಗಲು ಅಹ್ಮದ್ ಮುರ್ತುಜಾ ಯತ್ನಿಸಿದ್ದಾನೆ. ಆಗ ಆತನನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಪೋಲಿಸರಿಗೂ ಗಂಭೀರ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿ ಮೇಲೆ ಮಚ್ಚಿನಿಂದ ದಾಳಿ ಮಾಡಿ, ಅವರ ಬಳಿಯಿದ್ದ ರೈಫಲ್ ಕಸಿದುಕೊಳ್ಳಲು ಕೂಡಾ ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ. ಕೊನೆಗೆ ಭದ್ರತಾ ಸಿಬ್ಬಂದಿ ಅಹ್ಮದಾ ಮುರ್ತಾಜಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಯಾರು ಈ ಅಹ್ಮದ್ ಮುರ್ತಾಜಾ..? ಅಹ್ಮದ್ ಮುರ್ತಾಜಾ ಮೂಲತಃ ಗೋರಖ್‍ಪುರದ ನಿವಾಸಿಯಾಗಿದ್ದಾನೆ. ಈತನ ತಂದೆ ಇಂಜಿನಿಯರ್ ವೃತ್ತಿಯಲ್ಲಿದ್ದು, ಇವರ ಕುಟುಂಬ ವಿದ್ಯಾವಂತರ ಕುಟುಂಬವಾಗಿದೆ. ಮುಂಬೈ ಐಐಟಿಯಿಂದ ಇಂಜಿನಿಯರಿಂಗ್ ಪದವೀಧರನಾಗಿರುವ ಅಹ್ಮದ್ ಮುರ್ತಾಜಾ ಮಾನಸಿಕ ಅಸ್ವಸ್ಥ ಎಂದು ಕುಟುಂಬದವರು ಈ ಘಟನೆಯ ನಂತರ ಹೇಳುತ್ತಿದ್ದಾರೆ. ಆದರೆ ಆತನನ್ನು ಬಂಧಿಸಿದ ವೇಳೆ ಆತನ ಬಳಿ ಧಾರ್ಮಿಕ ಪುಸ್ತಕಗಳು ಸಿಕ್ಕಿವೆ. ಈ ರೀತಿಯ ಕೃತ್ಯ ಎಸಗಲು ಆತನಿಗೆ ತರಭೇತಿ ನೀಡಲಾಗಿತ್ತೇ? ಅಥವಾ ಪ್ರೇರಣೆ ನೀಡಲಾಗಿದೆಯೇ? ಎಂಬುದರ ಕುರಿತು ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರ, ಪ್ರಕರಣವನ್ನು ‘ಆ್ಯಂಟಿ ಟೆರರಿಸ್ಟ್’ಗೆ ವಹಿಸಿದ್ದಾರೆ. ಅಲ್ಲದೇ ಈ ಪ್ರಕರಣ ಕುರಿತು ಎನ್‍ಐಎ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಕೂಡಾ ಮಾಹಿತಿ ಕಲೆಹಾಕುತ್ತಿವೆ. ಇನ್ನು ಈ ರೀತಿಯ ದಾಳಿಗಳು ಭಾರತದಲ್ಲಿ ಸಾಮಾನ್ಯವಾಗಿ ನಡೆಯುವುದಿಲ್ಲ. ಆದರೆ ಇಸ್ರೇಲ್‍ನಲ್ಲಿ ಈ ರೀತಿಯ ಭಯೋತ್ಪಾದಕ ದಾಳಿಗಳನ್ನು ಹಮಾಸ್ ಉಗ್ರರು ನಡೆಸುತ್ತಾರೆ. ಸಮಾಜವನ್ನು ಭಯಭೀತಗೊಳಿಸುವ ಮೂಲಕ ಅಶಾಂತಿ ಸೃಷ್ಟಿಸಲು ಈ ರೀತಿಯ ದಾಳಿ ನಡೆಸಲಾಗುತ್ತದೆ.

ಯಾವುದೇ ಶಶ್ತ್ರಾಸ್ತ್ರಗಳಿಲ್ಲದೇ ದಾಳಿ ನಡೆಸಿ ಆತಂಕ ಸೃಷ್ಟಿಸುವುದು ಮತ್ತು ಆ ಮೂಲಕ ಅಶಾಂತಿ ಸೃಷ್ಟಿಸುವುದನ್ನು ಪ್ಯಾಲೆಸ್ತೀನ್ ಉಗ್ರರ ತಂತ್ರವಾಗಿದೆ. ಹೀಗಾಗಿ ಈ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹಿರಿಯ ಪೋಲಿಸ್ ಅಧಿಕಾರಿ ಅಭಿಷೇಕ್ ಸಿಂಗ್ ನೇತೃತ್ವದಲ್ಲಿ ತನಿಖೆಗೂ ಆದೇಶಿಸಿದೆ.

Exit mobile version