3ಡಿ ವರ್ಷನ್​ನಲ್ಲಿ ದೂಳೆಬ್ಬಿಸಲು ಬರ್ತಿದೆ ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ

Bollywood : ಫೈಟರ್ (‘Fighter’) ಚಿತ್ರದ ನಿರ್ದೇಶಕರಾದಂತಹ ಸಿದ್ದಾರ್ಥ್​ ಆನಂದ್ (Siddarth Anand) ಅವರು ಸಿನಿಮಾದ ಪ್ರಚಾರಕ್ಕಾಗಿ (Upcoming 3d version movie 2024) ಬೇರೆ ಬೇರೆ

ಪ್ಲಾಟ್ಫಾರ್ಮ್ ಗಳನ್ನು ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಬರೋಬ್ಬರಿ 50 ದಿನಗಳ ಕಾಲ ಒಂದರ ಹಿಂದೆ ಒಂದು ಮಾಹಿತಿ ನೀಡಲು ಅವರು ನಿರ್ಧರಿಸಿದ್ದು, ಹೃಥಿಕ್ ರೋಷನ್​ ಅಭಿನಯದ ಈ ಸಿನಿಮಾ

3ಡಿ ವರ್ಶನ್ ಚಲನಚಿತ್ರ ತೆರೆಕಂಡು ಜನರ (Upcoming 3d version movie 2024) ಮನಸ್ಸನ್ನು ಸೆಳೆಯಲಿದೆ.

ಮುಂದಿನ ವರ್ಷ ಬಿಡುಗಡೆ ಆಗಲಿರುವ ಎಲ್ಲಾ ಸಿನಿಮಾಗಳಿಗೆ ಬಹಳಷ್ಟು ನಿರೀಕ್ಷೆ ಸೃಷ್ಟಿಯಾಗಿದ್ದು, ಇದರ ಸಾಲಿನಲ್ಲಿ ‘ಫೈಟರ್'(‘Fighter’) ಮೂವಿ ಕೂಡ ತುಂಬಾ ಸದ್ದು ಮಾಡುತ್ತಿದೆ. ಭರ್ಜರಿ ಆಕ್ಷನ್

ಹೊಂದಿರುವ ಈ ಸಿನಿಮಾ ಜವಾನ್ ಖ್ಯಾತಿಯ ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ.

ಅದ್ದೂರಿ ಬಡ್ಜೆಟ್ ನಲ್ಲಿ ಈ ಸಿನಿಮಾ ರಂಗೇರುತ್ತಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ (Deepeka Padukone) ನಟಿಸಲಿದ್ದಾರೆ. ಈ ಸಿನಿಮಾದ

ವಿಶೇಷತೆ ಏನೆಂದರೆ ಫೈಟರ್ ಸಿನಿಮಾ 3ಡಿ ವರ್ಶನ್ನಲ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಸಿನಿಮಾಗಳು ದೊಡ್ಡ ಸಾಧನೆ ಮಾಡ್ತಿವೆ. ಶಾರುಖ್ ಖಾನ್ ನಟನೆಯ ಜವಾನ್, ಪಟಾನ್ ಸಿನಿಮಾಗಳು

ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದ ಬಳಿಕ ಇನ್ನುಳಿದ ಹೀರೋಗಳಿಗೆ ಹೊಸ ಟಾರ್ಗೆಟ್ ಕೊಟ್ಟಂತಾಗಿದೆ.

ಫೈಟರ್ ಮೂವಿ ಕೂಡ ಬಾಕ್ಸ್ ಆಫೀಸ್ ಲ್ಲಿ (Box Office) ಕೋಟ್ಯಾಂತರ ರೂಪಾಯಿ ಗಳಿಸಬಹುದಾ ಎಂಬುದನ್ನು ಕಾದು ನೋಡಬೇಕು. ಅನಿಮಲ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ

ಅನಿಲ್ ಕಪೂರ್ ಕೂಡ ‘ಫೈಟರ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ 2d, 3d ಮತ್ತು ಐ ಮ್ಯಾಕ್ಸ್ 3ಡಿ ವರ್ಷನ್ ನಲ್ಲಿ ಬಿಡುಗಡೆ ಆಗಲಿದೆ.

ಮೈನವಿರೇರಿಸೋ ಮತ್ತು ಸಾಹಸ ದೃಶ್ಯಗಳನ್ನು ಈ ಚಿತ್ರ ಹೊಂದಿದೆ. ಈ ಸಿನಿಮಾ ದೊಡ್ಡ ಪರ್ಯಾಯದಲ್ಲಿ ಆನಂದಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ

ಸ್ಪೆಷಲ್ ಟ್ರೀಟ್ ನೀಡುವುದಕ್ಕಾಗಿ ಈ ಸಿನಿಮಾವನ್ನು ಐ ಮ್ಯಾಕ್ಸ್ 3ಡಿಲ್ಲಿ ತೆರೆಮೇಲೆ ಬರಲಿದೆ. ಈ ಚಿತ್ರ ಜನವರಿ 25, 2024 ರಂದು ತೆರೆ ಮೇಲೆ ಕಾಣಬಹುದು.

ಬೇರೆ ಬೇರೆ ಭಾಷೆಗಳಲ್ಲಿ ಅನೇಕ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿವೆ ಆದ್ರಿಂದ ಫೈಟರ್ ಸಿನಿಮಾ ಕೂಡ ಜೋರಾಗಿ ಸದ್ದು ಮಾಡಲಿದೆ. ಈ ಫೈಟರ್ ಸಿನಿಮಾ 3ಡಿಲ್ಲಿ ಬಿಡುಗಡೆ ಆಗಲಿದೆ,

ಮೊಟ್ಟ ಮೊದಲನೇ ಬಾರಿಗೆ ಹೃತಿಕ್ ರೋಷನ್ 3ಡಿ ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ.

ಇದನ್ನು ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಕಿತ್ತಾಟಕ್ಕೆ ಕಾರಣವಾದ ಚಾಕು ಇರಿತ ಪ್ರಕರಣ

Exit mobile version