ಬಿಲ್ಕಿಸ್‌ ಬಾನು ಕೇಸ್: ಗೋಧ್ರಾ ಉಪ ಕಾರಾಗೃಹದಲ್ಲಿ ಶರಣಾದ 11 ಆರೋಪಿಗಳು

Ahmedabad: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ (updates of bilkis banu case) ಸಂಬಂಧಿಸಿದಂತೆ ಎಲ್ಲಾ 11 ಮಂದಿ ಆರೋಪಿಗಳು ಸುಪ್ರೀಂಕೋರ್ಟ್‌

(Supreme Court) ಆದೇಶದಂತೆ ಭಾನುವಾರ ರಾತ್ರಿ ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ (Godhra) ಉಪಕಾರಾಗೃಹದಲ್ಲಿ ಶರಣಾಗಿದ್ದಾರೆ.

ಸುಪ್ರೀಂ ಕೋರ್ಟ್‌ ವಿಧಿಸಿದ ಗಡುವಿನಂತೆ ಜನವರಿ (January) 21ರ ಮಧ್ಯರಾತ್ರಿಗೆ ಮುಂಚಿತವಾಗಿ ಎಲ್ಲರೂ ಶರಣಾಗಿದ್ದಾರೆ,” ಎಂದು ಕ್ರೈಂ ಬ್ರ್ಯಾಂಚ್‌ ಇನ್‌ಸ್ಪೆಕ್ಟರ್‌ ಎನ್‌. ಎಲ್‌ ದೇಸಾಯಿ (N L Desai)

ಹೇಳಿದ್ದಾರೆ. ಕಳೆದ ವಾರ ದೋಷಿಗಳು ತಮಗೆ ಶರಣಾಗಲು ಹೆಚ್ಚಿನ ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತಲ್ಲದೆ ಭಾನುವಾರದೊಳಗೆ ಶರಣಾಗುವಂತೆ ಅವರಿಗೆ ಸೂಚಿಸಿತ್ತು.

ಏನಿದು ಪ್ರಕರಣ:
2002ರ ಗುಜರಾತ್‌ ( ಗಲಭೆ ವೇಳೆ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮತ್ತು ಆ ಕುಟುಂಬದ ಏಳು ಮಂದಿಯನ್ನು ಕೊಂದಿದ್ದ ಆರೋಪಿಗಳನ್ನು ಗುಜರಾತ್‌ ಸರ್ಕಾರ

ಬಿಡುಗಡೆ ಮಾಡಿತ್ತು. ಪ್ರಕರಣದಲ್ಲಿ ದೋಷಿಗಳಾಗಿದ್ದ 11 ಆರೋಪಿಗಳನ್ನು ಸನ್ನಡತೆ ಆಧರಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದು, ವಿವಾದಕ್ಕೆ ಗುರಿಯಾಗಿತ್ತು.

ಈ 11 ಆರೋಪಿಗಳನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆಗಸ್ಟ್‌ 2022 ಆದೇಶವನ್ನು (updates of bilkis banu case) ಸುಪ್ರೀಂ ಕೋರ್ಟ್‌ ಜನವರಿ 8ರ ತೀರ್ಪಿನಲ್ಲಿ ರದ್ದುಗೊಳಿಸಿತ್ತು.

ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಸಾರ್ವಜನಿಕವಾಗಿ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವುದಕ್ಕೆ ತಮಿಳುನಾಡು ಸರ್ಕಾರ ಅನುಮತಿಯನ್ನು ನಿರಾಕರಿಸಿತ್ತು. ಇದೀಗ ಈ ನಿರ್ಧಾರವನ್ನು ಬದಲಾಯಿಸುವಂತೆ

ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ ಸುಪ್ರೀಂ, ನೇರ ಪ್ರಸಾರದ ಕೋರಿಕೆಗಳನ್ನು ತಿರಸ್ಕರಿಸಬೇಡಿ ಎಂದು ಹೇಳಿದೆ.

ಇತರ ಸಮುದಾಯದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನೇರ ಪ್ರಸಾರ ಮಾಡುವುದನ್ನು ತಡೆಯುವುದು

ಅಥವಾ ಅನುಮತಿ ನೀಡದಿರುವುದು ತಪ್ಪು ಎಂದು ಹೇಳಿದೆ. ಈ ಬಗ್ಗೆ ಸರಿಯಾದ ಕಾರಣ ಇದ್ದರೆ ತಿಳಿಸಿ ಎಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಹೇಳಿದೆ.

ಸಮಾರಂಭದ ಪ್ರದರ್ಶನ ಅಥವಾ ಈ ಸಂದರ್ಭದಲ್ಲಿ ವಿಶೇಷ ಪೂಜೆ ಅಥವಾ ಭಜನೆಗಳನ್ನು ನಡೆಸುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ರಾಮ್ ಲಲ್ಲಾ ‘ಪ್ರಾಣ-ಪ್ರತಿಷ್ಠೆ’ (Prana Pratishte) ಸಮಾರಂಭದ ನೇರ ಪ್ರಸಾರವನ್ನು ಕೆಲವೊಂದು ಪ್ರದೇಶದಲ್ಲಿ ನಿರಾಕರಿಸಿರುವ ಡಿಎಂಕೆ (DMK) ನೇತೃತ್ವದ ತಮಿಳುನಾಡು ಸರ್ಕಾರದ ಕ್ರಮದ

ಬಗ್ಗೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನು ಓದಿ: CRPF ಪಡೆಯಲ್ಲಿ ಕಾನ್ಸ್ಟೇಬಲ್ಗಳ ನೇಮಕ: 10th ಪಾಸಾದವರಿಂದ ಅರ್ಜಿ ಆಹ್ವಾನ

Exit mobile version