ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ; ಬಾಗಲಕೋಟೆಯ ನಿವೃತ್ತ DySP ಮಗ ದೆಹಲಿ ಪೊಲೀಸರ ವಶಕ್ಕೆ..!

Bengaluru: ಸಂಸತ್ತಿನೊಳಗೆ ಸ್ಮೋಕ್ ಬಾಂಬ್ ಸ್ಪೋಟಿಸಿದ ಪ್ರಕರಣಕ್ಕೆ (updates on Parliament Smokebomb) ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಮತ್ತಿಬ್ಬರನ್ನು

ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಒಬ್ಬನನ್ನು ಬಾಗಲಕೋಟೆಯ ನಿವೃತ್ತ ಉಪ ಪೊಲೀಸ್ (Bagalkot retired sub police) ವರಿಷ್ಠಾಧಿಕಾರಿಯವರ ಮಗ ಸಾಯಿಕೃಷ್ಣ ಎಂದು ಗುರುತಿಸಲಾಗಿದೆ.

ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ಸ್ಪೋಟಿಸಿರುವ ಆರೋಪಿ ಮನೋರಂಜನ್ (Manoranjan) ಸ್ನೇಹಿತನಾಗಿರುವ ಸಾಯಿಕೃಷ್ಣ (Saikrishna) ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ

ಕಾರ್ಯನಿರ್ವಹಿಸುತ್ತಿದ್ದಾನೆ. ಸಾಯಿಕೃಷ್ಣ ಮತ್ತು ಮನೋರಂಜನ್ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚ್ ಮೇಟ್ ಆಗಿದ್ದರು ಎನ್ನಲಾಗಿದೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಈತನನ್ನು

ನಿನ್ನೆ ರಾತ್ರಿ 10 ಗಂಟೆಗೆ ಬಾಗಲಕೋಟೆಯಲ್ಲಿರುವ ಆತನ ಮನೆಯಿಂದ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಗೆ ಕರೆದುಕೊಂಡು ಹೋಗಲಾಗಿದೆ.

ದೆಹಲಿ ಪೊಲೀಸರು ಬಂಧಿಸಿರುವ ಮತ್ತೊಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶದ ಜಲೌನ್ನ ಅತುಲ್ (UP Jalaun Atul) ಕುಲಶ್ರೇಷ್ಠ ಎಂದು ಗುರುತಿಸಲಾಗಿದೆ. ‘ಬಚ್ಚಾ’ ಎಂದೂ ಕರೆಯಲ್ಪಡುವ ಅತುಲ್ಗೆ ಯಾವುದೇ

ಹಿಂದಿನ ಕ್ರಿಮಿನಲ್ ದಾಖಲೆಗಳಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಸಂಸತ್ತಿನ ಮೇಲೆ ದಾಳಿ ಮಾಡಿರುವ ಆರೋಪಿಗಳೊಂದಿಗೆ ಫೇಸ್ಬುಕ್ನಲ್ಲಿ ಚಾಟ್ ಮಾಡುತ್ತಿರುವ ರೆಕಾರ್ಡ್ನಲ್ಲಿ ಈತ

ಸಿಕ್ಕಿಬಿದ್ದಿದ್ದು, ವಿಚಾರಣೆಗಾಗಿ ದೆಹಲಿ (updates on Parliament Smokebomb) ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ (Security breach) ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಲೋಕಸಭೆಗೆ ಅತಿಕ್ರಮ ಪ್ರವೇಶ ಮಾಡಿದ

ಮನೋರಂಜನ್ ಮತ್ತು ಸಾಗರ್ ಶರ್ಮಾ, (Sagar Sharma) ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ಗಳನ್ನು ಬಳಸಿದ ಅಮೋಲ್ ಶಿಂಧೆ (Amol Shinde) ಮತ್ತು ನೀಲಂ ಆಜಾದ್ ಸೇರಿದ್ದಾರೆ. ಭದ್ರತಾ

ಉಲ್ಲಂಘನೆಯ ಮಾಸ್ಟರ್ ಮೈಂಡ್ ಎಂದು ನಂಬಲಾದ ಲಲಿತ್ ಝಾ ಮತ್ತು ಝಾ (Lalit Jha and Jha) ಅವರಿಗೆ ಸಹಾಯ ಮಾಡಿದ ಮಹೇಶ್ ಕುಮಾವತ್ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ.

ಮಣಿಪುರದ ಅಶಾಂತಿ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ತಮ್ಮ ಉದ್ದೇಶವಾಗಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ

ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಇಂಟೆಲಿಜೆನ್ಸ್ ಬ್ಯುರೊದಲ್ಲಿ 226 ಹುದ್ದೆಗಳ ನೇಮಕ: UG, PG ಪಾಸಾದವರು ಅರ್ಜಿ ಸಲ್ಲಿಸಬಹುದು

Exit mobile version