ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಸರ್ಕಾರದಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ : ಅರ್ಜಿ ಆಹ್ವಾನ

Education News : ಯುಪಿಎಸ್‌ಸಿ(UPSC) 2023ನೇ ಸಾಲಿನ ಪ್ರಿಲಿಮ್ಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿ ಇದೀಗ ಮುಖ್ಯ ಪರೀಕ್ಷೆಗೆ ಅರ್ಹರಾದವರಿಗೆ ಸರ್ಕಾರ ಇದೀಗ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಖಾಸಗಿ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ 2023-24ನೇ ಸಾಲಿನ ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಸಮಾಜ ಕಲ್ಯಾಣ ಇಲಾಖೆಯ(Social Welfare Department) ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರೀಕ್ಷಾ ಪೂರ್ವ ಉಚಿತ ತರಬೇತಿ ಒದಗಿಸಲಿದೆ.

ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

ಇದಕ್ಕಾಗಿ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಯುಪಿಎಸ್‌ಸಿ ಪ್ರಿಲಿಮ್ಸ್‌ (UPSC Prelims)ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಲ್ಲಿ, ಮುಖ್ಯ ಪರೀಕ್ಷೆಯ ತರಬೇತಿ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2023
ಇಲಾಖೆಯ ವೆಬ್‌ಸೈಟ್‌ ಅನ್ನು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದು
ವೆಬ್‌ಸೈಟ್‌ www.sw.kar.nic.in

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಆದಾಯ ಪ್ರಮಾಣ ಪತ್ರ
ಬ್ಯಾಂಕ್‌ ಪಾಸ್‌ ಬುಕ್
ಆಧಾರ್ ಕಾರ್ಡ್
ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಅರ್ಜಿ ಹಾಕಿರುವ ಕುರಿತ ಜೆರಾಕ್ಸ್‌ ಕಾಪಿ.
ಯುಪಿಎಸ್‌ಸಿ ಪ್ರಿಲಿಮ್ಸ್‌ ಪಾಸ್ ಪ್ರಮಾಣ ಪತ್ರ

ಇತರೆ ವೈಯಕ್ತಿಕ ವಿವರಗಳು

ಅಭ್ಯರ್ಥಿಗಳಿಗೆ ನಿಗಧಿತ ಇತರೆ ಸಾಮಾನ್ಯ ಅರ್ಹತೆಗಳು
ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರಾಗಿರಬೇಕು.
ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ರೂ.5 ಲಕ್ಷ ಮೀರಿರಬಾರದು.
-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ www.sw.kar.nic.in ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಈ ವಿಳಾಸಕ್ಕೆ ಮುದ್ದಾಮ್ ಅಥವಾ ಅಂಚೆ (Post)ಮೂಲಕ ತಲುಪಿಸಬೇಕು.

ಮುಖ್ಯ ಆಡಳಿತಾಧಿಕಾರಿಗಳು, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಡಾ ಬಿ.ಆರ್.ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು – 560001

ಅಥವಾ ಅರ್ಜಿ ಹಾಗೂ ಸ್ಕ್ಯಾನ್‌ ಮಾಡಿದ ದಾಖಲೆಗಳನ್ನು ಇ-ಮೇಲ್ ವಿಳಾಸ swdupscmains@gmail.com ಗೆ ಜೂನ್ 25 ರೊಳಗೆ ಕಳುಹಿಸಬೇಕು .

ಕೋಚಿಂಗ್ ನೀಡುವ ಸ್ಥಳಗಳು : ಬೆಂಗಳೂರು, ನವದೆಹಲಿ, ತೆಲಂಗಾಣ, , ಮೈಸೂರು, ಬೆಳಗಾವಿ, ಧಾರವಾಡ.

ಮೇಲ್ಕಂಡ ಯಾವುದಾದರೂ ಒಂದು ಸ್ಥಳದಲ್ಲಿ ಒಂದು ಸಂಸ್ಥೆಯನ್ನು ಅಭ್ಯರ್ಥಿಗಳು ತರಬೇತಿಗೆ ಆಯ್ಕೆ ಮಾಡಿಕೊಳ್ಳಬೇಕು.

ರಶ್ಮಿತಾ ಅನೀಶ್

Exit mobile version