261 ಹುದ್ದೆಗಳಿಗೆ ಯುಪಿಎಸ್‌ಸಿ ಇಂದ ಅಧಿಸೂಚನೆ : ಡಿಪ್ಲೊಮ, ಪದವಿ ಪಾಸಾದವರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Job News: ನೀವು ಈಗಾಗಲೇ ಡಿಪ್ಲೊಮ(Diploma), ಬಿಇ(B.E), ಬಿ.ಟೆಕ್(B.Tech), ಎಲ್‌ಎಲ್‌ಬಿ(LLB), ಅಥವಾ ಇತರೆ ಯಾವುದೇ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿದ್ದು ಕೇಂದ್ರ ಸರ್ಕಾರದ ಸರ್ಕಾರಿ ಹುದ್ದೆಗಳಿಗಾಗಿ ಕಾಯುತ್ತಿದ್ದೀರಾ. ಹಾಗಾದರೆ ಇಲ್ಲಿದೆ ನಿಮಗೆ ಸದಾವಕಾಶ. ಇದೀಗ 261 ವಿವಿಧ ಹುದ್ದೆಗಳಿಗೆ ಅಧಿಸೂಚಿಸಿ ಕೇಂದ್ರ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರಗಳನ್ನು ಆಸಕ್ತರು ಕೆಳಗಿನಂತೆ ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ

ವಯಸ್ಸಿನ ಅರ್ಹತೆಗಳು : ಅಭ್ಯರ್ಥಿಗಳು ಕನಿಷ್ಠ 30 ರಿಂದ 50 ವರ್ಷದವರೆ ಇದ್ದವರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ : ಡಿಪ್ಲೊಮ / ಬಿಇ / ಬಿ.ಟೆಕ್ / ಎಂ.ಇ / ಎಂ.ಟೆಕ್‌ ಅನ್ನು ಇತರೆ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಥವಾ ಏರೋನಾಟಿಕಲ್(Aeronautical) ವಿಷಯಗಳಲ್ಲಿ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.

ಅಪ್ಲಿಕೇಶನ್‌ ಶುಲ್ಕ ವಿವರ

ಒಬಿಸಿ(OBC) ಹಾಗೂ ಸಾಮಾನ್ಯ ಅಭ್ಯರ್ಥಿಗಳು ರೂ.25 ಶುಲ್ಕ ಪಾವತಿಸಬೇಕು. ಮತ್ತು ಶುಲ್ಕ ವಿನಾಯಿತಿಯನ್ನು ಇತರೆ ಯಾವುದೇ ಕೆಟಗರಿ ಅಭ್ಯರ್ಥಿಗಳಿಗೆ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಯನ್ನು ಆನ್‌ಲೈನ್‌ ಮೂಲಕವೇ ಮಾಡಬಹುದು.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುವ ಆರಂಭಿಕ ದಿನಾಂಕ : 24-06-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸುವ ಕೊನೆ ದಿನಾಂಕ : 13-07-2023

ಯುಪಿಎಸ್‌ಸಿ ಅಧಿಸೂಚಿಸಿರುವ ಮೇಲಿನ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಕೆ ?

ಮೊದಲು ಈ ವೆಬ್ ವಿಳಾಸ https://www.upsconline.nic.in/ora/VacancyNoticePub.php ಕ್ಕೆ ಭೇಟಿ ನೀಡಿ.
ಹುದ್ದೆಗಳ ಲಿಸ್ಟ್‌ ಓಪನ್ ಆದ ಪೇಜ್‌ನಲ್ಲಿ ಇರುತ್ತದೆ.
ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಹುದ್ದೆಯ ಮುಂದಿನ ‘Apply Now’ ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ 3624 ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ನೀವು ಒಂದು ವೇಳೆ ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ‘New Registration’ ಎಂಬಲ್ಲಿ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಈಗಾಗಲೇ ಆಯೋಗದ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್‌ ಪಡೆದವರಾಗಿದ್ದಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ.

ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.upsc.gov.in/

ರಶ್ಮಿತಾ ಅನೀಶ್

Exit mobile version