`ಸಿದ್ದರಾಮೋತ್ಸವʼಕ್ಕೆ ಪ್ರತಿಯಾಗಿ `ಕೆಂಪೇಗೌಡ ಉತ್ಸವʼಕ್ಕೆ ಮುಂದಾದ ಡಿಕೆಶಿ

Congress

ಕಾಂಗ್ರೆಸ್ನಲ್ಲಿ ಉತ್ಸವʼ ರಾಜಕೀಯ(Utsav plans among congress leaders) ಇದೀಗ ಹೊಸ ಸ್ವರೂಪ ಪಡೆಯುತ್ತಿದೆ.

ಸಿದ್ದರಾಮಯ್ಯ(Siddaramaiah) ಪರೋಕ್ಷವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಬೆಂಬಲಿಗರ ಮೂಲಕ ಸಿದ್ದರಾಮೋತ್ಸವʼ ಕಾರ್ಯಕ್ರಮ ಮಾಡಲು ಮುಂದಾಗಿದ್ದರೆ.

ಇತ್ತ ಡಿ.ಕೆ.ಶಿವಕುಮಾರ್(DK Shivkumar) ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು, ಕೆಂಪೇಗೌಡ ಉತ್ಸವ ಮಾಡಲು (Utsav plans among congress leaders) ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಮೂಲಗಳ ಪ್ರಕಾರ, ಹಳೆ ಮೈಸೂರು ಭಾಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದು, ಕೆಂಪೇಗೌಡ ಉತ್ಸವಕ್ಕೆ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.

https://vijayatimes.com/shimmoga-drama-has-been-stopped/

ಬೃಹತ್ ಸಮಾವೇಶ ನಡೆಸಿದರೆ ಸಮಾವೇಶದ ಸಂಪೂರ್ಣ ಜವಾಬ್ದಾರಿ ಹೊರಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರ ಅಹಿಂದ ಅಸ್ತ್ರಕ್ಕೆ ಒಕ್ಕಲಿಗ ಅಸ್ತ್ರ ಪ್ರಯೋಗಿಸಲು ಡಿಕೆಶಿ ನಿರ್ಧರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲಿ ಈ ಉತ್ಸವ ರಾಜಕೀಯ ಹೊಸ ತಿಕ್ಕಾಟಕ್ಕೆ ಕಾರಣವಾಗಲಿದೆ ಎನ್ನಲಾಗುತ್ತಿದೆ.

ಈ ಕುರಿತು ರಣತಂತ್ರ ರೂಪಿಸಲು ಡಿ.ಕೆ.ಶಿವಕುಮಾರ್ ತಮ್ಮ ಆಪ್ತ ಶಾಸಕರ ಸಭೆ ನಡೆಸಿದ್ದು, ಹಳೇ ಮೈಸೂರು ಭಾಗದಲ್ಲಿಯೇ ಸಮಾವೇಶ ನಡೆಸಲು ಯೋಜಿಸಿದ್ದಾರೆ.

ಅಕ್ಟೋಬರ್ ವೇಳೆಗೆ ಸಮಾವೇಶ ನಡೆಸಲು ಬೇಕಾದ ಎಲ್ಲ ಸಿದ್ದತೆ ಮಾಡಿಕೊಳ್ಳುವಂತೆ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ. ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಬೆಂಬಲ ಪಡೆಯುವ ಮೂಲಕ, ಒಕ್ಕಲಿಗ ಸಮುದಾಯದ ಶಕ್ತಿ ಹಾಗೂ ಬೆಂಬಲದ ಸಂದೇಶ ರವಾನಿಸುವುದು ಡಿಕೆಶಿ ಲೆಕ್ಕಾಚಾರವಾಗಿದೆ. ಇನ್ನೊಂದೆಡೆ ಸಿದ್ದರಾಮೋತ್ಸವ ನಡೆಸಲು ಭಾರೀ ಸಿದ್ದತೆಗಳನ್ನು ಮಾಡಲಾಗುತ್ತಿದೆ.

ಹೈಕಮಾಂಡ್ನ ಅನೇಕ ನಾಯಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ಐದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ. ಇನ್ನು ಇಂದು “ಸಿದ್ದರಾಮಯ್ಯ ಅಮೃತ ಮಹೋತ್ಸವ”ದ ಮಾಹಿತಿಯನ್ನ, ಅಮೃತ ಮಹೋತ್ಸವ ಸಮಿತಿ ಅಧಿಕೃತವಾಗಿ ಪ್ರಕಟಿಸಲಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ನೇತೃತ್ವದ ಸಮಿತಿಯಲ್ಲಿ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಎಚ್.ಸಿ. ಮಹದೇವಪ್ಪ, ಜಮೀರ್ ಅಹಮ್ಮದ್, ಜಯಮಾಲ, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಪಿಜಿಆರ್ ಸಿಂಧ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸದಸ್ಯರಾಗಿದ್ದಾರೆ.
Exit mobile version