ಉತ್ತರ ಪ್ರದೇಶದ 5000 ಮದರಸಗಳನ್ನು ಮುಚ್ಚಿದ ಯೋಗಿ ಸರ್ಕಾರ

UP

ಲಕ್ನೋ ಸೆ 17 : ಉತ್ತರ ಪ್ರದೇಶದ 5000 ಮದರಸಗಳನ್ನು ಯೋಗಿ ಆದಿತ್ಯನಾಥ ಸರ್ಕಾರವು ಮುಚ್ಚಿದೆ. ಮದರಸಾಗಳು ಬಹು ಅಕ್ರಮಗಳಲ್ಲಿ ಭಾಗಿಯಾಗಿವೆ ಮತ್ತು ಅನೇಕ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ತನಿಖೆಯಲ್ಲಿ ಬಹಿರಂಗವಾದ ನಂತರ ಮದರಸಾಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ.

ಉತ್ತರ ಪ್ರದೇಶ ಅಲ್ಪಸಂಖ್ಯಾತ ಆಯೋಗದ ಸದಸ್ಯ ಸುರೇಶ್ ಜೈನ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಹಲವು ಮದರಸಾಗಳು ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿಯ ಪೋರ್ಟಲ್‌ನಲ್ಲಿ ಡೇಟಾವನ್ನು ಅಪ್‌ಲೋಡ್ ಮಾಡುತ್ತಿಲ್ಲ. ಮದರಸಾಗಳಿಗೆ ಡೇಟಾ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದಿದ್ದಾರೆ.

ಅಕ್ರಮ ಮದರಸಾಗಳನ್ನು ಮುಚ್ಚುವ ಮೂಲಕ ಸರ್ಕಾರವು 100 ಕೋಟಿಗೂ ಹೆಚ್ಚು ಹಣವನ್ನು ಉಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಜೈನ ಮತ್ತು ಸಿಖ್ ಸಮುದಾಯ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತದೆ ಎಂದಿದ್ದಾರೆ.

ಉತ್ತರಪ್ರದೇಶದ ಅಜಮ್‌ಗಢ ಮತ್ತು ಮಿರ್ಜಾಪುರದಲ್ಲಿ ನಕಲಿ ಮದ್ರಸಾ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ 21 ನಕಲಿ ಸಂಸ್ಥೆಗಳನ್ನು ನಡೆಸಿದ್ದಕ್ಕಾಗಿ ಮತ್ತು ಸರ್ಕಾರದಿಂದ ಕೋಟಿಗಟ್ಟಲೆ ಅನುದಾನವನ್ನು ಪಡೆದಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದೆ ಎಂದು ವರದಿ ಆಗಿತ್ತು. ಸಿಎಂ ಯೋಗಿ ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು. ಅಜಮ್‌ಗಢದಲ್ಲಿ 250 ಮತ್ತು ಮಿರ್ಜಾಪುರದಲ್ಲಿ 143 ಮದರಸಾಗಳನ್ನು ತನಿಖೆ ಮಾಡಲಾಗಿದೆ.

2017 ರಲ್ಲಿ ಹಗರಣ ಬೆಳಕಿಗೆ ಬಂದ ನಂತರ, ಯೋಗಿ ಸರ್ಕಾರವು ಈ ಮದರಸಾಗಳಿಗೆ ಅನುದಾನವನ್ನು ನಿಲ್ಲಿಸಿತ್ತು. ವಿವರವಾದ ವಿಚಾರಣೆಯ ನಂತರ ಸಂಬಂಧಿತ ಮದರಸಾಗಳು ಅನೇಕ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ತಿಳಿದು ಅವುಗಳನ್ನು ಮುಚ್ಚಲಾಗಿದೆ

Exit mobile version