ಬಿಪಿನ್‌ ರಾವತ್‌ ಸೋದರ ಬಿಜೆಪಿಗೆ ಸೇರ್ಪಡೆ

vijay rawath

ಲಕ್ನೋ ಜ 20 : ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಹಲವು ರೀತಿಯಲ್ಲಿ ಕಸರತ್ತಿ ನಡೆಸುತ್ತಿವೆ. ಇತ್ತೀಚೆಗಷ್ಟೆ ಹೆಲಿಕಾಪ್ಟರ್‌ ದುರಂತದಲ್ಲಿ ಮೃತರಾದ ಸಶಸ್ತ್ರ ಸೇನಾಪಡೆಗಳ ಮೊದಲ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರ ಸೋದರ ವಿಜಯ್‌ ರಾವತ್‌ ಅವರು ಬುಧವಾರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು ಈ ಹನ್ನೆಲೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ನಿವೃತ್ತ ಸೇನಾಧಿಕಾರಿಯಾಗಿರುವ ಕರ್ನಲ್‌ ವಿಜಯ್‌ ರಾವತ್‌ ಅವರನ್ನು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ರಾಜ್ಯಸಭೆ ಸದಸ್ಯ ಅನಿಲ್‌ ಬಲೂನಿ ಅವರು ಬಿಜೆಪಿಗೆ ಬರಮಾಡಿಕೊಂಡರು.

ಉತ್ತರಾಖಂಡ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ, ಜನರಲ್‌ ಬಿಪಿನ್‌ ರಾವತ್‌ ಅವರ ತವರು ನೆಲೆಯಾದ ಉತ್ತರಾಖಂಡದ ಪೌರಿ ಘರ್‌ವಾಲ್‌ ವಿಧಾನಸಭೆ ಕ್ಷೇತ್ರದಿಂದ ಸೋದರ ವಿಜಯ್‌ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ

ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ವಿಜಯ್‌, ನನ್ನ ತಂದೆ ಕೂಡ ಬಿಜೆಪಿ ಜತೆಗೆ ಒಡನಾಟ ಹೊಂದಿದ್ದರು. ಅದೇ ಪಕ್ಷದಲ್ಲಿ ನಾನು ದುಡಿಯಲು ಉತ್ಸಾಹವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶಿಷ್ಟ ಚಿಂತನೆ ಮತ್ತು ದೃಷ್ಟಿಕೋನ ನನ್ನನ್ನು ಪ್ರೇರೇಪಿಸಿದೆ ಎಂದಿದ್ದಾರೆ.

Exit mobile version