ಸರ್ಕಾರಗಳು ಉತ್ತರಾಖಂಡವನ್ನು ಲೂಟಿ ಮಾಡಿವೆ – ಮೋದಿ

ಡೆಹ್ರಾಡೂನ್ ಡಿ 31 : ಈ ಹಿಂದೆ  ಇದ್ದ ಸರ್ಕಾರಗಳು ಉತ್ತರಾಖಂಡವನ್ನು ಲೂಟಿ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.  2022ರ ಪ್ರಾರಂಭದಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್ ರಾಜ್ಯವು ಒಂದು. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಎಡಬಿಡದೆ ಉತ್ತರಾಖಂಡ ಮತ್ತು ಉತ್ತರಪ್ರದೇಶಕ್ಕೆ ಭೇಟಿ ನೀಡುತ್ತಾ ವಿರೋಧ ಪಕ್ಷಗಳ ವಿರುದ್ದ ವಗ್ದಾಳಿ ನಡೆಸುತ್ತಿದ್ದಾರೆ. ಇಂದು ಗುರುವಾರ ಉತ್ತರಾಖಂಡದ ಹಲ್ದ್ವಾನಿಗೆ ಭೇಟಿ ನೀಡಿದ ಪ್ರಧಾನಿ ಮೋದಿ 17,000 ಸಾವಿರ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ  ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ʻಈ ಹಿಂದೆ ಇದ್ದ ಸರ್ಕಾರಗಳು ಉತ್ತರಾಖಂಡವನ್ನು ಎರಡು ಕೈಗಳಿಂದ ಲೂಟಿ ಮಾಡಿವೆ. ರಾಜ್ಯವು ಅಸ್ತಿತ್ವಕ್ಕೆ ಬಂದು 20 ವರ್ಷಗಳು ಕಳೆದರೂ ಸಹ ಯಾವುದೇ ಅಭಿವೃದ್ದಿಯನ್ನು ಸಹ ಮಾಡಿರಲಿಲ್ಲ. ಹಿಂದೆ ಇದ್ದ ಮುಖ್ಯಮಂತ್ರಿಗಳು ನೀವು ಉತ್ತರಾಖಂಡದಲ್ಲಿ ಬೇಕಾದನ್ನು ಲೂಟಿ ಮಾಡಬಹುದು ಆದರೆ, ನನ್ನ ಸರ್ಕಾರವನ್ನ ಮಾತ್ರ ಉಳಿಸಿ ಎಂದು ಹೇಳಿರುವುದನ್ನು ನೋಡಿದ್ದೀರಿʼʼ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪಂಚ ರಾಜ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಪ್ರಸ್ತುತ ಪಂಚರಾಜ್ಯಗಳ ಪೈಕಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಆಡಳಿತ ನಡೆಸುತ್ತಿವೆ. ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಕನಿಷ್ಠ ಮೂರು ರಾಜ್ಯಗಳಲ್ಲಿ ಗೆಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Exit mobile version