ಉತ್ತರಕಾಶಿ ಸುರಂಗ ಕುಸಿತ ಪ್ರಕರಣ: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಮೊದಲ ಫೋಟೊ ಬಿಡುಗಡೆ

ಉತ್ತರಕಾಶಿ (Uttarkashi tunnel collapse case) ಸುರಂಗ ಕುಸಿತದಿಂದಾಗಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಯುತ್ತಿದ್ದು, ಅದೇ

ಸಮಯದಲ್ಲಿ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ಚಿತ್ರ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ.

ಅಮೆರಿಕದ ಆಗರ್ ಯಂತ್ರದೊಂದಿಗೆ ಸಿಲ್ಕ್ಯಾರಾ (Silkyara) ಸುರಂಗದಿಂದ ಎಸ್ಕೇಪ್ ಟನಲ್ ಮಾಡುವ ಕೆಲಸ ಮತ್ತೆ ಆರಂಭವಾಗಲಿದೆ. ದೆಹಲಿಯ ಮೆಕ್ಯಾನಿಕಲ್ ತಂಡ ಅಮೆರಿಕದ ಆಗರ್

ಯಂತ್ರದ ಭಾಗಗಳನ್ನು ಬದಲಾಯಿಸಿದ್ದು, ಯಂತ್ರವನ್ನು (Uttarkashi tunnel collapse case) ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಭೂಕುಸಿತದ ಅವಶೇಷಗಳಲ್ಲಿ ಆರು ಪೈಪ್‌ಗಳನ್ನು ಅಳವಡಿಸಿದ ನಂತರ ಮೊದಲ ಬಾರಿಗೆ ಕಾರ್ಮಿಕರಿಗೆ ಘನ ಆಹಾರವನ್ನು ವಿತರಿಸಲಾಯಿತು. ಇದರೊಂದಿಗೆ ಪೈಪ್ ಮೂಲಕ ಕ್ಯಾಮರಾವನ್ನೂ

ಕಳುಹಿಸಲಾಗಿದ್ದು, ಇದರಿಂದಾಗಿ ಸುರಂಗದ ಒಳಗಿನ ಚಿತ್ರ ಬೆಳಕಿಗೆ ಬಂದಿದೆ. ಒಳಗೆ ಸಿಲುಕಿರುವ ಕಾರ್ಮಿಕರು ಅಧಿಕಾರಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಆದರೆ ಎನ್‌ಎಚ್‌ಐಡಿಸಿಎಲ್‌ನ (NHIDCL) ನಿಯಂತ್ರಣ ಕೊಠಡಿಯಲ್ಲಿ ಕೇವಲ ಒಬ್ಬ ಸೈಡ್ ಇಂಜಿನಿಯರ್ ಇರುವುದು ಕಂಡುಬಂದಿದೆ. ಕಂಟ್ರೋಲ್ ರೂಂ ಇನ್ ಚಾರ್ಜ್ ಬಿಟ್ಟರೆ ಇತರ ಜವಾಬ್ದಾರಿಯುತ

ಅಧಿಕಾರಿಗಳು ಕಂಟ್ರೋಲ್ ರೂಂನಲ್ಲಿ (Control Room) ಕಾಣಿಸಲಿಲ್ಲ.ರಾತ್ರಿಯ ಸಮಯದಲ್ಲಿ, ವಿಪತ್ತು ನಿರ್ವಹಣಾ ಸಹಾಯ ಕೇಂದ್ರದಲ್ಲಿ ನೌಕರರು ಸಿದ್ಧರಾಗಿದ್ದಾರೆ.

ಈ ಪರ್ಯಾಯ ಪೈಪ್​ಲೈನ್ (Pipeline) ಮೂಲಕ ನಾವು ಆಹಾರ, ಮೊಬೈಲ್ ಮತ್ತು ಚಾರ್ಜರ್‌ಗಳನ್ನು ಸುರಂಗದೊಳಗೆ ಕಳುಹಿಸಬಹುದು ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ

ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರಿಗೆ ಯಾವ ಆಹಾರ ಪದಾರ್ಥಗಳನ್ನು ಕಳುಹಿಸಲಾಗುವುದು, ಕಾರ್ಮಿಕರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಆಹಾರ

ಆಯ್ಕೆಗಳ ಕುರಿತು ವೈದ್ಯರ ಸಹಾಯದಿಂದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಇದನ್ನು ಓದಿ: ಈ ಸೀಕ್ರೆಟ್ ಗೊತ್ತಾದ್ರೆ ನೀವು ಯಾವಾಗಲೂ ಸಿಹಿ ಗೆಣಸು ತಿನ್ನಬೇಕು ಅಂತೀರಾ!

Exit mobile version