ಉತ್ತರಕಾಶಿ ಸುರಂಗ ಕುಸಿತ: 5 ದಿನ ಕಳೆದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ

Dehradun: ಉತ್ತರಕಾಶಿಯಲ್ಲಿ (Uttarakashi) ಸುರಂಗ ಮಾರ್ಗ ಕುಸಿದು 96 ಗಂಟೆಗಳು ಕಳೆದರೂ, 40 ಕಾರ್ಮಿಕರು (Uttarkashi Tunnel Collapse) ಅವಶೇಷಗಳ ಹಿಂಬದಿ ಸಿಲುಕಿಕೊಂಡಿದ್ದು,

ಅವರ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ. ಕಾರ್ಮಿಕರಿಗೆ ಆಹಾರ, ಔಷಧಗಳ ಪೂರೈಕೆ ಮಾಡಲಾಗುತ್ತಿದ್ದು, ಬುಧವಾರ ಭೂಕುಸಿತ ಉಂಟಾದ ಹಿನ್ನೆಲೆ ರಕ್ಷಣಾ ಕಾರ್ಯ ವಿಳಂಬವಾಗಿದ್ದು, ಸುರಂಗದ ಎದುರು

ಕಾರ್ಮಿಕರುಹಾಗೂ ಅವರ ಕುಟುಂಬದವರು (Uttarkashi Tunnel Collapse) ಪ್ರತಿಭಟನೆ ನಡೆಸುತ್ತಿದ್ದಾರೆ.

ಸುರಂಗ ಮಾರ್ಗವು ನವೆಂಬರ್ (November) 12 ರಂದು ಕುಸಿದಿತ್ತು. ಸಿಕ್ಕಿಬಿದ್ದ ಕಾರ್ಮಿಕರಿಗೆ ಆಹಾರ ಮತ್ತು ಔಷಧಗಳ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದ್ದು, ಅಧಿಕಾರಿಗಳು

ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಿಕ್ಕಿಬಿದ್ದಿರುವ ಕಾರ್ಮಿಕರಿಗೆ (Employee) ಸುರಕ್ಷಿತ ಮಾರ್ಗವನ್ನು ಸಿದ್ಧಪಡಿಸಲು ಅವಶೇಷಗಳನ್ನು ಕೊರೆಯಲು ನಿಯೋಜಿಸಲಾದ ಯಂತ್ರಗಳು

ಮಂಗಳವಾರ ಸಂಜೆ ಕೆಲಸ ಮಾಡದಿದ್ದಾಗ ಪರ್ಯಾಯ ಯೋಜನೆ ಇಲ್ಲದಿರುವ ಬಗ್ಗೆ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ದೆಹಲಿಯಿಂದ (Dehli) ಬದಲಿ ಯಂತ್ರದ ಆಗಮನವನ್ನು ಕೊರೆಯುವ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರೀಕ್ಷಿಸಲಾಗುತ್ತಿದ್ದು, ಬ್ರಹ್ಮಾಖಲ್-ಯಮುನೋತ್ರಿ (Yamunotri) ರಾಷ್ಟ್ರೀಯ

ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವಿನ ನಿರ್ಮಾಣ ಹಂತದ ಸುರಂಗದ ಒಂದು ಭಾಗವು ಕುಸಿದಿದೆ. 15 ಜಾರ್ಖಂಡ್, ಎಂಟು ಉತ್ತರ ಪ್ರದೇಶ, ಐದು ಒಡಿಶಾ, 4 ಬಿಹಾರ (Bihar),

4 ಪಶ್ಚಿಮ ಬಂಗಾಳ, 3 ಉತ್ತರಾಖಂಡ ಮತ್ತು ಅಸ್ಸಾಂನಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶದ ಒಬ್ಬರಿದ್ದಾರೆ.

ದಿಲ್ಲಿಯಿಂದ ಆಗಮಿಸಿದ ಯಂತ್ರ
ದಿಲ್ಲಿಯಿಂದ ಅತ್ಯಾಧುನಿಕ ಮಾದರಿಯ ಮೂರು ಯಂತ್ರಗಳನ್ನು ರಕ್ಷಣಾ ಕಾರ್ಯಾಚರಣೆಗೆ ತರಿಸಿಕೊಳ್ಳಲಾಗಿದ್ದು, ವಿಶೇಷ ವಿಮಾನದಲ್ಲಿ ಮೂರು ಯಂತ್ರಗಳನ್ನು ಡೆಹ್ರಾಡೂನ್‌ಗೆ (Dehradun)

ತೆಗೆದುಕೊಂಡು ಬಂದು, ಅಲ್ಲಿಂದ ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಹೊಸ ಯಂತ್ರಗಳ ಮೂಲಕ ತ್ವರಿತಗತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಬಹುದು. ಕಾರ್ಯಾಚರಣೆಗೆ ದಿಲ್ಲಿ ಮೆಟ್ರೊ (Delhi Metro)

ಹಾಗೂ ಭಾರತೀಯ ರೈಲ್ವೆಯ ತಂತ್ರಜ್ಞರ ನೆರವು ಪಡೆದುಕೊಳ್ಳಲಾಗುತ್ತಿದೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಆಹಾರ, ಆಮ್ಲಜನಕ ಪೂರೈಕೆ
ಸುರಂಗ ಮಾರ್ಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು 900 ಮಿ.ಮೀ. ವ್ಯಾಸದ ಪೈಪ್‌ಅನ್ನು ಸುರಂಗ ಮಾರ್ಗಕ್ಕೆ ಅಳವಡಿಸಲಾಗುತ್ತಿದ್ದು, ಕೊಳವೆಯು ಕಾರ್ಮಿಕರು ಇರುವ ಸ್ಥಳಕ್ಕೆ

ತಲುಪಿದರೆ ಎಲ್ಲರು ಸುರಕ್ಷಿತವಾಗಿ ಹೊರ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಆಹಾರ ಪೊಟ್ಟಣ , ಔಷಧ, ನೀರು, ಆಮ್ಲಜನಕವನ್ನು ಕೊಳವೆ ಮೂಲಕವೇ ಪೂರೈಸಲಾಗುತ್ತಿದೆ ಎಂದು ರಕ್ಷಣಾ ತಂಡಗಳು ಹೇಳಿವೆ.

ಜೆಸಿಬಿ ಯಂತ್ರ, ಪವರ್‌ ಜನರೇಟರ್‌ (Power Generator) ಸೇರಿದಂತೆ ಹಲವು ಸಣ್ಣಪುಟ್ಟ ಯಂತ್ರಗಳನ್ನು ಬಳಸಿಕೊಂಡು ಕಾರ್ಮಿಕರ ರಕ್ಷಣೆಗೆ ಸತತ ಪ್ರಯತ್ನ ನಡೆಸುತ್ತಿದ್ದೇವೆ. ಕಾರ್ಮಿಕರು ಸಿಲುಕಿರುವ

ಪ್ರದೇಶ ತಲುಪಲು ಕುಸಿದಿರುವ ಮಣ್ಣಿನ ಭಾಗವನ್ನು ತೆರವು ಮಾಡಲಾಗುತ್ತಿದ್ದು, ಸುಮಾರು 20 ಮೀಟರ್‌ ಉದ್ದದಷ್ಟು ಅವಶೇಷ ತೆರವುಗೊಳಿಸಲಾಗಿದೆ. 50 ಮೀಟರ್‌ ಮಣ್ಣು ತೆರವು ಮಾಡಬೇಕಾಗಿದೆ.

ಸಡಿಲವಾದ ಮಣ್ಣು ಪದೇಪದೆ ಕುಸಿಯುತ್ತಿದ್ದು, ಹೀಗಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ಎನ್‌ಡಿಆರ್‌ಎಫ್‌ (NDRF), ಎಸ್‌ಡಿಆರ್‌ಎಫ್‌ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕರ್ನಲ್‌

ದೀಪಕ್‌ ಪಾಟೀಲ್‌ (Karnal Deepak Patil) ತಿಳಿಸಿದ್ದಾರೆ.

ಇದನ್ನು ಓದಿ: ಮನೆ ಮದ್ದು: ಒಣ ಕೆಮ್ಮನ್ನು ಹೋಗಲಾಡಿಸಲು ಆಯುರ್ವೇದಿಕ್ ಉಪಯುಕ್ತ ಮಾಹಿತಿ

Exit mobile version