ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ : ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ಗಳನ್ನು (Data Entry Operator) ನೇಮಕ ಮಾಡಿಕೊಳ್ಳಲು (vacancy in Gram Panchayat) ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 5980 ಡಾಟಾ ಎಂಟ್ರಿ ಆಪರೇಟರ್ಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಅದರ (vacancy in Gram Panchayat) ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನೇಮಕಾತಿ ಪ್ರಾಧಿಕಾರ : ಜಿಲ್ಲಾ ಪಂಚಾಯಿತಿಯ ಸಿಇಒ (CEO) ಅಧ್ಯಕ್ಷತೆಯ ಸಮಿತಿ
ವೇತನ : 16,738 ರೂ ವೇತನ ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ : PUC ಪಾಸ್ ಆಗಿರಬೇಕು. ರಾಜ್ಯ ಸರ್ಕಾರ ದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಕೇಂದ್ರಗಳಿಂದ ತರಬೇತಿ ಪಡೆದ ಕಂಪ್ಯೂಟರ್ ಟ್ರೈನಿಂಗ್ (Computer Training)

ತರಬೇತಿ ಪ್ರಮಾಣ ಹೊಂದಿರಬೇಕು.
ಆಯ್ಕೆ ವಿಧಾನ : PUC ಅಂಕಗಳು ಹಾಗೂ ಕಂಪ್ಯೂಟರ್ ತರಬೇತಿ ಸರ್ಟಿಫಿಕೇಟ್ ಗಳನ್ನು ಆಧರಿಸಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ

ಅಧಿಸೂಚನೆ, ಅರ್ಜಿ ಸ್ವೀಕಾರ ಯಾವಾಗ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈಗಾಗಲೇ ಈ ಹುದ್ದೆಗಳ ಭರ್ತಿ ಕುರಿತು ಸುತ್ತೋಲೆ ಹೊರಡಿಸಿದ್ದು, ಅಧಿಸೂಚನೆ ಬಿಡುಗಡೆ ಮಾಡಿ, ಅರ್ಜಿ ಸ್ವೀಕರಿಸುವ ಸಾಧ್ಯತೆ ಇದೆ.

ಸೇವಾನಿರತರಿಗೆ ಮೊದಲ ಆದ್ಯತೆಗೆ ಆಗ್ರಹ :
ಈಗಾಗಲೇ ಡಾಟಾ ಎಂಟ್ರಿ ಆಪರೇಟರ್ಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ (Clerk Co) ಡಾಟಾ ಎಂಟ್ರಿ ಆಪರೇಟರ್

ನೌಕರರ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ಒತ್ತಾಯಿಸಿದ್ದಾರೆ.

ಇದನ್ನು ಓದಿ: ಹುಲಿ ಉಗುರು ಪ್ರಕರಣ : ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲಾ – ನಟ ಜಗ್ಗೇಶ್ ಪ್ರತಿಕ್ರಿಯೆ

Exit mobile version