Karnataka: ಧಾರವಾಡದ (Dharawad) ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಆಹ್ವಾನಿಸಲಾಗಿರುವ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವದ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆ ಹೆಸರು : ಪ್ರೂಫ್ ರೀಡರ್ (Proof Reader)
ಹುದ್ದೆಗಳ ಸಂಖ್ಯೆ : 1
ವಿದ್ಯಾರ್ಹತೆ : ಪದವಿ ಪಾಸ್ ಜತೆಗೆ ಪ್ರೂಫ್ ರೀಡರ್ ಪರೀಕ್ಷೆ ತೇರ್ಗಡೆ ಹೊಂದಿರಬೇಕು.
ವೇತನ: 27650-52650ರೂ.ಗಳು
ಹುದ್ದೆ ಹೆಸರು : ಕಾರ್ಪೆಂಟರ್ ಕಂ ಪೇಂಟರ್ (Carpenter Co Painter)
ಹುದ್ದೆಗಳ ಸಂಖ್ಯೆ : 1
ವಿದ್ಯಾರ್ಹತೆ : ಡ್ರಾಯಿಂಗ್ ಕ್ರಾಪ್ಟಮನ್ ಶಿಫ್ಟ್ನಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.
ವೇತನ : 21,400- 42000ರೂ.ಗಳು
ಹುದ್ದೆ ಹೆಸರು : ಇಲೆಕ್ಟ್ರೀಷಿಯನ್(Electrician)
ಹುದ್ದೆಗಳ ಸಂಖ್ಯೆ : 1
ವಿದ್ಯಾರ್ಹತೆ : SSLC ಜೊತೆಗೆ ಇಲೆಕ್ಟ್ರಿಕಲ್ ಸೂಪರ್ವೈಜರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ: 23,500-47,650ರೂ.ಗಳು
ಅರ್ಜಿ ಹಾಕುವ ವಿಧಾನ :
ಅಭ್ಯರ್ಥಿಗಳು ಕರ್ನಾಟಕದ ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ www.kud.ac.in ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ (Applicaton Download) ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಭರ್ತಿ ಮಾಡಿದ ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ, ನಿಗದಿತ ದಿನಾಂಕದೊಳಗೆ – ಕುಲಸಚಿವರು, ಕರ್ನಾಟಕ ವಿಶ್ವವಿದ್ಯಾಲಯ, ಪಾವಟೆನಗರ, ಧಾರವಾಡ – 580003 ಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 28-11-2023 ರ ಸಂಜೆ 06 ಗಂಟೆ.
ಅರ್ಜಿ ಶುಲ್ಕವನ್ನು – ಹಣಕಾಸು ಅಧಿಕಾರಿ, ಕರ್ನಾಟಕ ವಿವಿ, ಧಾರವಾಡ ರವರ ಹೆಸರಿನಲ್ಲಿ700ರೂ.ಗಳ DD ತೆಗೆಯುವ ಮೂಲಕ ಪಾವತಿಸಬೇಕು. ಈ ರಶೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ನೇಮಕಾತಿ ವಿಧಾನ : ಮೆರಿಟ್ ಲಿಸ್ಟ್ (Metric List) ಸಿದ್ಧಪಡಿಸಿ ಮೀಸಲಾತಿ ಆಧಾರದಲ್ಲಿ ಆಯ್ಕೆಪಟ್ಟಿ ತಯಾರಿಸಿ ಬಿಡುಗಡೆ ಮಾಡಲಾಗುತ್ತದೆ.