ಮೆಟ್ರೋ ರೈಲ್ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಾರಾಷ್ಟ್ರ ಮೆಟ್ರೋ ರೈಲ್ ನಿಗಮ (MMRCL)ದಲ್ಲಿ ಖಾಲಿ ಇರುವ 134 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಇರಬೇಕಾದ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ, ಅರ್ಜಿ ಶುಲ್ಕ, ನೇಮಕಾತಿ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನೇಮಕಾತಿ ಪ್ರಾಧಿಕಾರ : ಮಹಾರಾಷ್ಟ್ರ (Maharashtra) ಮೆಟ್ರೋ ರೈಲ್ ನಿಗಮ
ಹುದ್ದೆಗಳ ವಿವರ
ಲಿಫ್ಟ್ ಅಂಡ್ ಎಸ್ಕಲೇಟರ್ ಮೆಕ್ಯಾನಿಕ್ (Lift and Escalator Mechanic) : 07
ಇಲೆಕ್ಟ್ರೀಷಿಯನ್ (Electrician) : 45
ಫಿಟ್ಟರ್ (Fitter) : 45
ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic) : 32
ಫ್ರಿಡ್ಜ್ ಅಂಡ್ ಎಸಿ ಮೆಕ್ಯಾನಿಕ್ : 05
ಒಟ್ಟು – 134

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 28-10-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 28-11-2023

ಶೈಕ್ಷಣಿಕ ವಿದ್ಯಾರ್ಹತೆ : SSLC ಜೊತೆಗೆ ITI ಪಾಸ್ ಮಾಡಿರಬೇಕು. NCVT ಅಥವಾ SCVT ಪ್ರಮಾಣ ಪತ್ರ ಪಡೆದಿರಬೇಕು.

ವಯೋಮಿತಿ : ಕನಿಷ್ಠ 17 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳು 27 ವರ್ಷದವರೆಗೆ, SC/ ST ಅಭ್ಯರ್ಥಿಗಳಿಗೆ 29 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ವಿಧಾನ : ITI ನಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ : 100 ರೂ.ಗಳು
ತರಬೇತಿ ಅವಧಿಯಲ್ಲಿ ಸ್ಟೈಫಂಡ್ : ಮಾಸಿಕ 8,050 ರೂ.ಗಳು

ಅರ್ಜಿ ಸಲ್ಲಿಕೆ : MMRCL ವೆಬ್ಸೈಟ್ಗೆ (Website) ಭೇಟಿ ನೀಡಿ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಕೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ, SSLC ಮತ್ತು ITI ಸರ್ಟಿಫಿಕೇಟ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತರೆ ಮಾಹಿತಿಗಳು / ದಾಖಲೆಗಳು ಅಗತ್ಯ.

Exit mobile version