ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆಯು ಕ್ರೀಡಾ ಮೀಸಲಾತಿಯಡಿ 1899 ಹುದ್ದೆಗಳ (vacancy in postal department) ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ ಇಲಾಖೆಯು ಬಿಡುಗಡೆ

ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, 64 ಬಗೆಯ ಕ್ರೀಡೆಗಳಲ್ಲಿ ಭಾಗಿಯಾಗಿರುವರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾಗಿರು ಅರ್ಹತೆ ಮತ್ತು ನೇಮಕಾತಿ ವಿಧಾಮ

ಸೇರಿದಂತೆ ಸಂಪೂರ್ಣ (vacancy in postal department) ವಿವರ ಇಲ್ಲಿದೆ.

ಹುದ್ದೆವಾರು ವೇತನ :
ಪೋಸ್ಟಲ್ ಅಸಿಸ್ಟಂಟ್(Postal Assistant) : 25,500-81,000.ರೂ.ಗಳು
ಸಾರ್ಟಿಂಗ್ ಅಸಿಸ್ಟಂಟ್(Sorting Assistant): 25,500-81,000. ರೂ.ಗಳು
ಪೋಸ್ಟ್ಮ್ಯಾನ್ (Postman) : 21,700-69,100. ರೂ.ಗಳು
ಮೇಲ್ ಗಾರ್ಡ್(Mail Guard): 21,700-69,100. ರೂ.ಗಳು
ಎಂಟಿಎಸ್ : 18,000-56,900. ರೂ.ಗಳು

ಅರ್ಜಿ ಸಲ್ಲಿಕೆಗೆ ಬೇಕಿರುವ ಅರ್ಹತೆಗಳು :

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿರಬೇಕು.
ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿರಬೇಕು.
ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿರಬೇಕು.
ಶಾಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿರಬೇಕು.
ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿದವರು.

ಸೂಚನೆ: ಅಭ್ಯರ್ಥಿಗಳು ಅಪ್ಲಿಕೇಶನ್ ಸ್ಟೇಜ್-2 ನಲ್ಲಿ ತಾವು ಭಾಗವಹಿಸಿ ಸಾಧಿಸಿದ ಕ್ರೀಡಾಕೂಟದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು.

ಅರ್ಜಿ ಶುಲ್ಕ ಮಾಹಿತಿ
GM ಅಭ್ಯರ್ಥಿಗಳಿಗೆ : 100.
OBC ಅಭ್ಯರ್ಥಿಗಳಿಗೆ : 100.
SC / ST / ಪ್ರವರ್ಗ-1 : ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಮೊಬೈಲ್ ನಂಬರ್(Mobile Number)
ಇ-ಮೇಲ್ ವಿಳಾಸ
ಜನ್ಮ ದಿನಾಂಕ ಮಾಹಿತಿ
ಕ್ರೀಡಾಕೂಟದ ಮಾಹಿತಿ
ವಿದ್ಯಾರ್ಹತೆ ಮಾಹಿತಿ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್(November) 10 ರಿಂದ ಡಿಸೆಂಬರ್ (December)09 ರವರೆಗೆ

ಇದನ್ನು ಓದಿ: ಮನೆ ಮದ್ದು: ಒಣ ಕೆಮ್ಮನ್ನು ಹೋಗಲಾಡಿಸಲು ಆಯುರ್ವೇದಿಕ್ ಉಪಯುಕ್ತ ಮಾಹಿತಿ

Exit mobile version