ವಾಟ್ಸ್ ಆಪ್ ಮುಖಾಂತರ ವ್ಯಾಕ್ಸಿನೇಷನ್ ಸರ್ಟಿಫಿಕೇಟ್

ನವದೆಹಲಿ, ಆ. 09: ಕೊರೊನ ಲಸಿಕೆ ಪಡೆದ ಸಾರ್ವಜನಿಕರು ತಮ್ಮ ವ್ಯಾಕಿನೇಷನ್  ಸರ್ಟಿಫಿಕೇಟ್ ಅನ್ನು ತಮ್ಮ ಮೊಬೈಲ್ ಮೂಲಕವೇ ಪಡೆದು ಕೊಳ್ಳಬಹುದಾದ ಆಯ್ಕೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಇದು ಅತ್ಯಂತ ಸುಲಭದ ವಿಧಾನವಾಗಿದ್ದು +919013151515 ಈ ಸಂಖ್ಯೆಗೆ covid certificate ಎಂದು ಟೈಪ್ ಮಾಡಿ, ಒಟಿಪಿಯನ್ನು ನಮೂದಿಸಿದರೆ ಕೆಲವೇ ಸೆಕೆಂಡ್ ಗಳಲ್ಲಿ ಪ್ರ,ಮಾಣಪತ್ರವನ್ನು ಪಡೆದು ಕೊಳ್ಳಬಹುದಾಗಿದೆ. ಇದಕ್ಕೂ ಮೊದಲು ಕೋವಿನ್ ಪೋರ್ಟಲ್ ಗೆ ಲಾಗಿನ್ ಆಗುವ ಮೂಲಕ ಪ್ರಮಾಣಪತ್ರ ಪಡೆಯಬಹುದಾಗಿತ್ತು . ಆದರೆ ಇದೀಗ ವಾಟ್ಸ್ ಆಪ್ ಮೂಲಕ ಪ್ರಮಾಣ ಪತ್ರ ನೀಡುವ ಆಯ್ಕೆ ನೀಡಿದ್ದು ಇದು ಜನಸಾಮನ್ಯರಿಗೆ ಮತ್ತಷ್ಟು ಅನುಕೂಲವಾಗಲಿದೆ.

Exit mobile version