ಕೊರನಾ ಲಸಿಕೆಯನ್ನು ಯಾವುದೇ ಯೋಜನೆಯಡಿ ಜೋಡಿಸಿಲ್ಲ – ಪಿ. ರವಿ ಕುಮಾರ್

ಬೆಂಗಳೂರು ಸೆ 3 : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತ ಇತ್ತೀಚೆಗಷ್ಟೇ ವಿನೂತನ ಪ್ರಯತ್ನಕ್ಕೆ ಕೈಹಾಕಿತ್ತು. ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿ ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತೋರಿಸಿದರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದ್ದರು ಇದರ ಜೊತೆಗೆ ವ್ಯಾಕ್ಷಿನ್ ಪ್ರಮಾಣಪತ್ರ ಇದ್ದರೆ ಮಾತ್ರ ಮಾಶಾಸನ ಪಾವತಿ ಮಾಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.

ಈ ಬಗ್ಗೆ ಪ್ರತಿಕಿಯಿಸಿರುವ  ಕರ್ನಾಟಕ ಸರ್ಕಾರ‌ದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್  ಕೊರೋನಾ ಲಸಿಕೆ ಪಡೆಯುವವರಿಗೆ ಮಾತ್ರ ಪಿಂಚಣಿ, ಎಂದು ಸರ್ಕಾರ ಹೇಳಿಲ್ಲ . ಹಾಗೆಯೇ ಯಾವುದೇ ನಿರ್ಬಂಧ ಹೇರದೆ, ಜನಜಾಗೃತಿ ಮೂಲಕವೇ ಕೊರೋನಾ ಲಸಿಕೆ ಪಡೆಯುವತ್ತ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ಯಾವುದೇ ಯೋಜನೆಗಳ ಜೊತೆಗೆ ಸರ್ಕಾರ ಕೊರೋನಾ ಲಸಿಕಾ ಕಾರ್ಯಕ್ರಮ‌ಗಳನ್ನು ಜೋಡಿಸಿಲ್ಲ, ಮತ್ತು ಜಿಲ್ಲಾಧಿಕಾರಿಗಳ ಇಂತಹ ಹೇಳಿಕೆಯನ್ನು ಕೂಡಲೇ ಕೈಬಿಡುವಂತೆ‌ಯೂ ಅವರು ಸೂಚಿಸಿದ್ದಾರೆ.

ಜೊತೆಗೆ ಸರ್ಕಾರದ  ಜಾಗೃತಿ ಅಭಿಯಾನ‌ದ ಮೂಲಕವೇ ಕೊರೋನಾ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ರಾಜ್ಯ‌ದ ಎಲ್ಲಾ ಜಿಲ್ಲಾಧಿಕಾರಿ‌ಗಳು, ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ರವಿ ಕುಮಾರ್ ತಿಳಿಸಿದ್ದಾರೆ.

Exit mobile version