ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾ. 02: ದೇಶದ ಪ್ರಧಾನಿಯೇ ಏಮ್ಸ್​ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಕೃಷಿ ಸಚಿವ ಬಿ. ಸಿ ಪಾಟೀಲ್‌ ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್​ ಸರ್ವೀಸ್ ಪಡೆದಿದ್ದಾರೆಂದು ಟೀಕೆ ವ್ಯಕ್ತವಾಗಿದೆ. ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿದ್ದು, ಸಧ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪನವ್ರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವ್ರು ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ ಎಂದರು.

ಪೂರ್ಣ ಪ್ರಜ್ಞ ಲೇಔಟ್‌ʼನ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ  ಬಿ.ಎಸ್ ​ಯಡಿಯೂರಪ್ಪ ‘ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳೋದು ಮುಖ್ಯ. ಹೀಗಾಗಿ ಯಾರ್ಯಾರಿಗೆ ಎಲ್ಲಿಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ. ನಾನು ಮನೇಲಿ ಲಸಿಕೆ ಹಾಕಿಸಿಕೊಳ್ಳಬೇಕಾ? ಅಥವಾ ಆಸ್ಪತ್ರೆಗೆ ಹೋಗಿ ಹಾಕಿಸಿಕೊಳ್ಬೇಕಾ ಎಂದು ನೋಡುತ್ತೇನೆ‌. ಇನ್ನೆರಡು ದಿನಗಳಲ್ಲಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ’ ಎಂದಿದ್ದಾರೆ. ಈ ಹೇಳಿಕೆ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Exit mobile version