ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ವೀರಪ್ಪಮೊಯ್ಲಿ ಕಣಕ್ಕೆ? ಬಿಜೆಪಿ ಮಣಿಸಲು ಭರ್ಜರಿ ಪ್ಲಾನ್‌

Bengaluru Rural: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಆದ್ರೆ ಇದನ್ನು ವಶ ಪಡಿಸಿಕೊಳ್ಳಲು ಕಾಂಗ್ರೆಸ್ (veerappa moily vs bjp) ಸದ್ದಿಲದೆ

ಕೆಲಸ ಮಾಡುತ್ತಿದೆ. ಹಾಗಾಗಿ ಈಗ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ಅಭ್ಯರ್ಥಿಗಳು ತೆರೆಮರೆಯಲ್ಲಿ

ಕಸರತ್ತು ಮಾಡುತ್ತಿದ್ದಾರೆ. ಆದ್ರೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ವ ಹೆಸರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ವೀರಪ್ಪ ಮೊಯ್ಲಿ ಅವರದ್ದು. 2009, 2014 ರಲ್ಲಿ ಗೆಲುವು ಸಾಧಿಸಿದ್ದ ಮಾಜಿ

ಸಂಸದ ಎಂ.ವೀರಪ್ಪ ಮೊಯ್ಲಿಯವರು (Veerappa Moily) ಬಿಜೆಪಿ ತೆಕ್ಕೆಯಲ್ಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಶತಾಯಗತಾಯ ಕೈ ವಶ ಮಾಡಿಕೊಳ್ಳಬೇಕೆನ್ನುವ ತವಕದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಗೇಪಲ್ಲಿ (Bagepalli), ಚಿಕ್ಕಬಳ್ಳಾಪುರ, ಗೌರಿಬಿದನೂರು , ಹೊಸಕೋಟೆ (Hosakote), ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ (Nelamangala)

ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 1977ರಲ್ಲಿ ರೂಪುಗೊಂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಎಸ್‌.ಎನ್‌.ಪ್ರಸನ್ನಕುಮಾರ್‌,

ಎಂ.ವಿ.ಕೃಷ್ಣಪ್ಪ (M V Krishnappa), ವಿ.ಕೃಷ್ಣರಾಂ, ಆರ್‌.ಎಲ್‌.ಜಾಲಪ್ಪ ನಂತರದಲ್ಲಿ ಎಂ.ವೀರಪ್ಪ ಮೊಯ್ಲಿ 2009ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ನಾಯಿ ಸಾಕಾಣಿಕೆಗೆ ಹೊಸ ರೂಲ್ಸ್ ಜಾರಿ ಮಾಡಿದ BBMP: ನಿಯಮ ಉಲ್ಲಂಘಿಸಿದ್ರೆ ದಂಡ..!

ಕಳೆದ ಚುನಾವಣೆಯಲ್ಲಿ ಬಿ.ಎನ್‌.ಬಚ್ಚೇಗೌಡರವರು (B N Bacchegowda) ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ ಇವರ ಗೆಲುವಿಗೆ ಬಿಜೆಪಿ (BJP) ಹಾಗೂ ಜೆಡಿಎಸ್‌ ನಡುವೆ ನಡೆದ ಒಳ

ಒಪ್ಪಂದವೇ ಕಾರಣ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಈ ಬಾರಿ ಪುನಃ ಚುನಾವಣಾ ತಯಾರಿ ಶುರುವಾಗಿದ್ದು, ದಶಕಗಳಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರದಲ್ಲಿ

ಈ ಬಾರಿ ಕಾಂಗ್ರೆಸ (Congress) ಅನ್ನು ಮಣಿಸುವುದು ಬಿಜೆಪಿಗೆ (veerappa moily vs bjp) ದೊಡ್ಡ ಸವಾಲಾಗಿಲಿದೆ.

ಆರ್‌.ಎಲ್‌.ಜಾಲಪ್ಪ (R L Jalappa) 1996ರಲ್ಲಿ ಜನತಾ ದಳದಿಂದ ಗೆಲುವು ಕಂಡಿದ್ದು, ಆ ನಂತರದ 3 ಚುನಾವಣೆಗಳಲ್ಲಿಕಾಂಗ್ರೆಸ್‌ ಸತತ ಗೆಲುವು ಸಾಧಿಸಿತು. ಕೇಂದ್ರ ಸಚಿವರಾಗಿದ್ದ ಆರ್‌.ಎಲ್‌.ಜಾಲಪ್ಪರ

ಕೊಡುಗೆಯಿಂದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಪಕ್ಷದ ಚೌಕಟ್ಟಿಗೆ ಸೀಮಿತವಾಗಿತ್ತು. ಇವರ ನಂತರ ಎಂ.ವೀರಪ್ಪ ಮೊಯ್ಲಿ 2009ರಿಂದ ಸತತ 2 ಬಾರಿ ಸ್ಪರ್ಧಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಇದೇ ಅವಧಿಯಲ್ಲಿ ಚಿಕ್ಕಬಳ್ಳಾಪುರದ ಹಲವು ಕ್ಷೇತ್ರಗಳು ಇವರ ಕೈವಶವಾದವು.

ಮಾಜಿ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತಾಯಿತು. ಆದರೆ ಕಳೆದ ವಿಧಾನಸಭಾ

ಚುನಾವಣೆಯಲ್ಲಿ ಪ್ರದೀಪ್‌ ಈಶ್ವರ್‌ (Pradeep Eshwar) ಗೆಲುವಿನಿಂದಾಗಿ ಕಾಂಗ್ರೆಸ್‌ ಕಳೆದು ಹೋಗಿದ್ದ ಬಲವನ್ನು ಮರಳಿ ಪಡೆದಿದೆ. ಉಳಿದಂತೆ ಹೊಸಕೋಟೆ, ಗೌರಿಬಿದನೂರು, ಬಾಗೇಪಲ್ಲಿ,

ದೇವನಹಳ್ಳಿ (Devanahalli), ನೆಲಮಂಗಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರೇ ಶಾಸಕರಾಗಿದ್ದಾರೆ. ಇನ್ನು ಉಳಿದಂತೆ ಯಲಹಂಕ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರಗಳು ಮಾತ್ರ ಬಿಜೆಪಿ ತೆಕ್ಕೆಯಲ್ಲಿದ್ದು, ಇಲ್ಲಿ ತಮ್ಮ

ಕಾರ್ಯಕರ್ತರುಗಳನ್ನು ಗಟ್ಟಿಗೊಳಿಸುವ ಹಂತದಲ್ಲಿ ಕಾಂಗ್ರೆಸ್ ತನ್ನ ಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ.

ಕ್ಷೇತ್ರದಾದ್ಯಂತ ಕಾಂಗ್ರೆಸ್ ತನ್ನ ಚುನಾವಣೆ ಸಿದ್ಧತೆಗಳನ್ನು ಆರಂಭಿಸಿದ್ರೂ ಬಿಜೆಪಿ ಮತ್ತು ಜೆಡಿಸ್ (JDS) ನಡೆ ನಿಗೂಢವಾಗಿದೆ. ಕಾಂಗ್ರೆಸ್ 2009 ಮತ್ತು 2014 ರಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

ಅಲ್ಲದೆ ಬಿಜೆಪಿ 2ನೇ ಮತ್ತು ಜೆಡಿಎಸ್‌ 3ನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಮಾಜಿ ಸಿ ಎಂ ಹೆಚ್‌.ಡಿ.ಕುಮಾರಸ್ವಾಮಿಯವರು (H D Kumaraswamy) 2014ರಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಸೋಲಿಸುವ

ನಿಟ್ಟಿನಲ್ಲಿ 2019ರಲ್ಲಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಗಳೇ ಇಲ್ಲದಂತಾಗಿತ್ತು. ಹಾಗಾಗಿ 1.82ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು. ಆದರೆ ಈ ಬಾರಿ ಬಿ.ಎನ್‌.ಬಚ್ಚೇಗೌಡರವರು

ಬಿಜೆಪಿಯಿಂದ ಸ್ಪರ್ಧಿಸುವುದು ಸಂದೇಹವಾಗಿದ್ದು, ಮಾಜಿ ಸಚಿವ ಡಾ.ಕೆ.ಸುಧಾಕರ್‌ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಜೆಡಿಎಸ್‌

ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಅಥವಾ ಮೈತ್ರಿಗೆ ಮೊರೆ ಹೋಗುತ್ತಾ ಅನ್ನೋದನ್ನು ಕಾದು ನೋಡಬೇಕು.

Exit mobile version