ವಾಹನ ಖರೀದಿದಾರರೇ ಎಚ್ಚರ! ವಾಹನ ಶೋರೂಂಗಳಿಂದ ಹಗಲು ದರೋಡೆ. ಆರ್‌ಟಿ ಓ ಹೆಸರಲ್ಲಿ ಶೋ ರೂಂಗಳಿಂದ ಹೆಚ್ಚುವರಿ ಹಣ ಲೂಟಿ. ಇದಕ್ಕೆ ಆರ್‌ಟಿಓ ಅಧಿಕಾರಿಗಳೇ ಕೊಡ್ತಿದ್ದಾರಾ ಸಾಥ್‌?

Vehicle Show room loot. ವಾಹನ ಖರೀದಿದಾರರೇ ಎಚ್ಚರ! ವಾಹನ ಶೋರೂಂಗಳಿಂದ ಹಗಲು ದರೋಡೆ.

ಹೊಸ ವಾಹನ ಖರೀದಿಸ ಹೊರಟಿದ್ದೀರಾ ಎಚ್ಚರ !

ಶೋರೂಂವರು ಗ್ರಾಹಕರಿಂದ ಹೆಚ್ಚುವರಿ ಹಣ ಪಡೀತಾರೆ

ಆರ್‌ಟಿಓ ಹೆಸರಲ್ಲಿ ದರೋಡೆ ಮಾಡ್ತಿವೆ ಕೆಲ ಶೋರೂಂಗಳು

ತಾತ್ಕಾಲಿಕ ನೋಂದವಣಿ ವೇಳೆ ಹೆಚ್ಚುವರಿ ಹಣ ಸಂಗ್ರಹ

ಸ್ನೇಹಿತ್ರೆ ನೀವೇನಾದ್ರೂ ಹೊಸ ವಾಹನ ಖರೀದಿಸ ಹೊರಟಿದ್ದೀರಾ? ಹಾಗಾದ್ರೆ ಎಚ್ಚರ ! ವಾಹನ ಖರೀದಿಸೋ ಮುನ್ನ ವಿಜಯಟೈಮ್ಸ್‌ನ ಈ ವಿಡಿಯೋ ನೋಡಿ. ಯಾಕಂದ್ರೆ ನಿಮಗೆ ವಾಹನ ಶೋ ರೂಂನವರು ಮಾಡ್ಬಹುದು ವಂಚನೆ.

ಯಸ್‌, ನಮ್ಮ ರಾಜ್ಯದ ಕೆಲ ವಾಹನ ಶೋ ರೂಂಗಳು ಆರ್‌ಟಿಓ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿವೆ. ಗ್ರಾಹಕರಿಗೆ ಗೊತ್ತಾಗದ ರೀತಿಯಲ್ಲಿ ಶೋರೂಂ ಅಧಿಕಾರಿಗಳು ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಜಮಖಂಡಿಯ ಬಾಗೇವಾಡಿ ಶೋರೂಮೇ ಒಂದು ಸಾಕ್ಷಿ. ಅದು ಹೇಗೆ ಅಂತ ಆರ್‌ಟಿಐ ಹೋರಾಟಗಾರ ಸಂತೋಷ್‌ ಗುರಲಿಂಗಪ್ಪ ಚನಲ್‌  ವಿವರಿಸ್ತಾರೆ ಕೇಳಿ.

ಬಾಗೇವಾಡಿ ಶೋ ಹೀರೋ ಶೋರೂಂನಲ್ಲಿ ತಾತ್ಕಾಲಿಕ ನೋಂದಾವಣಿಗೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ. ಆರ್‌ಟಿಓದವರ ಚಾರ್ಜ್‌ ಕೇವಲ 161 ರೂಪಾಯಿ, ಶೋರೂಂನವರು ಸಂಗ್ರಹಿಸೋದು 1050 ರೂಪಾಯಿ. ಯಾಕೆ ನೀವು ಹೆಚ್ಚುವರಿ ಹಣ ಸಂಗ್ರಹಿಸ್ತೀರಾ ಅಂತ ಕೇಳಿದ್ರೆ ಆರ್‌ಟಿಓದವರಿಗೆ ಲಂಚ ಕೊಡಬೇಕು ಅದಕ್ಕೆ ಅಂತ ಹೇಳ್ತಾರೆ.

ನೋಡಿದ್ರಾ ಸ್ನೇಹಿತ್ರೆ, ಹೇಗೆ ಇವರು ಲಂಚವನ್ನ ಅಧಿಕೃತವಾಗಿ ಬಿಲ್ ಮುಖಾಂತರವೇ ಸಂಗ್ರಹಿಸ್ತಿದ್ದಾರೆ ನೋಡಿ. ಈ ರೀತಿ ಪ್ರತಿ ಗ್ರಾಹಕನಿಂದ ಹೆಚ್ಚುವರಿ ಹಣ ಸಂಗ್ರಹಿಸಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೀತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಾರಿಗೆ ಸಚಿವರು, ಸಾರಿಗೆ ಅಧಿಕಾರಿಗಳಿಗೆ ಪ್ರತಿಯೊಬ್ಬರಿರೂ ದೂರು ನೀಡಲಾಗಿದೆ. ಆದ್ರೆ ಯಾರೂ ಇದನ್ನು ಸರಿಪಡಿಸುವ ಗೋಜಿಗೇ ಹೋಗ್ತಿಲ್ಲ.

ಗ್ರಾಹಕರನ್ನು ಹಗಲು ದರೋಡೆ ಮಾಡುತ್ತಿರುವ ಶೋರೂಂ ವಿರುದ್ಧ ದೂರು ಕೊಟ್ರೆ, ದೂರು ಕೊಟ್ಟವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಇದು ನಮ್ಮ ದೇಶದ ದುರಂತ.

ಇದು ಬರೀ ಬಾಗೇವಾಡಿ ಶೋರೂಂನಲ್ಲಿ ಮಾತ್ರ ಈ ಅಕ್ರಮ ನಡೀತಿಲ್ಲ. ಬದಲಾಗಿ ನಮಗೆ ಗೊತ್ತಿಲ್ಲದೆ ಹೆಚ್ಚಿನ ಶೋರೂಂಗಳು ಮೋಸ ಮಾಡ್ತಿವೆ. ಆದ್ರೆ ಇದರ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ಅಲ್ಲದೆ ಅಧಿಕಾರಿಗಳು ಎಂಜಲು ಕಾಸಿಗೆ ಕೈವೊಡ್ಡದೆ ಇಂಥಾ ಶೋರೂಂಗಳ ಬಗ್ಗೆ ಕ್ರಮಕೈಗೊಳ್ಳಬೇಕು ಅನ್ನೋದು ವಿಜಯಟೈಮ್ಸ್ ಆಗ್ರಹವಾಗಿದೆ.

Exit mobile version