ಸಾಲದ ಕೂಪದಲ್ಲಿ ದೇಶದ ಅನ್ನದಾತ. ಶೇ.50ಕ್ಕೂ ಅಧಿಕ ಕೃಷಿ ಕುಟುಂಬಗಳ ಮೇಲೆ ಸಾಲದ ಹೊರೆ

ನಮ್ಮ ದೇಶದಲ್ಲಿ ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಪ್ರತಿ ಅಗತ್ಯ ವಸ್ತುವಿನ ಬೆಲೆಗಳೂ ದುಬಾರಿಯಾಗುತ್ತಿವೆ. ಈ ಮಧ್ಯೆ ಇನ್ನೊಂದು ಆತಂಕಕಾರಿ ಅಂಶವೊಂದು ಹೊರಬಿದ್ದಿದೆ. ಅದೇನಂದ್ರೆ ನಮ್ಮ ದೇಶದ ಶೇಕಡಾ 50ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಸಾಲ ಕೂಪಕ್ಕೆ ಬಿದ್ದು ನರಳುತ್ತಿವೆ. 2013ರ ಅಂಕಿಅಂಶಗಳಿಗೆ ಹೋಲಿಸಿದರೆ 2018ರಲ್ಲಿ ಪ್ರತಿ ಕುಟುಂಬದ ಕೃಷಿ ಸಾಲಗಳಲ್ಲಿ ಶೇ.57.7 ರಷ್ಟು ‌ ಏರಿಕೆ ಕಂಡುಬಂದಿದೆ. ಈ ಆಘಾತಕಾರಿ ಅಂಶ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

2013ನೇ ಸಾಲಿನಲ್ಲಿ 47000 ರೂಂ.ಗೆ ಹೋಲಿಸಿದರೆ 2018ರಲ್ಲಿ ದೇಶದಲ್ಲಿಯ ಶೇ.50ಕ್ಕೂ ಅಧಿಕ ಕೃಷಿ ಕುಟುಂಬಗಳು ಸರಾಸರಿ ಪ್ರತಿ ಕುಟುಂಬಕ್ಕೆ 74,121ರೂ.ಗಳ ಸಾಲ ಬಾಕಿಯನ್ನು ಹೊಂದಿವೆ. ಈ ಸರಾಸರಿ ಆಂಧ್ರಪ್ರದೇಶದಲ್ಲಿ ಗರಿಷ್ಠ ( 2.45 ಲಕ್ಷ ರೂ) ಹಾಗೂ ನಾಗಲ್ಯಾಂಡ್‌ನಲ್ಲಿ ಕನಿಷ್ಟಮಟ್ಟ (1750 ರೂ) ದಲ್ಲಿದೆ.

ಬಾಕಿ ಇರುವ ಸಾಲಗಳ ಪೈಕಿ ಕೇವಲ69.6% ಬಾಕಿ ಸಾಲಗಳನ್ನು ಬ್ಯಾಂಕುಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರಿ ಏಜೆನ್ಸಿ ಗಳಂತಹ ಸಾಂಸ್ಥಿಕ ಮೂಲಗಳಿಂದ ಪಡೆಯಲಾಗಿದ್ದು, ಶೇ. 20.5% ಸಾಲುಗಳು ವೃತ್ತಿಪರ ಲೇವಾದೇವಿಗಾರರಿಂದ ಪಡೆಯಲಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ. ರೈತರು ಪಡೆದ ಸಾಲದ ಪೈಕಿ ಕೇವಲ 57.5% ಮಾತ್ರ ಕೃಷಿ ಉದ್ದೇಶಗಳಿಗಾಗಿ ತೆಗೆದುಕೊಳ್ಳಲಾಗಿದೆ ಎಂದು(NSO) ಹೇಳಿದೆ.

2019ರ ಗ್ರಾಮೀಣ ಭಾರತ ಕಾರ್ಯಕ್ರಮದ ಅನುಷ್ಠಾನ ಮತ್ತು ಅಂಕಿಅಂಶಗಳ ಸಚಿವಾಲಯವು ಕೃಷಿ ಮನೆಗಳ ಮತ್ತು ಭೂ ಹಿಡುವಳಿಗಳ ಪರಿಸ್ಥಿತಿ ಮೌಲ್ಯಮಾಪನವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ.

            ದೇಶದಲ್ಲಿ ಅಂದಾಜು 9.3ಕೋಟಿ ಕೃಷಿ ಕುಟುಂಬಗಳಿದ್ದು, ಈ ಪೈಕಿ ಒಬಿಸಿ ಶೇ45.8, ಎಸ್‌.ಸಿಗಳು ಶೇ 15.9. ಎಸ್‌ಟಿಗಳು ಶೇ.14.2 ಮತ್ತು ಇತರೆ 24.1ರಷ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

77ನೇ ಸುತ್ತಿನ ಎನ್‌ಎಸ್‌ಓ ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಕೃಷಿಕಾರ್ಮಿಕ ಕುಟುಂಬಗಳು ಮತ್ತು ಕರಾವಳಿ ಮೀನುಗಾರಿಕೆ, ಗ್ರಾಮೀಣ ಕುಶಲ ಕರ್ಮಿಗಳ ಚಟುವಟಿಕೆ ಮತ್ತು ಕೃಷಿ ಸೇವೆಗಳ ಮೂಲಕ ಮತ್ತು ಸಂಪೂರ್ಣ ಆದಾಯ ಗಳಿಸುತ್ತಿರುವ ಕುಟುಂಬಗಳನ್ನು ಕೃಷಿ ಕುಟುಂಬಗಳೆಂದು ಪರಿಗಣಿಸಲಾಗಿಲ್ಲ. ಅವರನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಯಿತು

Exit mobile version