ಮೈಸೂರು ಅತ್ಯಾಚಾರ ಪ್ರಕರಣ, ಕೊನೆಗೂ ಜಿಲ್ಲಾ ನ್ಯಾಯಧೀಶರ ಮುಂದೆ ಹೇಳಿಕೆ ನೀಡಿದ ಸಂತ್ರಸ್ತೆ.

ಮೈಸೂರು ಸೆ 24 : ನಗರದ ಹೊರವಲಯದಲ್ಲಿ 28 ದಿನಗಳ ಹಿಂದೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊನೆಗೂ ಸಂತ್ರಸ್ತೆ  ಮುಂಬೈನಿಂದ ಬಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಲಿಖಿತ ಹೇಳಿಕೆ ನೀಡಿದ್ದಾರೆ

ಸಾಕಷ್ಟು ದಿನಗಳ ಪೊಲೀಸರ ಮನವೊಲಿಕೆ ನಂತರ ಇಂದು ಮುಂಬೈನಿಂದ ದಿಢೀರ್ ಎಂದು ಮೈಸೂರಿಗೆ ಧಾವಿಸಿದ ಸಂತ್ರಸ್ತೆ, ಜಿಲ್ಲಾ ನ್ಯಾಯಾಧೀಶರ ಮುಂದೆ ಲಿಖಿತ ಹೇಳಿಕೆ ದಾಖಲಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿತ್ತು. ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಒಟ್ಟು 5 ಮಂದಿಯನ್ನು ಆ.28 ರಂದು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು.

ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾಳೆ. ಕಾಲೇಜಿನಲ್ಲಿ ಓದುವಾಗ ಪರಿಚಯವಾದ ಗೆಳೆಯನ ಜತೆ ವಾಕಿಂಗ್ ಹೋಗಿದ್ದೆವು. ವಾತಾವರಣ ಚೆನ್ನಾಗಿದೆ ಎಂದು ಕುಳಿತುಕೊಳ್ಳಲು ಹೋಗಿದ್ದೆವು. ಆಗ ನಮ್ಮ ಬಳಿ ಬಂದ ಆರೇಳು ಮಂದಿ ಗುಂಪು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದಾಗ ಅವರು ತಲೆ ಸುತ್ತು ಬಂದು ಬಿದ್ದರು.
ನನ್ನನ್ನು ಪಕ್ಕದ ಪೊದೆಗೆ ಎಳೆದುಕೊಂಡು ಹೋಗಿ ಕೃತ್ಯ ನಡೆಸಿದರು. ಸ್ವಲ್ಪ ಸಮಯದ ನಂತರ ನನ್ನನ್ನು ಸ್ನೇಹಿತನ ಬಳಿಗೆ ಕರೆದುಕೊಂಡು ಹೋಗಿ ಹಣಕ್ಕೆ ಬೇಡಿಕೆ ಇಟ್ಟರು. ನನ್ನ ಸ್ನೇಹಿತನ ಮನೆಗೆ ಮೊಬೈಲ್‌ನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟರು. ನಂತರ ನಮ್ಮ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾದರು ಎಂದು ನ್ಯಾಯಾಧೀಶರ ಮುಂದೆ ಪ್ರಕರಣದ ಕುರಿತು ಲಿಖಿತ ಹೇಳಿಕೆಯನ್ನು ದಾಖಲಿಸಿದ್ದಾರೆ.

Exit mobile version