ವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌

ವಿಯೆಟ್ನಾಂ, ಜು. 24: ದಕ್ಷಿಣ ಮೆಕಾಂಗ್ ನ ನದಿ ಮುಖಜ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ವಿಯೆಟ್ನಾಂ ರಾಜಧಾನಿ ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ.
ವಿಯೆಟ್ನಾಂ ಸರ್ಕಾರವು ಶುಕ್ರವಾರ ರಾತ್ರಿ ಈ ಸಂಬಂಧ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿದೆ. ಕೇವಲ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ವಾರದ ಆರಂಭದಲ್ಲಿ ಎಲ್ಲಾ ಹೊರಾಂಗಣ ಚಟುವಟಿಕೆಗಳು ಮತ್ತು ಅಗತ್ಯವಲ್ಲದ ಸೇವೆಗಳ ಸ್ಥಗಿತಕ್ಕೆ ಸೂಚಿಸಲಾಗಿತ್ತು. ಶುಕ್ರವಾರ ಹನೊಯಿಯಲ್ಲಿ ಕೋವಿಡ್‌ನ 70 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ವಿಯೆಟ್ನಾಂನಲ್ಲಿ ಕಳೆದ 24 ಗಂಟೆಗಳಲ್ಲಿ 7,295 ಹೊಸ ಪ್ರಕರಣಗಳು ಪತ್ತೆಯಾದಂತಾಗಿದೆ. ಇದರಲ್ಲಿ 5,000 ಪ್ರಕರಣಗಳು ವಿಯೆಟ್ನಾಂನ ಹೊ–ಚಿ– ಮಿನ್‌ ನಗರದಲ್ಲಿ ಪತ್ತೆಯಾಗಿದ್ದು, ಈ ನಗರದಲ್ಲೂ ಆಗಸ್ಟ್‌ 1ರ ತನಕ ಲಾಕ್‌ಡೌನ್‌ ಅನ್ನು ವಿಸ್ತರಿಸಲಾಗಿದೆ.

Exit mobile version