ಐಟಿ ದಾಳಿ ನಡೆದಷ್ಟೂ ಅಕ್ರಮ ಕಪ್ಪುಹಣ ಪತ್ತೆ: ಕೈ ನಾಯಕರ ಮೇಲೆ ವಿಜಯೇಂದ್ರ ಆರೋಪ

Bengaluru: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌ ವಿಜಯೇಂದ್ರ (B Y Vijayendra) ಅವರು ಕಾಂಗ್ರೆಸ್ (Vijayendra statement on IT raid) ನಾಯಕರ ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ

ಅಕ್ರಮ ಕಪ್ಪುಹಣ ಪತ್ತೆಯಾಗುತ್ತಲೇ ಇರುತ್ತದೆ (Vijayendra statement on IT raid) ಎಂದು ಆರೋಪಿಸಿದ್ದಾರೆ.

225 ಕೋಟಿ ದುಡ್ಡು (Money) ಪತ್ತೆ ವಿಚಾರವಾಗಿ, ಟ್ವೀಟ್ ಮಾಡಿರುವ ವಿಜಯೇಂದ್ರ(B Y Vijayendra)ಜಾರ್ಖಂಡ್ ನಲ್ಲಿ ಕಾಂಗ್ರೆಸ್(Congress) ಸಂಸದರ ಮನೆಗೆ ಐಟಿ (IT) ದಾಳಿ ವೇಳೆಯಲ್ಲಿ

ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ ಅದರಲ್ಲಿ ಮುಸ್ಲಿಂಮರಿಗೆ ಪಾಲು ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಮುಸ್ಲಿಂ ಓಲೈಕೆ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು

ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ? ಎಂದು ಪ್ರಶ್ನಿಸಿದ್ದಾರೆ.

ದೇಶ ಲೂಟಿ(Looting the country) ಯಾಗುತ್ತಿದೆ. ಈ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳು ಇದೀಗ ಉತ್ತರ ದೊರಕಿಸಿಕೊಟ್ಟಿದ್ದಾರೆ ಎಂದು ಈ ವಿಚಾರವನ್ನು ಉಲ್ಲೇಖ ಮಾಡಿ

ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ ಎಂದಿದ್ದಾರೆ. ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ

ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆ ಪ್ರಕರಣ.

ಆರ್‌ ಅಶೋಕ್‌(R Ashok) ಮತ್ತು ವಿಜಯೇಂದ್ರ (B Y Vijayendra) ನಡುವಿನ ಗೊಂದಲ ಸದನದಲ್ಲೇ ಬಹಿರಂಗ!


ಈ ದೇಶದ ಸಂಪತ್ತು ಶತಮಾನಗಳಿಂದಲೂ ಲೂಟಿಯಾಗುತ್ತಲೇ ಇದೆ ಇತಿಹಾಸವೇ ಇದೆ ಎಂದು ಆರೋಪಿಸಿ ಎಂಬುದಕ್ಕೆ ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು

ಎಲ್ಲೆಲ್ಲಿವೇ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ ಎಂದಿದ್ದಾರೆ.

ಮೊದಲಿಗೆ ಮೊಘಲರು,ನಂತರ ಬ್ರಿಟಿಷರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿಗರು ಎಂಬುದು ಅಸಲೀ ಸತ್ಯ ಎಂಬುದಕ್ಕೆ ಇಂದಿಗೂ ಪುರಾವೆಗಳು ಸಿಗುತ್ತಲೇ ಇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವರ ಉತ್ತರಕ್ಕೆ ಬಿಜೆಪಿ(BJP) ತೀವ್ರ ವಿರೋಧ
ದೇಶದ ಜನರ ಸಂಪತ್ತೆಲ್ಲಾ ಕಾಂಗ್ರೆಸ್ ನಾಯಕರ ಬಳಿಯೇ ಇದೆ.ಈ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ

ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಟಿ ಅಧಿಕಾರಿಗಳು ಈಗ ಅದನ್ನೆಲ್ಲ ಹೊರತೆಗೆಯುವ ಕಾರ್ಯ ಮಾಡುತ್ತಿದ್ದಾರೆ! ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ 156 ಚೀಲಗಳಲ್ಲಿ 225 ಕೋಟಿ

ರೂಪಾಯಿ ಗಳಷ್ಟು ಹಣ ಪತ್ತೆಯಾಗಿದ್ದು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿ ಬಚ್ಚಿಟ್ಟಿರುವ ಸಣ್ಣ ಸ್ಯಾಂಪಲ್ ಇದು.” ಎಂದಿದ್ದಾರೆ.

ರಾಹುಲ್ ಗಾಂಧಿ (Rahul Gandhi) ಅವರ ಸ್ನೇಹಿತ ಹಾಗೂ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ನಿವಾಸದ ಮೇಲೆ ಇತ್ತೀಚೆಗೆ ನಡೆದ ಐಟಿ (IT) ದಾಳಿಯಲ್ಲಿ 200 ಕೋಟಿಗೂ ಅಧಿಕ ನಗದು

ವಶಪಡಿಸಿಕೊಂಡಿದ್ದು ಒಬ್ಬ ಸಾಹು 200 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲು ಸಾಧ್ಯವಾದರೆ, ಕಳೆದ ಕೆಲವು ದಶಕಗಳಲ್ಲಿ ಅಧಿಕಾರದಲ್ಲಿದ್ದ ಕಾಂಗಿಗಳು ಎಷ್ಟು ಲೂಟಿ ಮಾಡಿದ್ದಾರೆ

ಎಂದು ಭಾರತೀಯರು ಊಹಿಸಬಹುದು.” ಎಂದು ಇನ್ನು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಜರೆದಿದ್ದಾರೆ.

ಇದನ್ನು ಓದಿ: ರೈತ ಪ್ರತಿಭಟನೆಯಲ್ಲಿ ಭಾಗಿ, ಕಾಂಗ್ರೆಸ್ ಪರ ಪ್ರಚಾರ: ಯಾರೀ ನೀಲಂ ಆಜಾದ್?

Exit mobile version