New Delhi: ಲೋಕಸಭೆಯೊಳಗೆ ಸ್ಮೋಕ್ ಬಾಂಬ್ (Smoke Bomb) ಎಸೆದು (Who is Neelam Azad)ತೀವ್ರ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು
ಬಂಧಿಸಿದ್ದಾರೆ. ಅದರಲ್ಲಿ ಮೈಸೂರಿನ ಮನೋರಂಜನ್ (Manoranjan) ಎಂಬ ಯುವಕನನ್ನು ಕೂಡಾ ಬಂಧಿಸಲಾಗಿದೆ. ಈ ನಾಲ್ವರ ಪೈಕಿ ಒರ್ವ ಬಂಧಿತಳಾಗಿರುವ ನೀಲಂ ಆಜಾದ್ ಎಂಬ ಯುವತಿಯನ್ನು
ವಶಕ್ಕೆ ಪಡೆಯಲಾಗಿದ್ದು, ಆಕೆಯ ಹಿನ್ನಲೆಯ (Who is Neelam Azad) ಕುರಿತು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಚರ್ಚೆ ನಡೆಯುತ್ತಿದೆ.
ಯಾರಿದು ನೀಲಂ ಆಜಾದ್?
ನೀಲಂ ಆಜಾದ್ (Neelam Azad) ಎಂಬ ಯುವತಿ ಹರ್ಯಾಣದ ಜಿಂದ್ ಜಿಲ್ಲೆಯ ಘಾಸೋ ಖುರ್ಡ್ ಎಂಬ ಗ್ರಾಮದವರು. MA, B.Ed. ಪದವೀಧರೆಯಾಗಿರುವ ಈಕೆ ನಿರುದ್ಯೋಗಿಯಾಗಿದ್ದಾಳೆ.
ರಾಜಕೀಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಈಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದಕ್ಕಿಂತ ಸದಾ ರಾಜಕೀಯ ಹೋರಾಟಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಳು. ಈ ಹಿಂದೆ ರೈತ ಪ್ರತಿಭಟನೆಯಲ್ಲಿ,
ಕುಸ್ತಿ ಪಟುಗಳ ಪ್ರತಿಭಟನೆ ಸೇರಿದಂತೆ ದೆಹಲಿ (Delhi) ಸುತ್ತಮುತ್ತಲಿನ ಅನೇಕ ಪ್ರತಿಭಟನೆಗಳಲ್ಲಿ ಈಕೆ ಭಾಗಿಯಾಗಿದ್ದಾಳೆ.
ಈ ಮಧ್ಯೆ ಈಕೆಯ ಸಾಮಾಜಿಕ ಜಾಲತಾಣ ಪರಿಶೀಲಿಸಿದಾಗ, ನೀಲಂ ಆಜಾದ್ ಕಾಂಗ್ರೆಸ್ (Congress) ಮತ್ತು ಐಎನ್ಎಲ್ಡಿ ಪಕ್ಷಗಳ ಪರ ಪ್ರಚಾರ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ಈ
ವಿಡಿಯೋದಲ್ಲಿ ನೀಲಂ ಆಜಾದ್ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದು, “ನಾವು ಅಧಿಕಾರದಲ್ಲಿರುವ ಬಿಜೆಪಿ ಪಕ್ಷವನ್ನು ಬದಲಾಯಿಸುತ್ತೇವೆ. ನಾವು ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ
ತರುತ್ತೇವೆ “ಎಂದು ವಿಡಿಯೋದಲ್ಲಿ ಹೇಳುತ್ತಾರೆ. ಈ ವಿಡಿಯೋ ಇದೀಗ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಕ್ರಾಂತಿಕಾರಿ ಯುವ ಸಂಘಟನೆ, ಪ್ರಗತಿಶೀಲ ಆಜಾದ್ ಯುವ ಪರಿಷತ್ ಆಯೋಜಿಸಿದ್ದ ಅನೇಕ ಪ್ರತಿಭಟನೆಗಳಲ್ಲೂ ನೀಲಂ ಆಜಾದ್ ಭಾಗವಹಿಸಿದ್ದಾಳೆ. ರೈತ ಪ್ರತಿಭಟನೆಗೆ ಕಾರಣವಾದ ಕೃಷಿ
ಮಸೂದೆಗಳನ್ನು ಹಿಂಪಡೆದ ನಂತರವೂ ನೀಲಂ ಆಜಾದ್ ಈ ರೀತಿಯ ಅನೇಕ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸಿದ್ದಾರೆ.
ಫೇಸ್ಬುಕ್ನಲ್ಲಿನ ಫೋಟೋಗಳಲ್ಲಿ, ಜಾಗೃಕ್ ಕಿಸಾನ್ ಮಜ್ದೂರ್ ಯೂನಿಯನ್ (Jagrik Kisan Mazdoor Union) ನಡೆಸಿದ ಪ್ರತಿಭಟನಾ ಮೆರವಣಿಗೆಗಳಲ್ಲಿ ನೀಲಂ ಆಜಾದ್ಳನ್ನು ಕಾಣಬಹುದು.
ರಾಜಕೀಯವಾಗಿ ಬಿಜೆಪಿ ವಿರೋಧಿಯಾಗಿರುವ ನೀಲಂ ಆಜಾದ್ ಕೇಂದ್ರ ಸರ್ಕಾರದ (Central Government) ವಿರುದ್ದ ನಡೆದಿರುವ ಅನೇಕ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾಳೆ.
ಇದನ್ನು ಓದಿ: “ನಮ್ಮ ಸುರಕ್ಷತೆಗಾಗಿ, ನಮ್ಮ ಹೋರಾಟ ಮುಂದುವರೆಯುತ್ತದೆ” ; ಕದನ ವಿರಾಮಕ್ಕೆ ನೋ ಎಂದ ಇಸ್ರೇಲ್..!