ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡ ವಿರಾಟ್ ಕೊಹ್ಲಿ

ಮುಂಬೈ, ಆ. 12: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಅನ್ನು ಬಿಡುಗಡೆಗೊಳಿಸಿದ್ದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಯ್ಲಿ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದ್ದಾರೆ. ಹಾಗೆ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ 9ನೇ ಸ್ಥಾನಕ್ಕೆ ಜಿಗಿದು ಅಗ್ರ ಹತ್ತರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಕೊಹ್ಲಿ ಕುಸಿತ : 2018 ರಲ್ಲಿ ವಿರಾಟ್ ಕೊಯ್ಲಿ ಅಗ್ರ ಸ್ಥಾನದಲ್ಲಿದ್ದರು ನಂತರದ ದಿನಗಳಲ್ಲಿ ಕೆಲವು ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನಗಳು ಬಾರದ ಕಾರಣ 4 ನೇ ಸ್ಥಾನಕ್ಕೆ ಕುಸಿದಿದ್ದರು. ಇದೀಗ ಇಂಗ್ಲೆಂಡ್ ವಿರುದ್ದ ಕೂಡ ಉತ್ತಮ ಪ್ರದರ್ಶನ ನೀಡದ ಹಿನ್ನಲೆಯಲ್ಲಿ ಮತ್ತೆ ಒಂದು ಸ್ಥಾನ ಕುಸಿತ ಅನುಭವಿಸಿದ್ದಾರೆ.

ಟಾಪ್ 10 ಒಳಗೆ ಬೂಮ್ರಾ :  ಅನುಭವಿ ಬೌಲರ್ ಇಂಗ್ಲೆಂಡ್ ವಿರುದ್ದ ಉತ್ತಮ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಮತ್ತೆ ಟಾಪ್ 10 ಒಳಗೆ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2019 ರಲ್ಲಿ 3ನೇ ಸ್ಥಾನಕ್ಕೆ ಏರಿದ್ದರು ಇದು ಅವರ ಜೀವಮಾನದ ಶ್ರೇಷ್ಠ ಸಾಧನೆಯಾಗಿತ್ತು.

ಐಸಿಸಿ ಟೆಸ್ಟ್ ರ್ಯಾಂಕಿಂಗ್  ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಗ್ರ ಸ್ಥಾನದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿ ಸ್ಷೀವ್ ಸ್ಮಿತ್ ಇದ್ದಾರೆ. ಹಾಗೆ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮ್ಮಿನ್ಸ್ ಹಾಗೂ ರವೀಂದ್ರ ಜಡೇಜಾ ಮೊದಲೆರಡು ಸ್ಥಾನದಲ್ಲಿದ್ದಾರೆ.ಮತ್ತು ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಜಸನ್ ಹೋಲ್ಡರ್ ಮತ್ತು ರವೀಂದ್ರ ಜಡೇಜಾ ಮೊದಲ ಎರಡು ಸ್ಥಾನದಲ್ಲಿದ್ದಾರೆ.

Exit mobile version