ಕೊಹ್ಲಿ, ಗಂಭೀರ್ ನಡುವೆ ಮಾತಿನ ಚಕಮಕಿ !ಐಪಿಎಲ್ ನ ನೀತಿ ಸಂಹಿತೆ ಉಲ್ಲಂಘನೆ: ದಂಡ ವಿಧಿಸಿದ ಬಿಸಿಸಿಐ

New Delhi : ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವೆ ಸೋಮವಾರ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದ ನಂತರ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಮತ್ತು ಎಲ್‌ಎಸ್‌ಜಿ ಮೆಂಟರ್ ಗೌತಮ್ (Gautam Gambhir) ಗಂಭೀರ್ ನಡುವೆ ಮಾತಿನ ಚಕಮಕಿ ನಡೆಯಿತು.

ಈಗ ಅವರಿಬ್ಬರಿಗೂ ಐಪಿಎಲ್ 2023 (IPL 2023) ನೀತಿ ಸಂಹಿತೆ ಉಲ್ಲಂಘನೆಗಾಗಿ ಬಿಸಿಸಿಐ ಭಾರೀ ಮೊತ್ತದ ದಂಡವನ್ನು ವಿಧಿಸಿದೆ. ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರಿಗೂ ಅವರ ಪಂದ್ಯದ ಶುಲ್ಕದ ಶೇ100 ರಷ್ಟು ಭಾರೀ ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಇಬ್ಬರೂ ಐಪಿಎಲ್ ನೀತಿ ಸಂಹಿತೆಯ ಉಲ್ಲಂಘಸಿ ತಪ್ಪೆಸಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 2023ರ ಐಪಿಎಲ್‌ನ ಪಂದ್ಯದ ವೇಳೆ ಗಂಭೀರ್, ಆರ್‌ಸಿಬಿ ಬೆಂಬಲಿಗರಗೆ ‘ಶಟಪ್’ ಎಂಬ ರೀತಿಯ ಸಂಜ್ಞೆಯನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕೊಹ್ಲಿ ಈ ರೀತಿ ವರ್ತಿಸುತ್ತಿದ್ದರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿದ್ದರು .

ಇದನ್ನೂ ಓದಿ : https://vijayatimes.com/karnataka-gst-collection/

ಸೋಮವಾರ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ಆಟಗಾರ ಕೈಲ್ ಮೇಯರ್ಸ್ (Kyle Mayers) ಕೊಹ್ಲಿ ಬಳಿಗೆ ತೆರಳಿ ಆರ್‌ಸಿಬಿ ಸ್ಟಾರ್‌ಗೆ ಏನೋ ಹೇಳಿದ್ದು ಕಂಡುಬಂದಿತ್ತು ಆಗ ಗೌತಮ್ ಗಂಭೀರ್ ನಡುವೆ ಪ್ರವೇಶಿಸಿ ಮೇಯರ್ಸ್ನನ್ನು ಆಚೆಗೆ ಕರೆದೊಯ್ದರು. ನಂತರ ಸ್ವಲ್ಪ ಸಮಯದ ಬಳಿಕ ಗಂಭೀರ್ ಕೊಹ್ಲಿಗೆ ಏನೋ ಹೇಳುವ ದೃಶ್ಯಾವಳಿ ಕಾಣಿಸಿಕೊಂಡಿತ್ತು.

ನಂತರ ಇವರಿಬ್ಬರ ನಡುವೆ ಮುನಿಸು ಆಗಿ ಮಾತಿನ ಚಕಮಕಿ ಜೋರಾಯಿತು ಅಷ್ಟರಲ್ಲಿ ಕೆ.ಎಲ್.ರಾಹುಲ್ ಮತ್ತು ಇತರ ಆಟಗಾರರು ಇಬ್ಬರನ್ನೂ ಬೇರ್ಪಡಿಸಿದರು. ಆ ಬಳಿಕ ಕೊಹ್ಲಿ, ಎಲ್‌ಎಸ್‌ಜಿ ನಾಯಕ ರಾಹುಲ್ ಜತೆ ಸುಧೀರ್ಘ ಮಾತುಕತೆಯನ್ನು ನಡೆಸುತ್ತಿದ್ದರು.

Exit mobile version