ವಿರಾಟ್ ನಾಯಕತ್ವ ಅಂತ್ಯ

ದುಬೈ ನ 9ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದ ಗೆಲುವಿನ ಮೂಲಕ ಟಿ20 ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವ ಅಂತ್ಯಗೊಂಡಿದೆ. 

ಟಿ20 ವಿಶ್ವಕಪ್ ನಲ್ಲಿ ಭಾರತ ಸೆಮಿ ಫೈನಲ್ಸ್ ತಲುವ ಕನಸು ಭಗ್ನಗೊಂಡಿದ್ದರೂ ವಿರಾಟ್ ಕೊಹ್ಲಿ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. 

2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವ ಅಂತ್ಯಗೊಂಡಾಗ ಟಿ20 ಆವೃತ್ತಿಯಲ್ಲಿ ಭಾರತ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಭಾಜನರಾಗಿದ್ದರು. ಈಗ ಆ ಸಾಲಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. 

ರೋಹಿತ್‌ ನೂತನ ನಾಯಕ ?
ಈ ಹಿಂದೆ ವಿರಾಟ್ ಕೊಹ್ಲಿ ತಮ್ಮ ನಂತರ ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ಯಾರು ಪಡೆಯುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದರು. ಈ ಹುದ್ದೆಗೆ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರ ಹೆಸರನ್ನು ಸೂಚಿಸಿದ್ದಾರೆ. ವಿರಾಟ್, ‘ತಂಡದ ಆಟದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಇತರರಿಗೆ ನೀಡುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಿಸ್ಸಂಶಯವಾಗಿ ರೋಹಿತ್ ಈ ಸ್ಥಾನವನ್ನು ಅಲಂಕರಿಸಲು ಸಮರ್ಥ ವ್ಯಕ್ತಿ ಮತ್ತು ಅವರು ಕೆಲವು ಸಮಯದಿಂದ ವಿಷಯಗಳನ್ನು ನೋಡುತ್ತಿದ್ದಾರೆ ಎಂದು ಹೇಳಿದರು. ರೋಹಿತ್ ಹೆಸರನ್ನು ವಿರಾಟ್ ತೆಗೆದುಕೊಂಡ ರೀತಿ ರೋಹಿತ್ ಶರ್ಮಾ ಟೀಂ ಇಂಡಿಯಾದ ಹೊಸ ನಾಯಕನಾಗಲಿದ್ದಾರೆ ಎಂಬುದರ ಸ್ಪಷ್ಟ ಸೂಚನೆ ಎಂದೇ ಹೇಳಲಾಗುತ್ತಿದೆ.

Exit mobile version