ದುಬೈಗೆ ವಿಸಿಟ್ ವೀಸಾದಲ್ಲಿ ಪ್ರಯಾಣಿಸಿರುವವರ ಬಳಿ ಇವೆಲ್ಲವೂ ಇರಲೇಬೇಕು

ನೀವೆನಾದರೂ ದುಬೈಗೆ (Dubai) ಭೇಟಿ ನೀಡುತ್ತಿದ್ದರೆ ನಿಮ್ಮ ವಿಸಿಟ್ ವೀಸಾದೊಂದಿಗೆ ನಿಮ್ಮ ಬಳಿ 3000 ದಿರ್ಹಂ ಅಂದರೆ ಸುಮಾರು 68000 ರೂ. ನಗದು ಹಣ, ಮಾನ್ಯವಾಗಿರುವ ರಿಟರ್ನ ಟಿಕೆಟ್ (Return Ticket) ಮತ್ತು ತಾವು ಅಲ್ಲಿ ಉಳಿದುಕೊಳ್ಳಲು ಬಯಿಸಿರುವ ಸ್ಥಳದ ಮಾಹಿತಿಯನ್ನು ನೀಡಬೇಕು. ಈ ಎಲ್ಲ ಮಾಹಿತಿಯನ್ನು ನೀವು ವಿಮಾನ ಹತ್ತುವ ಮೊದಲೇ ನೀಟಬೇಕೆಂದು ಅಲ್ಲಿನ ಪ್ರವಾಸೋದ್ಯಮ ಎಜೆನ್ಸಿಗಳು (Agency) ತಿಳಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.

Return Ticket

ಈಗಾಗಲೇ ಇಂತಹ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಮತ್ತು ಮಾರ್ಗಸೂಚಿಗಳನ್ನು ಅನುಸರಿಸದ/ಪಾಲಿಸದ ಪ್ರಯಾಣಿಕರನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿಯೇ ತಡೆದು ಅವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಪ್ರಯಾಣಿಕರು ತಮ್ಮ ಮಾನ್ಯವಾದ ವೀಸಾದೊಂದಿಗೆ ಕನಿಷ್ಟ ಆರು ತಿಂಗಳು ವ್ಯಾಲಿಡಿಟಿ (Validity) ಇರುವ ಪಾಸಪೋರ್ಟನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮ ಹಿಂದೆಯೆ ಇದ್ದರೂ ಸಹ ಅದರೊಂದಿಗೆ ಅವರ ಬಳಿ ಸಾಕಷ್ಟು ನಗದು ಹಣ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ. 3000 ದಿರ್ಹಂ ಮೌಲ್ಯದ ಯಾವುದೇ ಕರೆನ್ಸಿಯ ನಗದು ಅಥವಾ ಕ್ರೆಡಿಟ್ ಕಾರ್ಡ್ (Credit Card) ಇರಬೇಕು ಮತ್ತು ಅದರ ಜೊತೆಗೆ ಮಾನ್ಯವಾಗಿರುವ ಅಲ್ಲಿಯ ವಿಳಾಸದ ಸಾಕ್ಷಾಧಾರಗಳು ಇರಬೇಕು. ಆ ವಿಳಾಸವು ಸಂಬಂಧಿಕರ ಅಥವಾ ಸ್ನೇಹಿತರ ಮನೆ ಅಥವಾ ಹೋಟೆಲ್ ಬುಕಿಂಗ್ ಸಹ ಇರಬಹುದು ಎಂದು ತಿಳಿಸಲಾಗಿದೆ.

ಈ ನಿಯಮಗಳು ಎಷ್ಟೋ ಸಮಯದಿಂದ ಜಾರಿಯಲ್ಲಿದ್ದರೂ ಸಹ ಈಗ ಅವುಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿ ಜಾರಿಗೆ ತರಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version