Bengaluru : ಮಾರ್ಚ್ 17 ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಕಬ್ಜ (Kabzaa) ಚಿತ್ರ ಯಶಸ್ಸನ್ನು ಗಳಿಸಿದೆ. ಇದೇ ಸಂತಸದಲ್ಲಿ ಚಿತ್ರದ ನಿರ್ದೇಶಕ ಆರ್.ಚಂದ್ರು(R.Chandru) ಮಾತನಾಡಿ, ಕಬ್ಜ 2 ಮತ್ತಷ್ಟು ಅದ್ದೂರಿಯಾಗಿ (waiting for kabzaa 2) ಇರಲಿದೆ ಎಂದು ಹೇಳಿದ್ದಾರೆ.
ಕಬ್ಜ ಚಿತ್ರ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಗರಿಷ್ಠ ಕಲೆಕ್ಷನ್ (Collection) ಕಾಣುತ್ತಿದೆ. ಇದರೊಟ್ಟಿಗೆ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆದು
ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿರುವ ಹಿನ್ನಲೆ ಕಬ್ಜ 2 ಚಿತ್ರ ಯಾವಾಗ ಎಂಬ ಕೂಗು ಕೇಳಿಬರುತ್ತಿದೆ. ಈ ಪ್ರಶ್ನೆಗೆ ಚಿತ್ರತಂಡ ಉತ್ತರಿಸಿದೆ.
ಕಬ್ಜ ಚಿತ್ರದಲ್ಲಿ ದೊಡ್ಡ ಸ್ಟಾರ್ ಬಳಗವೇ ತುಂಬಿದೆ. ನಾಯಕನ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra) ವಿಭಿನ್ನವಾಗಿ ಮಿಂಚಿದ್ದಾರೆ.
ಅತಿಥಿ ಪಾತ್ರದಲ್ಲಿ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ (Sudeep) ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಕಾಣಿಸಿಕೊಂಡಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್!
ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅವರ ಕಾಂಬಿನೇಷನ್ ಚಿತ್ರ ರಸಿಕರ ಮನಗೆದ್ದಿದೆ. ನಾಯಕಿ ಪಾತ್ರದಲ್ಲಿ ಶ್ರೀಯಾ ಶರಣ್ ಮಿಂಚಿದ್ದಾರೆ.
ಸದ್ಯ ಕಬ್ಜ ಚಿತ್ರ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಕಬ್ಜ 2 ಯಾವಾಗ ಎಂಬ ಹತ್ತಾರು ಪ್ರಶ್ನೆಗಳು ನಿರ್ದೇಶಕ ಆರ್.ಚಂದ್ರು(R.Chandru) ಅವರಿಗೆ ತಲುಪುತ್ತಿದ್ದಂತೆ,
ಈ ಬಗ್ಗೆ ಮಾತನಾಡಿದ ಆರ್.ಚಂದ್ರು ಅವರು ಅತೀ ಶೀಘ್ರದಲ್ಲೇ ಕಬ್ಜ 2 ಸಿನಿಮಾದ ಕೆಲಸದಲ್ಲಿ ನಿರತನಾಗಲಿದ್ದೇನೆ (waiting for kabzaa 2) ಎಂದು ಹೇಳಿದ್ದಾರೆ.
ಕಬ್ಜ ಭಾಗ 2 ರ ಸಿನಿಮಾ ಇನ್ನೂ ದೊಡ್ಡದಾಗಿ ಮೂಡಿಬರಲಿದೆ ಮತ್ತು ಮತ್ತಷ್ಟು ಅದ್ಧೂರಿಯಾಗಿ ಇರಲಿದೆ ಎಂದು ಹೇಳಿದ್ದಾರೆ.
ಕಬ್ಜ ಕೇವಲ ಕರ್ನಾಟಕದಲ್ಲಿ ಮಾತ್ರ ಸದ್ದು ಮಾಡುತ್ತಿಲ್ಲ, ಹಲವಾರು ದೇಶಗಳಲ್ಲಿ ಸದ್ದು ಮಾಡ್ತಿದೆ ಮತ್ತು ಟ್ರೆಂಡ್ ಆಗ್ತಿದೆ.
ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ (Housefull) ಪ್ರದರ್ಶನ ಕಾಣುತ್ತಿದೆ. ಕಬ್ಜ ಚಿತ್ರ ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ!
ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಈ ಹಿಂದೆ ತಾಜ್ ಮಹಲ್ ರೀತಿಯ ಸಿನಿಮಾ ಕೂಡ ಮಾಡಿದ್ದೆ, ಈಗ ಕಬ್ಜ ಕೂಡ ಮಾಡಿದೀನಿ ಎಂದು ಹೇಳಿದ್ದಾರೆ.
ಈ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಕಬ್ಜ 2 ತಯಾರಾಗಲಿದೆ ಎಂಬ ಸುಳಿವನ್ನು ನಿರ್ದೇಶಕ ಆರ್.ಚಂದ್ರು ಬಿಟ್ಟುಕೊಟ್ಟಿದ್ದಾರೆ