ಏಲಕ್ಕಿ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಏಲಕ್ಕಿ ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆ ಪದಾರ್ಥ. ಏಲಕ್ಕಿಯು ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಏಲಕ್ಕಿಯಲ್ಲಿನ ಜೀರ್ಣಕಾರಿ ಅಂಶ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಲಕ್ಕಿ  ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಏಲಕ್ಕಿ ನೆನೆಸಿದ ನೀರನ್ನು ಕುಡಿಯುವುದರಿಂದ ನಮಗೆ ಅನೇಕ ಪ್ರಯೋಜನಗಳಾಗುತ್ತದೆ. ಏಲಕ್ಕಿ ನೀರು ಅಥವಾ ಕಷಾಯ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳು ಮತ್ತು ಅದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿದೆ.

ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚಾಗುತ್ತದೆ

ಏಲಕ್ಕಿ ನೀರು ಆಹಾರವನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಜೀರ್ಣರಸಗಳು, ಪಚನಕ್ರಿಯೆ ಮತ್ತು ವಿಷಕಾರಿ ಅಂಶಗಳನ್ನು ಹೊರ ಹಾಕುವುದರಿಂದ ಸರಾಗವಾದ ಮಲವಿಸರ್ಜನೆ ಪ್ರಕ್ರಿಯೆ ಸುಲಭವಾಗಿ ನಡೆಯುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಏಲಕ್ಕಿ ನೀರು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತುಆ ಮೂಲಕ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ದೂರವಿರಿಸುತ್ತದೆ. ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಏಲಕ್ಕಿ ನೀರು ಅತ್ಯಂತ ಸಹಾಯಕ ಮಧುಮೇಹ (diabetic) ರೋಗಿಗಳು ಇದನ್ನು ಕೆಲವು ದಿನಗಳ ಕಾಲ ಸೇವಿಸಿದರೆ ಪ್ರಯೋಜನ ವಾಗುತ್ತದೆ.

ದೇಹದ ತೂಕ ಕಡಿಮೆಯಾಗುತ್ತದೆ

ಅತಿಯಾದ ಬೊಜ್ಜಿನ ಅಂಶ ತುಂಬಿಕೊಂಡು ದೇಹದ ಆಕಾರದ ಜೊತೆಗೆ ದೇಹದ ತೂಕ ಕೂಡ ಬದಲಾಗಿರುತ್ತದೆ ಮತ್ತು ಹೆಚ್ಚಾಗಿರುತ್ತದೆ ಅಂತವರು ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.

Exit mobile version