ನೀವು ಯಾವುದೇ ಸೈಡ್‌ ಎಫೆಕ್ಟ್‌ ಇಲ್ಲದೆ ತೂಕ ಇಳಿಸಬೇಕಾ? ಹಾಗಾದ್ರೆ ಈ ಸೂತ್ರ ಪಾಲಿಸಿ

Closeup foot of girl slim weight loss measure for food control, healthy care and wellness concept

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಆದ್ರೆ ಈ ಸಮಸ್ಯೆಗೆ (weight loss without side effects) ಪರಿಹಾರ ಕೊಡ್ತೀವಿ ಅಂತ ಹೇಳಿ ಜನರಿಗೆ ಮೋಸ

ಮಾಡುವವರು ಅಣಬೆಯಂತೆ ಹುಟ್ಟಿಕೊಂಡಿದ್ದಾರೆ. .ಅದೆಷ್ಟೋ ಜನ ಇವರ ಜಾಹಿರಾತಿಗೆ ಮರುಳಾಗಿ ಹಣನೂ ಕಳೆದುಕೊಂಡು, ಆರೋಗ್ಯನೂ ಕಳೆದುಕೊಂಡು ಪಶ್ಚಾತ್ತಾಪ ಪಡುತ್ತಿದ್ದಾರೆ.

ಹಾಗಾದ್ರೆ ನೀವು ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳದೆ, ನಿಮ್ಮ ಅಂದಕ್ಕೂ ಅಡ್ಡಿಯಾಗದಂತೆ ತೂಕ ಇಳಿಸೋದು ಹೇಗೆ ಅನ್ನೋ ಪ್ರಶ್ನೆಗೆ ಇಲ್ಲಿವೆ ಸರಳ ಉಪಾಯಗಳು. ಈ ಕೆಳಗಿನ ಆಹಾರಗಳನ್ನು

ಸಾಧ್ಯವಾದಷ್ಟು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ತಿನ್ನುವ (weight loss without side effects) ಅಭ್ಯಾಸ ಮಾಡಿಕೊಳ್ಳಿ.

೧. ಬಿಸಿ ನೀರಿನ ಜೊತೆ ನಿಂಬೆಹಣ್ಣು
ನಿಂಬೆ ಹಣ್ಣಿನ ರಸ ವಿಟಮಿನ್ ಸಿ ಅಂಶವನ್ನು ಒಳಗೊಂಡಿದೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಯಿಲೆಗಳಿಗೆ ಒಳಗಾಗುವುದನ್ನು ತಡೆಯುತ್ತದೆ. ಹೀಗಾಗಿ ಇದರಿಂದ

ನಮ್ಮ ಅಂದ ಹೆಚ್ಚಾಗುತ್ತದೆ. ಅಲ್ಲದೆ ನಿಂಬೆಹಣ್ಣಿನಲ್ಲಿ ಜೀರ್ಣಶಕ್ತಿಯನ್ನು ಬಲ ಪಡಿಸುವ ಗುಣವಿದೆ. ಇದು ನಮ್ಮ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ಬೇಡದ ವಿಷಕಾರಿ ಅಂಶಗಳನ್ನು

ನಮ್ಮ ದೇಹದಿಂದ ಹೊರಗೆ ಹಾಕುತ್ತದೆ. ಹಾಗಾಗಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ.

೨. ಸುಲಭವಾಗಿ ತೂಕ ಇಳಿಸಲು ಗ್ರೀನ್ ಟೀ!
ಇದು ಸಹ ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹ ಸೇರಿದರೆ, ಮೆಟಬಾಲಿಸಂ ಚುರುಕುಗೊಳಿಸುವುದಲ್ಲದೆ ದೇಹದಲ್ಲಿ ಹೆಚ್ಚಾದ ಬೊಜ್ಜಿನ ಅಂಶಕರಗಿಸುವುದಲ್ಲದೆ ಮೂತ್ರವರ್ಧಕ ಗುಣ ಇರುವುದರಿಂದ

ವಿಷಕಾರಿ ಅಂಶಗಳನ್ನು ಸಹ ಹೊರಹಾಕಲು ಸಹಾಯಕವಾಗಿದೆ.ಒಳ್ಳೆಯ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ನಮಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಈ ಎಲ್ಲ ಪ್ರಯೋಜನಗಳು ಸಿಗುತ್ತದೆ.

೩. ಕಾಮ ಕಸ್ತೂರಿ ಬೀಜಗಳು
ಇವುಗಳಲ್ಲಿ ನಾರಿನ ಅಂಶ ಮತ್ತು ಪ್ರೋಟಿನ್ ಅಂಶ ಅಧಿಕ ವಾಗಿದೆ ಇರುವುದರಿ . ಖಾಲಿ ಹೊಟ್ಟೆಯಲ್ಲಿ ಸೇವಿಸಲು ಒಂದು ಒಳ್ಳೆಯ ಆಹಾರ ಪದಾರ್ಥ ಎಂದು ಇದನ್ನು ಹೇಳ ಬಹುದು. ನೀರಿನಲ್ಲಿ

ಅಥವಾ ಮೊಸರಿನಲ್ಲಿ ನೆನೆಸಿ ಜಲ್ ತರಹ ವಿಸ್ತಾರವಾಗುತ್ತದೆ. ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಬೇರೆ

ಬಗೆಯ ಅನಾರೋಗ್ಯಕರ ಆಹಾರಗಳನ್ನು ತಿನ್ನುವುದು ತಪ್ಪುತ್ತದೆ.ಇದರಿಂದ ನಿಮ್ಮ ತೂಕ ಉತ್ತಮವಾಗಿ ನಿರ್ವಹಣೆ ಆಗುತ್ತದೆ.

೪. ಸ್ವಲ್ಪ ಪ್ರಮಾಣದ ಮೊಸರು ಸೇವನೆ:
ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಬೇಕು ಎಂದರೆ ನೀವು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಾದರೂ ಮೊಸರು ಸೇವನೆ ಮಾಡಬೇಕು. ಏಕೆಂದರೆ ಮೊದಲು ಒಂದು ಪ್ರೊಬಯೋಟಿಕ್ ಆಹಾರ.

ಇದು ಹೊಟ್ಟೆ ಹಸಿವನ್ನು ನಿವಾರಿಸುತ್ತದೆ ಮತ್ತು ಕರುಳಿಗೆ ಹಾಗೂ ಜೀರ್ಣಾಂಗಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಬ್ಯಾಕ್ಟೀರಿಯ ಗಳನ್ನು ಕೊಡುತ್ತದೆ. ಇದರಿಂದ ನಿಮ್ಮ ದೇಹದ ತೂಕ ನಿರ್ವಹಣೆ ಆಗುತ್ತದೆ.

೫. ಬೆರ್ರಿ ಹಣ್ಣುಗಳು
ಆಂಟಿ ಆಕ್ಸಿಡೆಂಟ್ ಜೊತೆಗೆ ಅಪಾರವಾದ ನಾರಿನ ಅಂಶ ಇವುಗಳಲ್ಲಿ ಕೂಡ ಸಿಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಒಳಗೊಂಡಿರುವ ಸ್ಟ್ರಾಬೆರಿ ಸೇರಿದಂತೆ ಇತರ ಬೆರ್ರಿ ಹಣ್ಣುಗಳು ಬೆಳಗಿನ

ಸಮಯದಲ್ಲಿ ಉಪಹಾರವಾಗಿ ಸೆವಿಸುವುದರಿಂದ ಸುಲಭವಾಗಿ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

೬. ಓಟ್ ಮೀಲ್ ತನ್ನಲ್ಲಿ ನಾರಿನ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.ಮತ್ತು ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಉತ್ತಮವಾಗಿ ನಿರ್ವಹಣೆ

ಮಾಡುವುದರ ಜೊತೆಗೆ ಹೊಟ್ಟೆ ಹಸಿವನ್ನು ನಿವಾರಣೆ ಮಾಡುವುದರಿಂದ ನಿಮ್ಮ ದೇಹದ ತೂಕ ನಿಯಂತ್ರಣವಾಗುತ್ತದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬೇಕು ಡೈರಿ

ರಹಿತ ಹಾಲು ಅಥವಾ ನೀರಿನೊಂದಿಗೆ ಮಿಕ್ಸ್ ಮಾಡಿ ಸೇವಿಸಿ.ತೂಕ ನಷ್ಟ, ಚರ್ಮ, ರಕ್ತದೊತ್ತಡ, ಮಧುಮೇಹಕ್ಕೆ ಓಟ್ ಮೀಲ್ ರಾಮಬಾಣವಾಗಿದೆ.

೭. ಬಾದಾಮಿ ಬೀಜಗಳು
ಬಾದಾಮಿ ಬೀಜಗಳಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನ ಅಂಶ ಮತ್ತು ಒಳ್ಳೆಯ ಕೊಬ್ಬಿನ ಅಂಶಗಳು ಖಾಲಿ ಹೊಟ್ಟೆಯಲ್ಲಿ ನೀವು ಬಾದಾಮಿ ಬೀಜಗಳನ್ನು

ನೆನೆ ಹಾಕಿ ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ದೀರ್ಘ ಕಾಲದವರೆಗೆ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ. ದೇಹದ ತೂಕ ನಿರ್ವಹಣೆಗೆ ಇದು

ಸಹ ಒಂದು ಅತ್ಯುತ್ತಮ ಆಹಾರ ನೆನೆಸಿದ ಬಾದಾಮಿ ಬೀಜಗಳು ಸೋ ಪವರ್ಫುಲ್

ಇದನ್ನು ಓದಿ: ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು

Exit mobile version