ಪ.ಬಂಗಾಳದಲ್ಲಿ ಮುಖ್ಯಮಂತ್ರಿಯೇ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿ!

ಪಶ್ಚಿಮ ಬಂಗಾಳದಲ್ಲಿ(West Bengal) ಮುಖ್ಯಮಂತ್ರಿಯೇ(ChiefMinister) ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ(Universities) ಕುಲಪತಿಗಳಾಗಲಿದ್ದಾರೆ(Chancellors).

West Bengal

ಹೀಗೊಂದು ಮಸೂದೆಯನ್ನು ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ಟಿಎಂಸಿ ಸರ್ಕಾರ(TMC Government) ಜಾರಿಗೆ ತರಲು ತಯಾರಿ ನಡೆಸಿದೆ. ಸದ್ಯ ರಾಜ್ಯದ ರಾಜ್ಯಪಾಲರು ರಾಜ್ಯಸರ್ಕಾರದ ಅಧೀನದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿರುತ್ತಾರೆ. ಆದರೆ ಅದಕ್ಕೆ ಕಡಿವಾಣ ಹಾಕಿ ಮುಖ್ಯಮಂತ್ರಿಯೇ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಯಾಗುವುದಕ್ಕೆ ನೂತನ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಈ ಮಸೂದೆ ಕುರಿತು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ರಾಜ್ಯದ ಮುಖ್ಯಮಂತ್ರಿಗಳನ್ನೇ ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿಸುವ ಮಸೂದೆಯನ್ನು ಶೀಘ್ರವೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಶಿಕ್ಷಣ ಸಚಿವ ಬ್ರಾತ್ಯ ಬಸು ಮಾದ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಮಂಡಿಸಲು ಹೊರಟಿರುವ ಈ ಮಸೂದೆ ಕುರಿತು ರಾಜ್ಯಪಾಲ ಜಗದೀಪ್ ಧಂಖರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆದೇಶದನ್ವಯ ಈ ಮಸೂದೆಯನ್ನು ಜಾರಿಗೆ ತರಲು ತಯಾರಿ ನಡೆಸಲಾಗಿದೆ. ರಾಜ್ಯಪಾಲರ ಅಧಿಕಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಮಸೂದೆಯೂ ಮಹತ್ವದ ಪಾತ್ರ ವಹಿಸಲಿದೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಸದ್ಯ ರಾಜ್ಯ ಸರ್ಕಾರದ ಅಧೀನದಲ್ಲಿ 17 ವಿಶ್ವವಿದ್ಯಾಲಯಗಳಿವೆ. ಈ ಮಸೂದೆ ಜಾರಿಯಾದರೆ ಈ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿದೆ ಮುಖ್ಯಮಂತ್ರಿಗಳೇ ಅಧಿಕಾರ ಚಲಾಯಿಸಲಿದ್ದಾರೆ. ಇನ್ನು ಈ ಹಿಂದೆ ಇಂಥದ್ದೇ ಮಸೂದೆಯನ್ನು ತಮಿಳುನಾಡಿನಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಪೊನ್ಮುಡಿ ಮಂಡಿಸಿದ್ದರು. ರಾಜ್ಯಪಾಲರು ನೇಮಕವಾದವರು ಆದರೆ ಮುಖ್ಯಮಂತ್ರಿಗಳು ಆಯ್ಕೆಯಾದವರು ಎಂದು ಅವರು ವಾದಿಸಿದ್ದರು.

ಆದರೆ ಅಂತಿಮವಾಗಿ ಮಸೂದೆ ಜಾರಿಯಾಗಿರಲಿಲ್ಲ. ಇನ್ನು ರಾಜ್ಯ ಸರ್ಕಾರದ ನೂತನ ಮಸೂದೆಯನ್ನು ವಿಪಕ್ಷಗಳು ಟೀಕಿಸಿದೆ. ಮುಖ್ಯಮಂತ್ರಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿವೆ.

Exit mobile version