5G ಎಂದರೆ ಅಸಲಿಗೆ ಏನು? ಇದರ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ಓದಿ!

5G

5G ಇಂದಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕೇಳುತ್ತಿರುವ ಶಬ್ದ ಇದೇ ಆಗಿದೆ. ಅದರಲ್ಲೂ ನಿರ್ಮಲಾ ಸೀತಾರಾಮನ್(Nirmala Sitharaman) ಬಜೆಟ್(Budget) ಮಂಡಿಸಿದ ನಂತರ ಈ ಶಬ್ದವನ್ನು ಇನ್ನೂ ಜೋರಾಗಿಯೇ ಕೇಳುತ್ತಿದ್ದೇವೆ. ಅಷ್ಟಕ್ಕೂ ಈ 5G ಅಂದರೇನು? ಇದರಿಂದ ಏನು ಉಪಯೋಗಗಳಿವೆ? ಈ 5G ಬರುವುದರಿಂದ ನಿಜವಾಗಲೂ ಮನುಷ್ಯನನ್ನು ಹೊರೆತುಪಡಿಸಿ ಬೇರೆ ಜೀವ ಸಂಕುಲಗಳಿಗೆ ತೊಂದರೆ ಉಂಟಾಗುತ್ತದೆಯಾ ಎಂಬುದಕ್ಕೆ ಇಲ್ಲಿದೆ ನಿಮಗೆ ಉತ್ತರ.

ಇಂದಿನ 5G ಎಂದರೇನು? :

5G ಎಂದರೆ 5th ಜನರೇಷನ್ ಹೈ ಸ್ಪೀಡ್ ನೆಟ್ ವರ್ಕ್ ಎಂಬ ಅರ್ಥ. ಜಿ ಎಂದರೆ ಅದು ಜನರೇಷನ್ ಅನ್ನು ಸೂಚಿಸುತ್ತದೆ. ಇದನ್ನು ಸೆಲ್ಯುಲಾರ್(Cellular) ನೆಟ್ವರ್ಕಿನ ಅಪ್ಡೇಟ್ ಜನರೇಷನ್(Update Generation) ಎಂದು ಕೂಡ ಕರೆಯುತ್ತಾರೆ. ಅಷ್ಟಕ್ಕೂ ಭಾರತಕ್ಕೆ ನೆಟ್ವರ್ಕ್ ಅನ್ನೋ ವಿಷಯ ಬಂದಿದ್ದೆ 1981 ರಲ್ಲಿ. ಅದರಲ್ಲೂ ಮೊದಲಿಗೆ 1G ಅನ್ನುವ ನೆಟ್ವರ್ಕ್ ಅನ್ನು ಲಾಂಚ್ ಮಾಡಲಾಗುತ್ತದೆ. ಇದನ್ನು ಜಪಾನ್(Japan) 1971 ಬಿಡುಗಡೆ ಮಾಡುತ್ತದೆ. ಈ 1G ಬಂದಾಗ ಕೇವಲ ನಾವು ಫೋನ್ ಕಾಲ್ ಮಾಡಬಹುದಾಗಿತ್ತು. ಆನಂತರ ಬಂದದ್ದು 2G 1992 ರಲ್ಲಿ ಲಾಂಚ್ ಆಗಿದ್ದು. ಇದರಲ್ಲಿ ವಿಶೇಷತೆ ಎಂದರೆ ಕಾಲ್ ಮಾಡುವುದರ ಜೊತೆಗೆ ಸಂದೇಶವನ್ನು ಕೂಡ ರವಾನಿಸಬಹುದಾಗಿತ್ತು.

ಆನಂತರ ಬಂದಿದ್ದೆ 3G 2001ರಲ್ಲಿ. ಇದು ಲಾಂಚ್ ಆಗಿತ್ತು. ಆದರೆ ಇದರಲ್ಲಿ ಕಾಲ್, ಮೆಸೇಜ್, ಇಂಟರ್ನೆಟ್ಟಿನ ಸೌಲಭ್ಯಗಳು ಬಂದಿದ್ದವು. ಆನಂತರ ಈ ಎಲ್ಲಾ ನೆಟ್ವರ್ಕ್ ಗಳನ್ನು ಮೀರಿಸಲು ಬಂದಿದ್ದೇ 4G 2008 ರಲ್ಲಿ ಬಿಡುಗಡೆಯಾಗಿತ್ತು. ಈಗಲೂ ಕೂಡ ನಾವು ಈ 4G ಅನ್ನು ಉಪಯೋಗಿಸುತ್ತಿದ್ದೇವೆ. ಇದರಲ್ಲಿ ಹೊಸದೇನು ಕಂಡು ಬಂದಿಲ್ಲ. ಆದರೆ 1G, 2G ,3G ಗೆ ಹೋಲಿಸಿದರೆ ಈ ನೆಟ್ ವರ್ಕ್ ಸದ್ಯ ಅತಿ ವೇಗವಾಗಿ ಕೆಲಸ ಮಾಡುತ್ತಿದೆ ಹಾಗೂ ಬಳಕೆ ಮಾಡಬಹುದಾಗಿದೆ. ಇದನ್ನು ಮೀರಿಸುವುದಕ್ಕೆ ಲಗ್ಗೆಯಿಡುತ್ತಿರುವುದು ಫಾಸ್ಟ್ ಇಂಟರ್ನೆಟ್‌ 5G. ಇದರ ಸ್ಪೀಡ್ ಬಂದು 1 GBPS(Giga Bits Per Seconds) ನಿಂದ 10 GBPS(Giga Bits Per Seconds),ಅಂದರೆ ಒಂದು ಸೆಕೆಂಡ್ ಗೆ ನಿಮಗೆ ಬೇಕಾದ ಸಿನಿಮಾವನ್ನು ಡೌನ್ ಲೋಡ್ ಮಾಡಬಹುದು. ಅಷ್ಟೂ ಸಾಮರ್ಥ್ಯವನ್ನು ಒಳಗೊಂಡಿದೆ ಈ ನೂತನ 5G ನೆಟ್‌ವರ್ಕ್.

5G ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋಣ :

4G ಬಳಕೆ ಮಾಡುವ ಸಿಗ್ನಲ್ ಬಹಳ ಉದ್ದವಾಗಿರುತ್ತದೆ. ಇದು ದೂರದವರೆಗೂ ಪ್ರಯಾಣ ಮಾಡಬಹುದು. ಯಾವುದೇ ಬಿಲ್ಡಿಂಗ್, ಗಿಡ, ಮರ ಬಂದರೂ ಕೂಡ ಈ ಸಿಗ್ನಲ್ಲನ್ನು ಬ್ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ 5G ದೂರದವರೆಗೂ ಪಯಣ ಮಾಡುವುದಿಲ್ಲ. ಅದರಲ್ಲೂ ಈ ಮರ, ಬಿಲ್ಡಿಂಗ್ ಬಂದರೆ ಸಿಗ್ನಲ್ ಬ್ಲಾಕ್ ಆಗುವ ಚಾನ್ಸ್ ಹೆಚ್ಚಾಗಿ ಇರುತ್ತದೆ. ಹೀಗಾಗಿ ಒಂದು ಏರಿಯಾದಲ್ಲಿ ಒಂದು ಟವರ್ ಅನ್ನು ನಿರ್ಮಿಸಬೇಕಾಗುತ್ತದೆ. ಆದರೆ 4g ಅಲ್ಲಿ ಒಂದು ಕಡೆ ಟವರ್ ಇದ್ದಿದ್ರೆ ಸಾಕಾಗ್ತಿತ್ತು. ಆದರೆ ಇನ್ನು ಮುಂದೆ ಹೀಗೆ ಆಗಲು ಸಾಧ್ಯವಿಲ್ಲ. ಏರಿಯಾ ಗೊಂದು ಟವರ್ ಬರುವ ಸಾಧ್ಯತೆಯಿದೆ.

5Gಯಲ್ಲಿ ಲೇಟೆನ್ಸಿ :

ಈ ಲೇಟೆನ್ಸಿ ಎಂದರೇನು ಎಂದು ಯೋಚನೆ ಮಾಡ್ತಿದ್ದೀರಾ? ಡೇಟಾ ವರ್ಗಾವಣೆ ಅಥವಾ ಟ್ರಾನ್ಸ್ ಫರ್ ಆಗೋ ಟೈಮನ್ನು ನಾವು ಲೇಟೆನ್ಸಿ ಎಂದು ಕರೆಯುತ್ತೇವೆ. ಅದು 4G ಅಲ್ಲಿ 100 m/s ಇರುತ್ತದೆ. ಆದರೆ 5G ಅಲ್ಲಿ 1 m/s ಇರುತ್ತದೆ. 4g ಅಲ್ಲಿ ಹೆಚ್ಚಿನ ಜನ ಒಂದೇ ಕಡೆ ಗುಂಪು ಸೇರಿದರೆ ಅಲ್ಲಿ ಯಾವುದೇ ತರಹದ ಕಾಲ್, ಇಂಟರ್ ನೆಟ್ ಬಳಕೆಯಾಗಲು ಸಾಧ್ಯವಾಗುವುದಿಲ್ಲ. ಆದರೆ 5G ಅಲ್ಲಿ ಎಷ್ಟೇ ಮಂದಿ ಗುಂಪು ಸೇರಿದರು ಈ ತೊಂದರೆ ಬರಲು ಸಾಧ್ಯವಿಲ್ಲ. ಏಕೆಂದರೆ ಇದು ಬ್ರೇಕ್ ಲೆಸ್ ಕಮ್ಯುನಿಕೇಶನ್ ನೆಟ್ವರ್ಕ್ ಎಂದು ಕರೆಯುತ್ತಾರೆ.

ಇಲ್ಲಿವರೆಗೂ ಬಂದ 1G, 2G, 3G, 4G ಅನ್ನು ಕೇವಲ ಮೊಬೈಲ್ ಗಳಿಗೆ ಉಪಯೋಗ ಮಾಡಬಹುದಾಗಿತ್ತು. ಆದರೆ 5G ಬರುವುದರಿಂದ ಕೇವಲ ಮೊಬೈಲಿಗೆ ಮಾತ್ರವಲ್ಲ ಅದನ್ನು ಐಓಟಿ(IOT) ಕೂಡ ಬಳಕೆ ಮಾಡಬಹುದು(Internet of things). ಈ 5G ನೆಟ್ವರ್ಕ್ ನಿಂದ ನಮ್ಮ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳನ್ನು ಇಂಟರ್ನೆಟ್ ಜೊತೆಗೆ ಕನೆಕ್ಟ್ ಮಾಡಬಹುದು. ವಾಷಿಂಗ್ ಮಷಿನ್ ,ಫ್ಯಾನ್, ಎಲ್ಲವನ್ನೂ ಮೊಬೈಲ್ ನಿಂದ ಕಂಟ್ರೋಲ್ ಮಾಡಬಹುದು. ಇದರಿಂದ ತುಂಬಾ ಕ್ಷೇತ್ರಗಳು ಕೂಡ ಅಪ್ ಡೇಟ್ ಆಗುತ್ತದೆ. ಇದರಿಂದ ಸೆಲ್ಫ್ ಡ್ರೈವಿಂಗ್ ಕಾರು ಬರುತ್ತದೆ ಮತ್ತು ಆಪರೇಷನ್ ಸರ್ಜರಿ ಎಲ್ಲಾ ಮೆಷಿನ್ ನಿಂದ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

5G ಬಳಕೆ ಮಾಡುವುದರಿಂದ ಏನು ತೊಂದರೆಯಾಗುತ್ತದೆ? :

5Gಗೆ ಬಳಕೆ ಮಾಡುವ ಸಿಗ್ನಲ್ ಗಳು ಮೈಕ್ರೋವೇವ್ ಮತ್ತು ಇನ್ ಫ್ರಾರೆಡ್ ವೇವ್ ಮದ್ಯದಲ್ಲಿ ಬರುತ್ತದೆ. ಇದು ನಾನ್ ಅಯೊನೈಸೇಷನ್ ಫ್ರೀಕ್ವೆನ್ಸಿ ಎಂಬ ವರ್ಗದಲ್ಲಿ ಬರುತ್ತದೆ. ಒಂದೇ ತರಹದ ಫ್ರೀಕ್ವೆನ್ಸಿಯನ್ನು ಬಳಕೆ ಮಾಡುವುದರಿಂದ ಅಷ್ಟೊಂದು ತೊಂದರೆ ಉಂಟು ಆಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಈ ಸಿಗ್ನಲ್ ಗಳು ಮನುಷ್ಯನ ದೇಹಕ್ಕೆ ತಾಕಿದರೆ ದೇಹ ವೈಬ್ರೇಟ್ ಆಗುತ್ತದೆ. ಆದರೆ ಇದರಿಂದ ಯಾವುದೇ ಡಿಎನ್ಎ ಡ್ಯಾಮೇಜ್ ಆಗುವುದಾಗಲಿ ಅಥವಾ ಸೆಲ್ ವಿನಾಶವಾಗುವುದಿಲ್ಲ ಎಂದು ICNRP ಸಂಸ್ಥೆ ತಿಳಿಸಿದೆ.

5g ಬಳಕೆ ಮಾಡುವುದರಿಂದ ಯಾವುದೇ ಪ್ರಾಣಿ ಪಕ್ಷಿಗಳಿಗೆ ಆಗಲಿ, ಮನುಷ್ಯನಿಗೆ ಆಗಲಿ ತೊಂದರೆ ಆಗುವುದಿಲ್ಲ ಎಂದು ICNRP ಸಂಸ್ಥೆ ತಿಳಿಸಿದೆ. ಹೀಗಾಗಿ 5G ಅನ್ನು ಟೆಲಿಕಾಂ ಕಂಪನಿಗಳು ಭಾರತಕ್ಕೆ ಲಾಂಚ್ ಮಾಡಲಿದೆ. 5G ಬಂದರೆ ಟೆಕ್ನಾಲಜಿಯಲ್ಲಿ ಬೆಳವಣಿಗೆ ಕಾಣುತ್ತದೆ ಮತ್ತು ಇನ್ನಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಕೂಡ ನಾವು ನಮ್ಮ ದೇಶದಿಂದ ದೂರವಿಡಲು ಯಶಸ್ವಿಯಾಗುತ್ತೇವೆ. ಹಾಗಾಗಿ 5G ನಮ್ಮ ದೇಶಕ್ಕೆ ಕಾಲಿಟ್ಟರೆ ತಂತ್ರಜ್ಞಾನದಲ್ಲಿ ನಮ್ಮ ದೇಶ ಇನ್ನೂ ಹೆಚ್ಚಾಗಿ ಬೆಳೆಯುತ್ತದೆ ಹಾಗೂ ಇತರ ದೇಶಗಳೊಂದಿಗೆ ಪೈಪೋಟಿಯನ್ನು ಕೂಡ ಕೊಡುತ್ತದೆ.

Exit mobile version